Women’s World Cup 2025: ವುಮೆನ್ಸ್ ವರ್ಲ್ಡ್ಕಪ್ ನಾಕೌಟ್ ಪಂದ್ಯಗಳು ಅಕ್ಟೋಬರ್ 29 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರ್ತಿ ಗಾಯಗೊಂಡಿರುವುದು ಇದೀಗ ಹರ್ಮನ್ಪ್ರೀತ್ ಕೌರ್ ಪಡೆಯ ಚಿಂತೆಯನ್ನು ಹೆಚ್ಚಿಸಿದೆ.

Women’s World Cup 2025 : ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಮುನ್ನ ಟೀಮ್ ಇಂಡಿಯಾಗೆ ಭಾರೀ ಆಘಾತ ತಗುಲಿದೆ. ತಂಡದ ಪ್ರಮುಖ ಆರಂಭಿಕ ಬ್ಯಾಟರ್ ಪ್ರತಿಕಾ ರಾವಲ್ ಗಂಭೀರ ಗಾಯಕ್ಕೆ ಒಳಗಾಗಿದ್ದಾರೆ. ಬಾಂಗ್ಲಾದೇಶದ ವಿರುದ್ಧ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಪ್ರತಿಕಾ ಜಾರಿ ಬಿದ್ದು ಗಾಯಗೊಂಡರು. ತಕ್ಷಣವೇ ಅವರಿಗೆ ವೈದ್ಯಕೀಯ ಚಿಕಿತ್ಸೆ ಪಡೆದು ಪಂದ್ಯವನ್ನು ಅರ್ಧದಲ್ಲೇ ತೊರೆದಿದ್ದರು. ನಂತರ ನಡೆದ ಬ್ಯಾಟಿಂಗ್ ವೇಳೆ ಅವರು ಮೈದಾನಕ್ಕಿಳಿದಿರಲಿಲ್ಲ.
ಇನ್ನು ಪ್ರತಿಕಾ ರಾವಲ್ ಈ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಯಶಸ್ಸಿನ ಪ್ರಮುಖ ಕಾರಣಗಳಲ್ಲಿ ಒಬ್ಬರು. ಅವರು ಈವರೆಗೆ ಆಡಿದ 6 ಇನಿಂಗ್ಸ್ಗಳಲ್ಲಿ ಒಟ್ಟು 308 ರನ್ಗಳನ್ನು ಕಲೆಹಾಕಿ ಸ್ಥಿರ ಪ್ರದರ್ಶನ ನೀಡಿದ್ದರು. ಅವರ ಉತ್ತಮ ಫಾರ್ಮ್ನಿಂದ ಭಾರತ ತಂಡ ಸೆಮಿಫೈನಲ್ ಹಂತ ತಲುಪಿತ್ತು. ಆದರೆ ಇದೀಗ ಸೆಮಿಫೈನಲ್ ಮುನ್ನ ಅವರ ಗಾಯದಿಂದ ಬಳಲುತ್ತಿರುವುದು ತಂಡದ ಕಳವಳ ಹೆಚ್ಚಿಸಿದೆ. ವೈದ್ಯಕೀಯ ವರದಿ ಬರುವವರೆಗೂ ಅವರು ಮುಂದಿನ ಪಂದ್ಯದಲ್ಲಿ ಆಡುವ ವಿಷಯ ಸ್ಪಷ್ಟವಾಗಿಲ್ಲ.
ಇದನ್ನೂ ಓದಿ : Bengaluru: ಹಿಟ್ ಅಂಡ್ ರನ್ ಆರೋಪಕ್ಕೆ ನಟಿ ದಿವ್ಯಾ ಸುರೇಶ್ ವಿಡಿಯೋ ಮೂಲಕ ಪ್ರತಿಕ್ರಿಯೆ..!
ಇನ್ನು ಮಹಿಳಾ ಏಕದಿನ ವಿಶ್ವಕಪ್ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದೆ. ಅಕ್ಟೋಬರ್ 30 ರಂದು ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಸಂಪೂರ್ಣ ಫಿಟ್ನೆಸ್ ಸಾಧಿಸಿದರೆ ಮಾತ್ರ ಪ್ರತಿಕಾ ರಾವಲ್ ಕಣಕ್ಕಿಳಿಯಲಿದ್ದಾರೆ.
MUST WATCH : ಸಾರ್ವಜನಿಕರ ಮೇಲೆ ಪೊಲೀಸರ ದರ್ಪ?- ಹಿಗ್ಗಾಮುಗ್ಗಾ ಥಳಿಸಿದ ಖಾಕಿ ಮೇಲೆ ಆಕ್ರೋಶ | TUMAKURU NEWS




