Suicide : ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ನಲ್ಲಿ ನಡೆದಿದೆ.

ಬೀದರ್ ಜಿಲ್ಲೆಯ ಔರಾದ್ (ಬಿ) ತಾಲ್ಲೂಕಿನ ಖಾನಾಪುರ್ ಗ್ರಾಮದಲ್ಲಿ ಶನಿವಾರ (ನೆನ್ನೆ) ಬೆಳಗ್ಗೆ ಕೃಷಿ ಸಾಲ ಬಾಧೆ ತಾಳಲಾರದೆ ರೈತ ರವೀಂದ್ರ ಕುಂಬಾರಗೆರೆ (30) ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ರವೀಂದ್ರ ತಮ್ಮ ಜಮೀನಿನಲ್ಲಿ ಸೋಯಾ ಮತ್ತು ತೊಗರಿ ಬೆಳೆ ಬೆಳೆಯುತ್ತಿದ್ದರು. ಇನ್ನು ಇತ್ತೀಚೆಗೆ ಬೀದರ್ನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಳೆ ನಾಶವಾಗಿದ್ದು, ಅವರ ಮೇಲೆ ಆರ್ಥಿಕ ಸಂಕಷ್ಟ ಮೂಡಿಸಿದೆ ಎಂದು ತಿಳಿದುಬರುತ್ತಿದೆ.
ಇದನ್ನು ಓದಿ : ರಾಶಿಕಾ ಶೆಟ್ಟಿಗೆ ಎಚ್ಚಕೆಗೆ ನೀಡಿದ ಸುದೀಪ್
ಇನ್ನು ಅವರು ಈ ಕೃಷಿಗಾಗಿ ಬ್ಯಾಂಕ್ ಮತ್ತು ಖಾಸಗಿ ಮೂಲಗಳಿಂದ ಸಾಲ ಪಡೆದಿದ್ದರೂ, ಅದನ್ನು ತೀರಿಸಲು ಮಾರ್ಗ ಕಂಡುಹಿಡಿಯಲಾಗದೆ ಮನನೊಂದು ಶನಿವಾರ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಈ ಘಟನೆ ಕುರಿತು ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನು ನೋಡಿ : ಸಾಲಬಾಧೆ: ರೈತ ಆತ್ಮಹತ್ಯೆ




