Actress Ramya : ಸ್ಯಾಂಡಲ್ವುಡ್ನ ಮೋಹಕ ತಾರೆ ರಮ್ಯಾ ಶಕ್ತಿ ದೇವತೆ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ (Bande Mahakali Temple) ಭೇಟಿ ನೀಡಿದ್ದಾರೆ. ದೀಪಾವಳಿ ಅಮವಾಸ್ಯೆಯ ಹಿನ್ನೆಲೆ ದೇಗುಲಕ್ಕೆ ಭೇಟಿ ನೀಡಿ ಅಮ್ಮನವರ ಆಶೀರ್ವಾದ ಪಡೆದಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಬಂಡೆ ಮಹಾಕಾಳಿ ದರ್ಶನ ಪಡೆದಿದ್ದಾರೆ.

Actress Ramya :ಸ್ಯಾಂಡಲ್ವುಡ್ ನಟಿ ರಮ್ಯಾ (Ramya) ದೀಪಾವಳಿ ಅಮಾವಾಸ್ಯೆಯ ಅಂಗವಾಗಿ ಶಕ್ತಿ ದೇವತೆ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ಇದು ರಮ್ಯಾ ಅವರಿಗೆ ಈ ದೇಗುಲದ ಮೊದಲ ಭೇಟಿ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಹರಿದಾಡುತ್ತಿವೆ.
ಇದನ್ನೂ ಓದಿ : Bengaluru: ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ದಿನಾಂಕ ಫಿಕ್ಸ್!
ಇತ್ತೀಚೆಗೆ ಸಿನಿಮಾದಲ್ಲಿ ಮತ್ತೆ ಕಾಲಿಡಲು ಸಜ್ಜಾಗಿರುವ ಕುರಿತು ರಮ್ಯಾ ಅವರಿಂದ ಕೊಂಚ ಮಾಹಿತಿ ಸಿಕ್ಕಿದ್ದರೂ, ಈವರೆಗೆ ಯಾವುದೇ ಅಧಿಕೃತ ಘೋಷಣೆ ಬಂದಿಲ್ಲ. ದೀಪಾವಳಿಯ ಸಂದರ್ಭದಲ್ಲಿ ದೇವಿಯ ಆಶೀರ್ವಾದ ಪಡೆದುಕೊಂಡ ನಟಿ, ಮುಂದಿನ ದಿನಗಳಲ್ಲಿ ಚಿತ್ರ ನಿರ್ಮಾಣ ಮತ್ತು ನಟನೆ ಸಂಬಂಧ ಹೊಸ ಅಪ್ಡೇಟ್ ನೀಡುವ ನಿರೀಕ್ಷೆಯಿದೆ. ಅಲ್ದೇ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದ್ದಾಗಿ ಕಮೆಂಟ್ ಮಾಡಿದವರ ವಿರುದ್ಧ ರಮ್ಯಾ ಕಠಿಣ ಪ್ರತಿಕ್ರಿಯೆ ನೀಡಿದ್ದು, ತಕ್ಕ ಶಾಸ್ತಿಯನ್ನೂ ವಿಧಿಸಿದ್ದಾರೆ.
MUST WATCH: VANI VILASA SAGARA DAM | ಅಬ್ಬಬ್ಬಾ….ಮೈದುಂಬಿ ಹರಿಯತ್ತಿದೆ ವಾಣಿ ವಿಲಾಸ ಜಲಾಶಯ




