Neeraj Chopra : ಭಾರತದ ಗೋಲ್ಡನ್ ಬಾಯ್ ಎಂದೇ ಖ್ಯಾತರಾಗಿರುವ ಜಾವೆಲಿನ್ ಥ್ರೋ ಹೀರೋ ನೀರಜ್ ಚೋಪ್ರಾ ಅವರಿಗೆ ಮಹತ್ವದ ಗೌರವ ಸಂದಿದೆ. ರಾಷ್ಟ್ರಕ್ಕೆ ನೀಡಿದ ಕೊಡುಗೆಗಳಿಗಾಗಿ, ಅವರಿಗೆ ಪ್ರಾದೇಶಿಕ ಸೇನೆಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಪ್ರದಾನ ಮಾಡಲಾಗಿದೆ.

Neeraj Chopra: ಭಾರತದ ಅಥ್ಲೆಟಿಕ್ಸ್ ನಾಯಕ, ಜಾವೆಲಿನ್ ಥ್ರೋ ದಿಗ್ಗಜ ಹಾಗೂ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೆ ಭಾರತೀಯ ಪ್ರಾದೇಶಿಕ ಸೇನೆಯು ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಿ ಮಹತ್ತರ ಗೌರವ ನೀಡಿದೆ. ದೆಹಲಿಯಲ್ಲಿ ನಡೆದ ಈ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಂದ ಲೆಫ್ಟಿನೆಂಟ್ ಕರ್ನಲ್ ಹುದ್ದೆಯ ಚಿಹ್ನೆಯನ್ನು ನೀರಜ್ ಚೋಪ್ರಾ ಅವರಿಗೆ ಪ್ರಧಾನ ಮಾಡಲಾಯಿತು.
ಹರಿಯಾಣದ ಪಾಣಿಪತ್ನ ಖಂದ್ರಾ ಗ್ರಾಮದಲ್ಲಿ ಡಿಸೆಂಬರ್ 24, 1997ರಂದು ಜನಿಸಿದ ನೀರಜ್ ಚೋಪ್ರಾ, 2016ರಲ್ಲಿ ನೈಬ್ ಸುಬೇದಾರ್ ಆಗಿ ಸೇನೆಗೆ ಸೇರಿದ್ದರು. ನಂತರ 2021ರಲ್ಲಿ ಸುಬೇದಾರ್ ಹಾಗೂ 2022ರಲ್ಲಿ ಸುಬೇದಾರ್ ಮೇಜರ್ ಹುದ್ದೆಗೆ ಬಡ್ತಿ ಪಡೆದಿದ್ದರು. ಕಳೆದ ತಿಂಗಳು ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ನೀರಜ್ ನಿರೀಕ್ಷಿತ ಪ್ರದರ್ಶನ ನೀಡಲಾಗದೆ, 84.03 ಮೀಟರ್ ದೂರ ಎಸೆದು ಅಗ್ರ 6ರಲ್ಲೂ ಸ್ಥಾನ ಪಡೆಯದೇ ವಿಫಲರಾಗಿದ್ದರು.

ಇದನ್ನೂ ಓದಿ : Mandya: ಜಮೀನಿನಲ್ಲಿ ಉಳುಮೆ ಮಾಡುವ ವೇಳೆ ಹೃದಯಾಘಾತ ರೈತ ಸಾವು..!
ಇನ್ನು ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ ಮತ್ತು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗಳಿಸುವ ಮೂಲಕ ಭಾರತದ ಕ್ರೀಡಾ ಇತಿಹಾಸದಲ್ಲಿ ಅಮೋಘ ಸಾಧನೆ ಮಾಡಿರುವ ನೀರಜ್ ಚೋಪ್ರಾ, ಅರ್ಜುನ ಪ್ರಶಸ್ತಿ ಮತ್ತು ಖೇಲ್ ರತ್ನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಈ ವೇಳೆ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಹಾಗೂ ಇತರೆ ಹಿರಿಯ ಸೇನಾ ಅಧಿಕಾರಿಗಳು ಸೇರಿದಂತೆ ನೀರಜ್ ಅವರ ತಂದೆ ಸತೀಶ್ ಚೋಪ್ರಾ, ತಾಯಿ ಸರೋಜ್ ದೇವಿ, ಪತ್ನಿ ಹಿಮಾನಿ ಹಾಗೂ ಚಿಕ್ಕಪ್ಪ ಭೀಮ್ ಚೋಪ್ರಾ ಉಪಸ್ಥಿತರಿದ್ದರು.
MUST WATCH : BJPಯ ಭಿನ್ನಮತಕ್ಕೆ ಮದ್ದು ಅರೆದ್ರಾ PREETAM GOWDA?- SOMANNA ಕಾರ್ಯಕ್ರಮದಲ್ಲಿ ಒಗ್ಗಟ್ಟು ಪ್ರದರ್ಶನ |TUMKUR NEWS




