Draupadi Murmu : ಕೇರಳ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಬರಿಮಲೆಗೆ (Sabarimala) ಭೇಟಿ ನೀಡಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.ಇರುಮುಡಿ ಕಟ್ಟು ಹೊತ್ತು ಶಬರಿಮಲೆಗೆ ಭೇಟಿ ನೀಡಿದ ದ್ರೌಪದಿ ಮುರ್ಮು ಅವರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಈ ಮೂಲಕ ಶಬರಿಮಲೆಗೆ ಭೇಟಿ ನೀಡಿದ ಮೊದಲ ಹಾಲಿ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

Draupadi Murmu : ರಾಷ್ಟ್ರಪತಿ ದ್ರೌಪದಿ ಮುರ್ಮು ಕೇರಳ ಪ್ರವಾಸದ ವೇಳೆ ಅಯ್ಯಪ್ಪ ಸ್ವಾಮಿಯ ಶಬರಿಮಲೆ ದರ್ಶನ ಪಡೆದಿದ್ದಾರೆ. ಇರುಮುಡಿ ಕಟ್ಟು ಹೊತ್ತು ಪೂರ್ಣ ಧಾರ್ಮಿಕ ಆಚರಣೆ ಪಾಲಿಸಿಕೊಂಡು ದರ್ಶನ ಪಡೆದ ಮುರ್ಮು ಅವರು, ಶಬರಿಮಲೆ ಪರ್ವತಕ್ಕೆ ಹೋಗಿರುವ ಮೊದಲ ಹಾಲಿ ರಾಷ್ಟ್ರಪತಿ ಎಂಬ ವಿಶೇಷ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದಕ್ಕೂ ಮೊದಲು, ಅವರು ತಿರುವನಂತಪುರಂ ಆಗಮಿಸಿ, ನಂತರ ಹೆಲಿಕಾಪ್ಟರ್ ಮೂಲಕ ಪ್ರಮಾಡಂ ಇನ್ಡೋರ್ ಸ್ಟೇಡಿಯಂಗೆ ಬಂದಿಳಿದಾಗ, ಹೆಲಿಕಾಪ್ಟರ್ನ ಟೈರ್ ಕಾಂಕ್ರೀಟ್ನಲ್ಲಿ ಹೂತು ಹೋಗಿದ್ದಲ್ಲದೆ, ಅಗ್ನಿಶಾಮಕ ಸಿಬ್ಬಂದಿ ತುರ್ತು ಕ್ರಮ ಕೈಗೊಂಡು ಸುರಕ್ಷಿತವಾಗಿ ಸ್ಥಳಾಂತರಿಸಿದರು. ನಂತರ ಶಬರಿಮಲೆಗೆ ತೆರಳಿದ ಅವರು, ತುಲಾ ಮಾಸ ಪೂಜೆಯ ಕೊನೆಯ ದಿನದಂದು ದೇವರ ದರ್ಶನ ಪಡೆದರು.

ಇದನ್ನೂ ಓದಿ : Actress Ramya : ಬಂಡೆ ಮಹಾಕಾಳಿ ದೇಗುಲಕ್ಕೆ ಭೇಟಿ ಕೊಟ್ಟ ನಟಿ ರಮ್ಯಾ..!
ಅ.23ರಂದು ರಾಷ್ಟ್ರಪತಿ ಮುರ್ಮು ಅವರು ತಿರುವನಂತಪುರದ ರಾಜಭವನದಲ್ಲಿ ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಜೊತೆಗೆ, ವರ್ಕಲಾದ ಶಿವಗಿರಿ ಮಠದಲ್ಲಿ ಶ್ರೀ ನಾರಾಯಣ ಗುರುಗಳ ಮಹಾಸಮಾಧಿ ಶತಮಾನೋತ್ಸವ ಕಾರ್ಯಕ್ರಮ ಹಾಗೂ ಪಲೈನಲ್ಲಿರುವ ಸೇಂಟ್ ಥಾಮಸ್ ಕಾಲೇಜುದ ಪ್ಲಾಟಿನಂ ಜುಬಿಲಿ ಸಮಾರೋಪ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅ.24ರಂದು ಅವರು ಎರ್ನಾಕುಲಂನ ಸೇಂಟ್ ತೆರೇಸಾ ಕಾಲೇಜಿನ ಶತಮಾನೋತ್ಸವ ಸಮಾರಂಭದಲ್ಲಿಯೂ ಭಾಗವಹಿಸಲಿದ್ದಾರೆ.
MUST WATCH : ಮಗಳನ್ನು ಉಳಿಸಲು ಹೋದ ತಂದೆ ಸೇರಿ ಮೂವರ ಜೀವ ಬಲಿ | CN HALLI NEWS | #pstvk




