Karur Stampede : ನಟ, ರಾಜಕಾರಣಿ ವಿಜಯ್ ಅವರ ಚುನಾವಣಾ ರ್ಯಾಲಿಯ ವೇಳೆ ಸಂಭವಿಸಿದ ಕರೂರು ಕಾಲ್ತುಳಿತ ದುರಂತದ ತನಿಖೆಯನ್ನು CBI ವಹಿಸಿಕೊಂಡಿದೆ.

ಸೆಪ್ಟೆಂಬರ್ 27 ರಂದು ತಮಿಳುನಾಡಿನ ಕರೂರಿನಲ್ಲಿ ನಟ ಮತ್ತು ರಾಜಕಾರಣಿ ವಿಜಯ್ ನೇತೃತ್ವದಲ್ಲಿ ನಡೆದ ರಾಜಕೀಯ ರ್ಯಾಲಿಯಲ್ಲಿ ಸಂಭವಿಸಿದ ಕರೂರು ಕಾಲ್ತುಳಿತದ ಪ್ರಕರಣವನ್ನು ಕೇಂದ್ರ ತನಿಖಾ ದಳ (CBI) ಈಗ ವಹಿಸಿಕೊಂಡಿದೆ.
ಇನ್ನು ಸ್ಥಳಕ್ಕೆ ಕೇಂದ್ರ ತನಿಖಾ ದಳ (CBI) ತಂಡ ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಲ್ತುಳಿತದ ಪರಿಣಾಮ
ಇನ್ನು ಈ ಕಾಲ್ತುಳಿತದ ಪರಿಣಾಮವಾಗಿ 41 ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರಂತವು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ.

ತನಿಖೆ ವರ್ಗಾವಣೆ ಹಿನ್ನೆಲೆ
ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಲಗಂ ಪಕ್ಷ ಸ್ವತಂತ್ರ ತನಿಖೆಗೆ ಕೋರಿ ಅರ್ಜಿ ಸಲ್ಲಿಸಿದ್ದರು. ಪಕ್ಷದ ಅಭಿಪ್ರಾಯವೇನಂದರೆ, SIT (Special Investigation Team) ನಲ್ಲಿ ತಮಿಳುನಾಡು ಪೊಲೀಸರೇ ಇದ್ದು, ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ.
ಈ ಅರ್ಜಿ ವಿಚಾರಣೆಯ ನಂತರ ಸುಪ್ರೀಂ ಕೋರ್ಟ್ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಆದೇಶಿಸಿತ್ತು.
ಇದನ್ನು ಓದಿ : ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ
ತನಿಖೆ ಮೇಲ್ವಿಚಾರಣೆ
ಸುಪ್ರೀಂ ಕೋರ್ಟ್, ಈ ತನಿಖೆಯನ್ನು ಮೇಲ್ವಿಚಾರಣೆ ಮಾಡಲು ನಿವೃತ್ತ ನ್ಯಾಯಾಧೀಶ ಅಜಯ್ ರಸ್ತೋಗಿ ಅವರ ಅಧ್ಯಕ್ಷತೆಯಲ್ಲಿ ಮೂರು ಸದಸ್ಯರ ಸಮಿತಿಯನ್ನು ರಚಿಸಿದೆ. ಸಮಿತಿಯು ತನಿಖೆಯ ಪ್ರಗತಿ ಮತ್ತು ಪರಿಶೀಲನೆಗಾಗಿ ನಿಗಾ ವಹಿಸುತ್ತದೆ.

ಇದನ್ನು ನೋಡಿ : ಕರೂರು ಕಾಲ್ತುಳಿತ ದುರಂತದ ತನಿಖೆ ಆರಂಭಿಸಿದ ಸಿಬಿಐ




