Bengaluru : ಸ್ಯಾಂಡಲ್ವುಡ್ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ ನಗರ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Bengaluru : ಸ್ಯಾಂಡಲ್ವುಡ್ನ ಆ್ಯಕ್ಷನ್ ಪ್ರಿನ್ಸ್ ನಟ ಧ್ರುವ ಸರ್ಜಾ ವಿರುದ್ಧ ನಗರ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಧ್ರುವ ಸರ್ಜಾ ನಿವಾಸದ ಬಳಿ ವಾಸವಾಗಿರುವ ಮನೋಜ್ ಎಂಬವರು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ. ಧ್ರುವ ಸರ್ಜಾ ನಿವಾಸದ ಪಕ್ಕದಲ್ಲೇ ಮನೋಜ್ ವಾಸವಾಗಿದ್ದು, ಅಭಿಮಾನಿಗಳ ಅಸಭ್ಯ ವರ್ತನೆಯೇ ಈ ದೂರಿನ ಮೂಲ ಕಾರಣವಾಗಿದೆ.
ಯಾಕೆ ದೂರು..?
ಧ್ರುವ ಸರ್ಜಾ ಅವರನ್ನು ನೋಡುವ ಉತ್ಸಾಹದಲ್ಲಿ ಪ್ರತಿದಿನ ನೂರಾರು ಅಭಿಮಾನಿಗಳು ಬನಶಂಕರಿಗೆ ಬರುತ್ತಿದ್ದಾರೆ. ಆದರೆ, ಅವರ ಈ ಭೇಟಿ ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿ ಉಂಟುಮಾಡುತ್ತಿದೆ.
ಇದನ್ನು ಓದಿ : ಮರಕ್ಕೆ ಗೂಡ್ಸ್ ಡಿಕ್ಕಿಯಾಗಿ ಮೂವರ ದುರ್ಮರಣ
ಆರೋಪ ಏನು?
ಮನೆ ಮುಂದೆ ದಿನ ನಿತ್ಯವು ಧ್ರುವ ಸರ್ಜಾ ಅಭಿಮಾನಿಗಳು ಬರುತ್ತಾರೆ. ಬಂದವರು ಮನೆಯ ಎದುರಿಗೆ ಬೈಕ್ಗಳನ್ನು ಪಾರ್ಕ್ ಮಾಡುತ್ತಾರೆ. ಅಷ್ಟೇ ಅಲ್ಲದೇ ಅಲ್ಲೇ ಧೂಮಪಾನ ಮಾಡುತ್ತಾರೆ. ಜೊತೆಗೆ ಮನೆಯ ಗೋಡೆಯ ಮೇಲೆ ಉಗಿಯುವುದನ್ನ ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಕಿರಿ-ಕಿರಿ ಉಂಟಾಗುತ್ತಿದೆ ಎಂದು ಮನೋಜ್ ಆರೋಪಿಸಿದ್ದಾರೆ.

ದೂರು ಯಾರ ವಿರುದ್ಧ?
ಮನೋಜ್ ಅವರು ಧ್ರುವ ಸರ್ಜಾ ಹಾಗೂ ಅವರ ಅಭಿಮಾನಿಗಳ ಜೊತೆಗೆ ಧ್ರುವ ಸರ್ಜಾರ ಮ್ಯಾನೇಜರ್ ವಿರುದ್ಧವೂ ದೂರು ದಾಖಲಿಸಿದ್ದಾರೆ.
ಪೊಲೀಸರ ಕ್ರಮ
ಬನಶಂಕರಿ ಪೊಲೀಸರು ಈ ಪ್ರಕರಣದ ಕುರಿತು ಎನ್ಸಿಆರ್ (Non-Cognizable Report) ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರೆಸಿದ್ದಾರೆ.

ಇದನ್ನು ನೋಡಿ : ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಕೇಸ್..! ಯಾಕೆ ಏನಾಯ್ತು..?




