BBK 12 : ಬಿಗ್ಬಾಸ್ ಮನೆಯಲ್ಲಿ ಮತ್ತೊಂದು ಅವಾಚ್ಯ ಶಬ್ದ ಕೇಳಿ ಬಂದಿದೆ. ಕಾಕ್ರೂಚ್ ಸುಧಿ ಕೂಡ ಸ್ಪರ್ಧಿ ರಕ್ಷಿತಾಗೆ ‘ಸೆಡೆ’ಅನ್ನೋ ಶಬ್ಧ ಬಳಿಸಿದ್ದಾರೆ.

BBK 12 ಬಿಗ್ಬಾಸ್ ಮನೆಯಲ್ಲಿ ಸ್ಫರ್ಧಿಗಳು ಹೀಟ್ ಆಫ್ ದಿ ಮೂಮೆಂಟ್ನಲ್ಲಿ ಅವಾಚ್ಯ ಶಬ್ಧಗಳನ್ನು ಬಳಸುತ್ತಿದ್ದಾರೆ. ಬಳಸುವ ಪದಗಳು ಅವಾಚ್ಯ ಅಲ್ಲದಿದ್ದರೂ ಕೇಳಲು ಅಷ್ಟೇನೂ ಕೆಟ್ಟದ್ದು ಅನಿಸುತ್ತದೆ.
ಹೀಗಾಗಿ ಮನೆಯಲ್ಲಿಯೇ ವಿರೊಧ ವ್ಯಕ್ತವಾಗುತ್ತಿದೆ. ಇದೀಗ ಕಾಕ್ರೂಚ್ ಸುಧಿ ಮಾತು ಅಸಮಾಧಾನಕ್ಕೆ ಕಾರಣವಾಗಿದೆ.
ಕಾಕ್ರೂಚ್ ಸುಧಿಯ ವರ್ತನೆಗೆ ಮನೆ ಮಂದಿಯಲ್ಲಿ ಆಕ್ರೋಶ
ಈ ನಡುವೆ ಕಾಕ್ರೂಚ್ ಸುಧಿ ಮಾತನಾಡುವ ಶೈಲಿಯೂ ಮನೆಯಲ್ಲಿ ಅಸಮಾಧಾನ ಉಂಟುಮಾಡಿದೆ. ಇತ್ತೀಚೆಗೆ, ಮನೆಗೆ ಮತ್ತೊಂದು ಅವಾಚ್ಯ ಶಬ್ದ “ಸೆಡೆ” ಬಳಕೆಯಾಗಿದ್ದು, ಕಾಕ್ರೂಚ್ ಸುಧಿ ಅದನ್ನು ಸ್ಪರ್ಧಿಗಳ ಎದುರಿಗೆ ಉಲ್ಲೇಖಿಸಿದ್ದಾರೆ. ಈ ಕಾರಣದಿಂದ ಮನೆ ಮಂದಿಯವರಲ್ಲಿ ಅಸಮಾಧಾನ ಮತ್ತು ವಿರೋಧ ಉಂಟಾಗಿದೆ.
ಇದನ್ನು ಓದಿ : Kantara Chapter 1 ವಿಶ್ವ ಬಾಕ್ಸ್ ಆಫೀಸ್ ಲೆಕ್ಕ ನೀಡಿದ ಹೊಂಬಾಳೆ ಫಿಲ್ಮ್ಸ್

ಸಹ ಸ್ಪರ್ಧಿಗಳು ವಿರೋಧ ವ್ಯಕ್ತಪಡಿಸಿದ್ದಾರೆ
ಮನೆ ಕೆಲಸದ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ, ಕಾಕ್ರೂಚ್ ಸುಧಿಯು ಸಹ ಸ್ಪರ್ಧಿ ರಕ್ಷಿತಾಳನ್ನು ಕರೆದರು. ಆದರೆ ಆಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಇದರಿಂದ ಕಾಕ್ರೂಚ್ ಸುಧಿಯ ಸಿಟ್ಟು ಏರಿಕೆಯಾಗಿದೆ ಮತ್ತು “ಇವಳ್ಯಾರೋ ನಿನ್ನೆ ಮೊನ್ನೆ ಬಂದ ‘ಸೆಡೆ’ ಹತ್ತು ಸಾರಿ ಕರೆದ್ದರು ತಿರುಗಿ ನೋಡಲ್ಲ” ಎಂದು ಮನೆಯಲ್ಲಿ ಹೇಳಿದರು. ಈ ವರ್ತನೆ ಮನೆಯ ಕೆಲವು ಸ್ಪರ್ಧಿಗಳಿಗೆ ಕೋಪ ತಂದಿದ್ದು, ಗಿಲ್ಲಿ ಮತ್ತು ಜಾಹ್ನವಿ ನೇರವಾಗಿ ವಿರೋಧ ವ್ಯಕ್ತಪಡಿಸಿದರು.
ಮರ್ಯಾದೆ ಉಲ್ಲಂಘನೆ: ಬೆದರಿಕೆ ವ್ಯಕ್ತಪಡಿಸಿದ ಕಾಕ್ರೂಚ್ ಸುಧಿ
ಗಿಲ್ಲಿ ಮತ್ತು ಜಾಹ್ನವಿ ವಿರುದ್ಧವೂ ಕಾಕ್ರೂಚ್ ಸುಧಿ “ನಮಗೂ ಬೆಲೆ ಇದೆ, ನಾನು ಯಾಕೇ ಕರಿಬೇಕು, ಅವರು ಮಧ್ಯೆ ಮಾತನಾಡಿದರೆ ನಾಲಿಗೆ ಸೀಳಿ ಬಿಡ್ತೀನಿ” ಎಂದು ಬೆದರಿಕೆಯ ಸೂಚನೆ ನೀಡಿದ್ದು, ಮನೆಲ್ಲಿಯೇ ಗೊಂದಲವನ್ನು ಹೆಚ್ಚಿಸಿದೆ. ಇದರ ಪರಿಣಾಮವಾಗಿ, ಕಾಕ್ರೂಚ್ ಸುಧಿಯ ಅತಿರೇಖದ ವರ್ತನೆ ಮನೆಯಲ್ಲಿ ಅಸಮಾಧಾನ ಸೃಷ್ಟಿಸಿದೆ.

ಇದನ್ನು ನೋಡಿ : ಸೆಡೆ, ನಾಲಿಗೆ ಸೀಳಿ ಬಿಡ್ತೀನಿ.. ಅಯ್ಯೋ ಕಾಕ್ರೂಚ್ ಸುಧಿ ಮಾತುಗಳಿಗೆ ಸ್ಪರ್ಧಿಗಳು ಫುಲ್ ಶಾಕ್!




