Bengaluru : ಬೆಂಗಳೂರಿನ ಶ್ರೀ ದೊಡ್ಡಗಣಪತಿ ದೇವಾಲಯದಲ್ಲಿ ನಡೆಯುವ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ದಿನಾಂಕ ನಿಗದಿಯಾಗಿದ್ದು, ಈ ಬಾರಿ ನವೆಂಬರ್ 17 ಮತ್ತು 18 ರಂದು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

Bengaluru : ಶ್ರೀ ದೊಡ್ಡಗಣಪತಿ ದೇವಾಲಯದಲ್ಲಿ ನಡೆಯುವ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ಈ ಬಾರಿ ನವೆಂಬರ್ 17 ಮತ್ತು 18 ರಂದು ನಡೆಯಲಿದೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ಇನ್ನು ಕಡಲೆಕಾಯಿ ಪರಿಷೆಗೆ ತನ್ನದೇ ಆದ ವಿಶೇಷ ಇತಿಹಾಸ, ವೈಶಿಷ್ಟ್ಯತೆ ಇದೆ. ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿರುವ ಈ ಉತ್ಸವ ಪ್ರತಿ ವರ್ಷ ಸಾವಿರಾರು ಜನರನ್ನು ಸೆಳೆಯುತ್ತದೆ. ಅಲ್ದೇ ಪ್ರತಿ ವರ್ಷದಂತೆ ಈ ವರ್ಷವು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದರ ಜೊತೆಗೆ, ವ್ಯಾಪಾರಿಗಳಿಂದ ಯಾವುದೇ ಸುಂಕ ವಸೂಲಾತಿ ಮಾಡಬಾರದು ಎಂಬ ಮಹತ್ವದ ನಿರ್ಧಾರವನ್ನು ಈ ಬಾರಿ ಕೈಗೊಳ್ಳಲಾಗುತ್ತಿದೆ.
ಇದನ್ನು ಓದಿ : Rashmika Mandanna : ರಶ್ಮಿಕಾ ಮಂದಣ್ಣ ನಟನೆಯ ಹಾರರ್ ಚಿತ್ರ ‘ಥಮ’ ರಿಲೀಸ್
ಈ ಉತ್ಸವದ ಸಿದ್ಧತೆಗಳ ಕುರಿತಾಗಿ ಈ ಗುರುವಾರ ಮುಜರಾಯಿ ಹಾಗೂ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಸಭೆಯಲ್ಲಿ ಸ್ಥಳೀಯ ಶಾಸಕರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP) ಅಧಿಕಾರಿಗಳು ಹಾಗೂ ಪೊಲೀಸರು ಭಾಗವಹಿಸಲಿದ್ದಾರೆ.
MUST WATCH : ತಿಪಟೂರು ನಗರಸಭೆ ನಿರ್ಲಕ್ಷ್ಯ ವಾರ್ಡ್ ನ ಜನರ ಗೋಳು ಕೇಳೋರೆ ಇಲ್ಲ | TIPTUR NEWS




