Movie Release : ಈ ವಾರ ಎರಡು ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಿವೆ.

ಶಶಾಂಕ್ ನಿರ್ದೇಶನದ “Brat” (ಬ್ರ್ಯಾಟ್) ಸಿನಿಮಾ ಅಕ್ಟೋಬರ್ 31 ರಂದು ತೆರೆಗೆ ಬರುತ್ತಿದೆ. ಈ ಚಿತ್ರವು ಕೆಲವು ಬಾರಿ ರಿಲೀಸ್ ದಿನಾಂಕ ಬದಲಾಗಿದ್ದರೂ, ಕೊನೆಗೂ ನಿರ್ಧಾರಗೊಂಡ ದಿನಾಂಕಕ್ಕೆ ಬಿಡುಗಡೆಯಾಗುತ್ತಿದೆ. ಡಾರ್ಲಿಂಗ್ ಕೃಷ್ಣ ಮತ್ತು ಮನಿಷಾ ಕಂದಕೂರ್ ನಟನೆಯ ಈ ಚಿತ್ರ ಆ್ಯಕ್ಷನ್-ಥ್ರಿಲ್ಲರ್ ಶೈಲಿಯಾಗಿದೆ. ಕ್ರಿಕೆಟ್ ವಿಷಯವೂ ಪ್ರಮುಖವಾಗಿರುವ ಈ ಸಿನಿಮಾ, ತನ್ನ ಟೈಟಲ್ ಮತ್ತು ವಿಷಯದ ಮೂಲಕ ಗಮನ ಸೆಳೆಯುತ್ತಿದೆ.
ಬ್ರ್ಯಾಟ್ ಸಿನಿಮಾ ಸಾಂಗ್ ಹಿಟ್
ಬ್ರ್ಯಾಟ್ ಸಿನಿಮಾದ “ನಾನೇ ನಿನ್ನಂತೆ” ಹಾಡು ಈಗಾಗಲೇ ಹಿಟ್ ಆಗಿದೆ. ಶಶಾಂಕ್ ಈ ಹಾಡನ್ನು ಬರೆದು, ಅರ್ಜುನ ಜನ್ಯ ಸಂಗೀತ ನೀಡಿದ್ದಾರೆ. ಸಿದ್ ಶ್ರೀರಾಮ್ ಈ ಹಾಡು ಹಾಡಿದ್ದು, ನಾಯಕ ಡಾರ್ಲಿಂಗ್ ಕೃಷ್ಣ ಮತ್ತು ನಾಯಕಿ ಮನಿಷಾ ಕಂದಕೂರ್ ಮೇಲೆ ಚಿತ್ರೀಕರಿಸಲಾಗಿದೆ. ಶಶಾಂಕ್ ಹಿಂದಿನ “ಲವ್ 360” ಚಿತ್ರದಲ್ಲಿ ಹಿಟ್ ಹಾಡು ನೀಡಿರುವ ಹಿನ್ನೆಲೆಯಲ್ಲಿ, ಈ ಹಾಡು ಅಭಿಮಾನಿಗಳಲ್ಲಿ ಹೆಚ್ಚು ಪ್ರಶಂಸೆ ಪಡೆಯುತ್ತಿದೆ.
ಇದನ್ನು ಓದಿ : ಅಶ್ವಿನಿಗೆ ಹಿಗ್ಗಾಮುಗ್ಗಾ ಜಾಡಿಸಿದ ಕಾವ್ಯ

ಕೋಮಲ್ “ಕೋಣ” ಸಿನಿಮಾ
ಇನ್ನು ಹಾಸ್ಯ ನಟ ಕೋಮಲ್ ಕುಮಾರ್ ಅಭಿನಯದ “Kona” (ಕೋಣ) ಸಿನಿಮಾ ಕೂಡ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಕೋಮಲ್ ಹಾಸ್ಯ ಪಾತ್ರವೊಂದರಲ್ಲಿ ಕಾಣಿಸುತ್ತಾರೆ, ಜೊತೆಗೆ ರೋಬೋಟ್ ಹೊಂದಿರುವ ವಿಭಿನ್ನ ಕಥಾನಕವಿದೆ. ಹರಿ ಕೃಷ್ಣ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಮತ್ತು ಕಥೆಯೂ ಬರೆಯಲಾಗಿದೆ. ಕೋಣ ಚಿತ್ರವನ್ನ ಬಿಗ್ ಬಾಸ್ ಖ್ಯಾತಿಯ ನಟಿ ತನಿಷಾ ಕುಪ್ಪಂಡ ನಿರ್ಮಾಣ ಮಾಡಿದ್ದಾರೆ. ಇವರೇ ಈ ಚಿತ್ರದ ನಾಯಕಿನೂ ಆಗಿದ್ದಾರೆ.

ಕಾಂತಾರ ಚಾಪ್ಟರ್ ಒನ್ ರಿಲೀಸ್ ನೋಡಿಕೊಂಡೇ ಈ ಚಿತ್ರಗಳು ರಿಲೀಸ್ ಪ್ಲಾನ್ ಮಾಡಿವೆ. ಆ ಲೆಕ್ಕದಂತೆ ಇದೀಗ ಕಾಂತಾರ ಅಬ್ಬರ ಒಂದು ಹಂತಕ್ಕೆ ಇದೆ. ಆ ಹಿನ್ನೆಲೆಯಲ್ಲಿಯೇ ಕನ್ನಡದ ಈ ಎರಡೂ ಸಿನಿಮಾಗಳು ಈ ಶುಕ್ರವಾರ (ನಾಳೆ) ತೆರೆಗೆ ಬರ್ತಿವೆ.
ಇದನ್ನು ನೋಡಿ : ಮಧ್ಯಸ್ಥಿಕೆ ವಹಿಸಲು ಹೋದ ಸಚಿವ ZAMEER AHMED ಕುರ್ಚಿಗೆ ಸುತ್ತಿಕೊಳ್ತಾ ಕಂಟಕ..?




