Kantara 1 : ದೇಶವ್ಯಾಪಿ ಯಶಸ್ಸು ಕಂಡ ಕನ್ನಡ ಚಿತ್ರ ಕಾಂತಾರ ಚಾಪ್ಟರ್ 1 ಇದೀಗ ಇಂಗ್ಲಿಷ್ ಭಾಷೆಯಲ್ಲಿಯೂ ಬಿಡುಗಡೆಗೆ ಸಜ್ಜಾಗಿದೆ.

ದೇಶವ್ಯಾಪಿ ಯಶಸ್ಸು ಕಂಡ ಕನ್ನಡ ಚಿತ್ರ ಕಾಂತಾರ ಚಾಪ್ಟರ್ 1 (Kantara Chapter 1) ಇದೀಗ ಇಂಗ್ಲಿಷ್ ಭಾಷೆಯಲ್ಲಿಯೂ ಬಿಡುಗಡೆಗೆ ಸಜ್ಜಾಗಿದ್ದು, ವಿಶ್ವಮಟ್ಟದಲ್ಲಿ ಚಂದನವನದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ.
ಅಕ್ಟೋಬರ್ 31ರಂದು ಇಂಗ್ಲಿಷ್ ಡಬ್ಡ್ ವರ್ಷನ್ಗೆ ಕಾಂತಾರ 1 ಬಿಡುಗಡೆಯಾಗುತ್ತಿದ್ದು, ಈ ಕುರಿತು ಹೊಂಬಾಳೆ ಫಿಲ್ಮ್ಸ್ ಅಧಿಕೃತ ಘೋಷಣೆ ಮಾಡಿದೆ. ಚಿತ್ರದ ಮೂಲ ಆವೃತ್ತಿ 148 ನಿಮಿಷಗಳದ್ದಾಗಿದ್ದರೆ, ಇಂಗ್ಲಿಷ್ ಆವೃತ್ತಿಯ ಅವಧಿ 02 ಗಂಟೆ 14 ನಿಮಿಷ 45 ಸೆಕೆಂಡು ಗಳಾಗಿದ್ದು, ಇದರಿಂದ ಕೆಲವು ದೃಶ್ಯಗಳಿಗೆ ಸಂಪಾದನೆಯ ಕತ್ತರಿ ಬೀಳಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಚಿತ್ರತಂಡ ಇನ್ನಷ್ಟೇ ಸ್ಪಷ್ಟನೆ ನೀಡಬೇಕಿದೆ.
ಇದನ್ನು ಓದಿ : ಸಿಲಿಂಡರ್ ಸ್ಫೋಟ – ಚಿನ್ನಾಭರಣ, ನಗದು ಭಸ್ಮ

ತುಳು ನೆಲದ ಕಥೆಯಿಂದ ವಿಶ್ವದ ಮನಗಳವರೆಗೆ
ಕಾಂತಾರ ಸಿನಿಮಾ ಮೊದಲನೇ ಬಾರಿಗೆ ಏಕಕಾಲದಲ್ಲಿ ಏಳು ಭಾಷೆಗಳಲ್ಲಿ ಬಿಡುಗಡೆ ಗೊಂಡು, ವಿವಿಧ ಪ್ರೇಕ್ಷಕರ ಮನಸ್ಸು ಗೆದ್ದಿತ್ತು. ಇಂಗ್ಲಿಷ್ ಸಬ್ಟೈಟಲ್ನಿಂದ ಮಾತ್ರ ಪ್ರೇಕ್ಷಕರಿಗೆ ತಲುಪಿದ್ದ ಕಥೆ, ಇಂದಿನಿಂದ ಇಂಗ್ಲಿಷ್ ಡಬ್ ಮೂಲಕ ಪೂರ್ತಿಯಾಗಿ ಅರ್ಥವಾಗಲಿದ್ದು, ವಿದೇಶಿಗರಿಗೂ ಭಾರತೀಯ ಸಂಸ್ಕೃತಿಯ ವಿಶಿಷ್ಟ ಮುಖ ತೋರಿಸ ಲಿರುವ ನಿರೀಕ್ಷೆಯಿದೆ.
ಚಂದನವನಕ್ಕೆ ಬೃಹತ್ ಮಾರ್ಕೆಟ್ ಓಪನ್?
ಇಂಗ್ಲಿಷ್ ಭಾಷೆಯ ಬಿಡುಗಡೆಯಿಂದ ಕಾಂತಾರ ಟೀಮ್ ಕನ್ನಡ ಚಿತ್ರರಂಗಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಬಾಗಿಲು ತೆರೆಯಲು ಹೆಜ್ಜೆ ಇಟ್ಟಂತಾಗಿದೆ. ಇದು ಭಾರತೀಯ ಚಿತ್ರರಂಗದ ಮಟ್ಟವನ್ನೂ ಉನ್ನತಿಗೇರಿಸುವ ಮೂಲಕ ಕನ್ನಡ ಸಿನಿಮಾಗಳಿಗೆ ಹೊಸ ದಿಕ್ಕು ತೋರಿಸಲಿದೆ.

ಇದನ್ನು ನೋಡಿ : ಇಂಗ್ಲಿಷ್ನಲ್ಲಿ ತೆರೆ ಕಾಣಲು ಸಿದ್ಧವಾದ ಕಾಂತಾರ




