KRS DAM : ನಾಡಿಗೆ ನೀರುಣಿಸುವ ಮಂಡ್ಯ ಜಿಲ್ಲೆಯ ಕೆಆರ್ಎಸ್ ಜಲಾಶಯ, ಈ ವರ್ಷ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿದೆ.

ನಾಡಿಗೆ ನೀರುಣಿಸುವ ಮಂಡ್ಯ ಜಿಲ್ಲೆಯ ಕೆಆರ್ಎಸ್ ಜಲಾಶಯ, ಈ ವರ್ಷ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿದೆ. ಮಂಡ್ಯ ಜಿಲ್ಲೆಯ ಹೆಮ್ಮೆ ಆಗಿರುವ ಈ ಅಣೆಕಟ್ಟು, ಒಂದೇ ವರ್ಷದಲ್ಲಿ ಮೂರನೇ ಬಾರಿಗೆ ಸಂಪೂರ್ಣ ಭರ್ತಿಯಾಗಿ, ಇತಿಹಾಸ ನಿರ್ಮಾಣ ಮಾಡಿದೆ.
ಉತ್ತಮ ಮಳೆಯ ಪರಿಣಾಮ
ಈ ವರ್ಷ ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ, ಕೆಆರ್ಎಸ್ ಜಲಾಶಯವು ನಿರಂತರವಾಗಿ ನೀರಿನಿಂದ ತುಂಬಿಕೊಂಡಿದೆ. ಸಾಮಾನ್ಯವಾಗಿ ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ಡ್ಯಾಂ ತುಂಬುತ್ತಿದ್ದು, ಈ ಬಾರಿ ಜೂನ್ನಲ್ಲೇ ಸಂಪೂರ್ಣ ಭರ್ತಿಯಾಗಿದೆ. ಇದೀಗ ಹಿಂಗಾರು ಮಳೆಯಲ್ಲಿಯೂ ಮತ್ತೆ ನೀರಿನ ಮಟ್ಟ ಗರಿಷ್ಠ ಮಟ್ಟ ತಲುಪಿದೆ.

124.80 ಅಡಿ ಸಾಮರ್ಥ್ಯ – 20 ಸಾವಿರ ಕ್ಯೂಸೆಕ್ಸ್ ನೀರಿನ ಬಿಡುಗಡೆ
124.80 ಅಡಿಗಳ ಸಾಮರ್ಥ್ಯ ಹೊಂದಿರುವ ಈ ಅಣೆಕಟ್ಟಿನಿಂದ ಸದ್ಯ 20,000 ಕ್ಯೂಸೆಕ್ಸ್ಗೂ ಹೆಚ್ಚು ನೀರು ಕಾವೇರಿ ನದಿಗೆ ಬಿಡುಗಡೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ ತೀರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕಾವೇರಿ ನೀರಾವರಿ ನಿಗಮ ಎಚ್ಚರಿಕೆ ನೀಡಿದೆ.
ರೈತರಿಗೆ ಸಂತಸ – ಮಂಡ್ಯ ಭೂಮಿಗೆ ಸಂತೃಪ್ತಿ
ಕೆಆರ್ಎಸ್ ಡ್ಯಾಂ ಸಂಪೂರ್ಣ ಭರ್ತಿಯಾಗುವುದರಿಂದ ಮಂಡ್ಯ ಜಿಲ್ಲೆಯ ರೈತರು ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ. ಕಾವೇರಿ ನೀರಿನ ಸರಬರಾಜು ಖಾತರಿಯಾಗಿದ್ದರಿಂದ ಕೃಷಿ ಚಟುವಟಿಕೆಗಳಿಗೆ ಹೊಸ ಉತ್ಸಾಹ ಬಂದಿದೆ.
ಇದನ್ನು ಓದಿ : ಬಿಗ್ ಬಾಸ್ 12ರ ಮೊದಲ ಕ್ಯಾಪ್ಟನ್ ಆದ ರಘು

ಕಾವೇರಿ ಆರತಿ – ನದಿಗೆ ನಮನ
ಇತ್ತೀಚೆಗೆ ಇದೇ ಜಲಾಶಯದಲ್ಲಿ ಸರ್ಕಾರದ ವತಿಯಿಂದ ಕಾವೇರಿ ಆರತಿ ವಿಜೃಂಭಣೆಯಿಂ ದ ನೆರವೇರಿತು. ನದಿತಾಯಿಗೆ ನಮನ ಸಲ್ಲಿಸಿದ ಈ ಕಾರ್ಯಕ್ರಮದಲ್ಲಿ ಸ್ಥಳೀಯರು ಹಾಗೂ ಭಕ್ತರು ಉತ್ಸಾಹದಿಂದ ಭಾಗವಹಿಸಿದರು.
ಇನ್ನುಈ ವರ್ಷ ಮೂರನೇ ಬಾರಿಗೆ ಕೆಆರ್ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗಿರುವುದು ನಾಡಿನ ರೈತರಿಗೂ, ಜನರಿಗೂ ಹಬ್ಬದ ಸಂಭ್ರಮ ತಂದಿದೆ.

ಇದನ್ನು ನೋಡಿ : ವಿಶಿಷ್ಟ ದಾಖಲೆ ಬರೆದ ಕೃಷ್ಣರಾಜಸಾಗರ ಜಲಾಶಯ




