MANDYA : ಜಮೀನಲ್ಲಿ ಉಳುಮೆ ಮಾಡುವ ವೇಳೆ ಹೃದಯಾಘಾತವಾಗಿ ರೈತ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಎಸ್ಐ ಕೋಡಿಹಳ್ಳಿ ಗ್ರಾಮದಲ್ಲಿ ಘಟನೆ ಜರುಗಿದೆ.

MANDYA: ಮಂಡ್ಯ ಜಿಲ್ಲೆಯ ಎಸ್ಐ ಕೋಡಿಹಳ್ಳಿ ಗ್ರಾಮದಲ್ಲಿ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಹೃದಯಾಘಾತವಾಗಿ ರೈತನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು ಶಿವಣ್ಣಗೌಡ (55) ಎಂದು ಗುರುತಿಸಲಾಗಿದೆ.
ಇನ್ನು ಶಿವಣ್ಣಗೌಡ ಅವರು ತಮ್ಮ ಜಮೀನಿನಲ್ಲಿ ಇಪ್ಪನೇರಳೆ ಕಟ್ಟಿಗೆ ಉಳುಮೆ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡು, ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದು, ವೈದ್ಯರು ದೃಢಪಡಿಸಿದ್ದಾರೆ.
ಇದನ್ನೂ ಓದಿ : Doddaballapura: ಮೆಣಸಿ ಗೇಟ್ ಬಳಿ ದ್ವಿಚಕ್ರ ವಾಹನ- ಕಾರು ಡಿಕ್ಕಿ- ಬೈಕ್ ಸವಾರ ಸ್ಥಳದಲ್ಲೇ ಸಾವು..!
ಶಿವಣ್ಣಗೌಡ ರೇಷ್ಮೆ ಬೆಳೆದು ಜೀವನ ನಡೆಸುತ್ತಿದ್ದವರಾಗಿದ್ದು, ತಮ್ಮ ಕುಟುಂಬದ ಆರ್ಥಿಕ ಭದ್ರತೆಯ ಅಡಿಗಲ್ಲಾಗಿದ್ದರು. ಇನ್ನು ವಿಷಯ ತಿಳಿದು ಸಂಬಂಧಿತ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
MUST WATCH : KARNAKATAKA RAIN ALERT | ವಾಯು ಭಾರ ಕುಸಿತ ವರುಣಾರ್ಭಟ – ಎಲ್ಲೆಲ್ಲಿ ಮಳೆ ಅಬ್ಬರ ಜೋರಾಗಿದೆ




