BBK : ಇಂದು ರಾತ್ರಿ ಪ್ರಸಾರವಾಗಲಿರುವ ಸಂಚಿಕೆಯ ಪ್ರೊಮೋವನ್ನು ಕಲರ್ಸ್ ಕನ್ನಡ ರಿಲೀಸ್ ಮಾಡಿದೆ. ಅದರಲ್ಲಿ ಚಟುವಟಿಕೆ ಒಂದರ ವಿಚಾರಕ್ಕೆ ಅಶ್ವಿನಿ ಗೌಡ ಹಾಗೂ ಕಾವ್ಯ ನಡುವೆ ವಾಗ್ವಾದ ನಡೆದಿದೆ.

ಬಿಗ್ ಬಾಸ್ (Bigg Boss) ಮನೆಯಲ್ಲಿ ಸ್ಪರ್ಧಿಗಳ ನಡುವಿನ ಮನಸ್ತಾಪಗಳು ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿವೆ. ಇತ್ತೀಚೆಗೆ ಅಶ್ವಿನಿ ಗೌಡ (Ashwini Gowda) ಮತ್ತು ಕಾವ್ಯ ಶೈವ (Kavya Shaiva) ನಡುವಿನ ಜಗಳವೇ ಚರ್ಚೆಯ ವಿಷಯವಾಗಿದೆ.
“ಅಶ್ವಿನಿ ಗೌಡ ವ್ಯಕ್ತಿ ಆ? ಪವರ್ ಕಾರ್ಡಾ?”
ಸೋಶಿಯಲ್ ಮೀಡಿಯಾದಲ್ಲಿ ಈಗ ಹಬ್ಬಿರುವ ಮಾತೇ ಇದು! ಅಶ್ವಿನಿ ಗೌಡರ ನಡವಳಿಕೆ, ಮಾತಿನ ತೀವ್ರತೆ ಮತ್ತು ಅಟ್ಟಹಾಸ ನೋಡಿ ಪ್ರೇಕ್ಷಕರು “ಅವರು ವ್ಯಕ್ತಿಯೇ? ಅಥವಾ ಪವರ್ ಕಾರ್ಡ್ ಆ?” ಎಂದು ಟ್ರೋಲ್ ಮಾಡುತ್ತಿದ್ದಾರೆ.
ಪ್ರೊಮೋದಲ್ಲಿ ಏನಾಯಿತು?
ಇಂದು ರಾತ್ರಿ ಪ್ರಸಾರವಾಗಲಿರುವ ಸಂಚಿಕೆಯ ಪ್ರೊಮೋವನ್ನು ಕಲರ್ಸ್ ಕನ್ನಡ ಬಿಡುಗಡೆ ಮಾಡಿದೆ. ಅದರಲ್ಲಿ ಚಟುವಟಿಕೆ ವೇಳೆ ಅಶ್ವಿನಿ ಗೌಡ ಮತ್ತು ಕಾವ್ಯ ಶೈವ ನಡುವೆ ಮಾತಿನ ಚಕಮಕಿ ಆರಂಭವಾಗುತ್ತದೆ.
ಮಾತಿಗೆ ಮಾತು – ವಾಗ್ವಾದಕ್ಕೆ ರೂಪಾಂತರ
ಸಾಧಾರಣ ವಾದ ವಿವಾದದಿಂದ ಆರಂಭವಾದ ಮಾತು ಕ್ಷಣಾರ್ಧದಲ್ಲೇ ಭಾರಿ ವಾಗ್ವಾದಕ್ಕೆ ತಿರುಗುತ್ತದೆ. ಕಾವ್ಯ ಶೈವ, ಅಶ್ವಿನಿ ಗೌಡರಿಗೆ ತಕ್ಕ ಪ್ರತಿಕ್ರಿಯೆ ನೀಡಿ ಕೌಂಟರ್ ಕೊಡುತ್ತಾರೆ. ಇಬ್ಬರ ಮಧ್ಯೆ ಉಂಟಾದ ವಾಗ್ಯುದ್ಧದ ವೇಳೆ ಮನೆಯ ವಾತಾವರಣ ಗದ್ದಲಮಯವಾಗುತ್ತದೆ.
ಇದನ್ನು ಓದಿ : ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೇಸ್
ಇಬ್ಬರ ನಡುವಿನ ವಾಗ್ಯುದ್ಧ ಹೀಗಿದೆ
ಅಶ್ವಿನಿ ಗೌಡ: ಚರ್ಚೆಯಲ್ಲಿ ನೀನು ಸರಿ, ನಾನು ತಪ್ಪು ಅಂತಲ್ಲ. ಕೊನೆ ಪಕ್ಷ ಮಾತನ್ನಾಡಿಕೊಳ್ಳಲು ನಮಗೆ ಒಂದು ವೇದಿಕೆ ಸಿಕ್ಕಿತ್ತು. ಅದು ಆಗಿಲ್ಲ ಇವತ್ತು..
ಕಾವ್ಯ ಶೈವ: ನಿಮ್ಮ ಮತ ನನಗೆ ಅವಶ್ಯಕತೆ ಇರಲಿಲ್ಲ..
ಅಶ್ವಿನಿ ಗೌಡ: ಅಲ್ಲ, ಅಲ್ಲ.. ನನಗೂ ಅವಶ್ಯಕತೆ ಇರಲಿಲ್ಲ. ಅದು ನಿಮ್ಮ ವ್ಯಕ್ತಿತ್ವ
ಕಾವ್ಯ ಶೈವ: ನಿಮ್ಗೂ ಇಗೋ ಇತ್ತು. ಬಂದು ಮಾತನ್ನಾಡಲಿಲ್ಲ.
ಅಶ್ವಿನಿ ಗೌಡ: ಬರೀ ಅಶ್ವಿನಿ ಗೌಡ ಹೆಸರು ಹೇಳಿಕೊಂಡು ಪವರ್ ಕಾರ್ಡ್ ಯೂಸ್ ಮಾಡ್ತಿದ್ದೀಯಾ ಅಷ್ಟೇ..
ಕಾವ್ಯ ಶೈವ: ನಿನ್ನ ಹೆಸರು ತೆಗೆದುಕೊಳ್ಳುವ ಅವಶ್ಯಕತೆ ಏನು..?
ಅಶ್ವಿನಿ ಗೌಡ: ನಿನ್ನ ಅನ್ನಬೇಡ..
ಕಾವ್ಯ ಶೈವ: ಏನು..? ನೀನು ರೆಸ್ಪೆಕ್ಟ್ ಕೊಟ್ಟರೆ ನಾನೂ ಕೊಡ್ತೀನಿ.
ಅಶ್ವಿನಿ ಗೌಡ: ಏನು (ಕೈ ತೊರಿಸುತ್ತ)
ಕಾವ್ಯ ಶೈವ: ಗೆಟ್ಲಾಸ್ಟ್
ಅಶ್ವಿನಿ ಗೌಡ: ಅಖಾಡಕ್ಕೆ ಇಳಿ ನೋಡೋಣ. ಯೋಗ್ಯತೆ ಇಲ್ಲ, ಮಾತಾಡಬೇಡ.
ಕಾವ್ಯ ಶೈವ: ನಾನು ಹಿಂಗೇ ಮಾತನ್ನಾಡೋದು.
ಅಶ್ವಿನಿ ಗೌಡ: ನೀನ್ಯಾವಳೇ ಮಾತನ್ನಾಡೋಕೆ..
ಪ್ರೇಕ್ಷಕರ ಪ್ರತಿಕ್ರಿಯೆ
ಪ್ರೊಮೋ ಹೊರಬಿದ್ದ ತಕ್ಷಣ ಪ್ರೇಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ಕಾವ್ಯ ಶೈವ ಅವರ ಶಾಂತ ಧೋರಣೆಯನ್ನು ಮೆಚ್ಚಿದ್ದರೆ, ಕೆಲವರು ಅಶ್ವಿನಿ ಗೌಡರ ತೀವ್ರ ಪ್ರತಿಕ್ರಿಯೆಗೂ ಬೆಂಬಲ ನೀಡಿದ್ದಾರೆ.
ಇದನ್ನು ನೋಡಿ : ಮತ್ತೆ ಹೆಚ್ಚಾಯ್ತು ಕನ್ನಡ ನಾಮಫಲಕದ ಕಿಚ್ಚು – ಕಡ್ಡಾಯ ನಾಮಫಲಕ ಹಾಕುವಂತೆ ಒತ್ತಾಯ




