Rashmika Mandanna : ರಶ್ಮಿಕಾ ಮಂದಣ್ಣ ಅಭಿನಯದ ಥಮ ಚಿತ್ರ (Thamma Movie) ರಿಲೀಸ್ ಆಗಿದೆ. ನಿಜಕ್ಕೂ ಇದು ಬೇರೆ ಲೋಕದ ಸಿನಿಮಾನೇ ಆಗಿದೆ. ಹಾಲಿವುಡ್ ಅಲ್ಲಿ ಬರ್ತಿದ್ದ ರಕ್ತಪಿಶಾಚಿಗಳ (Wampire) ಚಿತ್ರಗಳನ್ನೆ ಇದು ಹೋಲುತ್ತದೆ. ಆದರೆ, ಇಲ್ಲಿ ಹಾಸ್ಯದ ಸ್ಪರ್ಶ ಇದೆ. ನವಾಜುದ್ದೀನ್ ಸಿದ್ದಿಕಿ ಇಲ್ಲಿ ವ್ಯಾಂಪೈರ್ ರೋಲ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಕೂಡ ಇಲ್ಲಿ ವ್ಯಾಂಪೈರ್ ರಾಣಿನೇ ಆಗಿದ್ದಾರೆ. ಆದರೆ, ಈ ರಾಣಿ ನಾಡಿಗೆ ಬಂದಾಗ ಆಗುವ ಕಥೆ ಇಲ್ಲಿದೆ.

RASHMIKA MANDANNA : ಜನಪ್ರಿಯ ನಟಿ ರಶ್ಮಿಕಾ ಮಂದಣ್ಣ ಅಭಿನಯದ ಹೊಸ ಹಿಂದಿ ಹಾರರ್ ಸಿನಿಮಾ ‘ಥಮ’ (Tham) ಇಂದು (ಅಕ್ಟೋಬರ್ 21) ಬಿಡುಗಡೆಯಾಗಿದೆ. ಇದು ರಶ್ಮಿಕಾ ಅವರ ಮೊದಲ ಹಾರರ್ ಪ್ರಾಜೆಕ್ಟ್ ಆಗಿದ್ದು, ಚಿತ್ರದಲ್ಲಿ ಅವರು ದೆವ್ವದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಟ ಆಯುಷ್ಮಾನ್ ಖುರಾನಾ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದು, ಈ ಜೋಡಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಆದಿತ್ಯ ಸರ್ಪೋತದಾರ್ ನಿರ್ದೇಶಿದಿದ್ದಾರೆ. ಇದು ಹಾರರ್, ಹಾಸ್ಯ ಮತ್ತು ಪ್ರೀತಿಯ ಮಿಶ್ರಣದ ಸಿನಿಮಾವಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಿನಿಮಾ ಕುರಿತ ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರ ಅಭಿಪ್ರಾಯಗಳು ಹರಿದುಬಂದಿದ್ದು, ಕೆಲವರು ರಶ್ಮಿಕಾ ಅಭಿನಯವನ್ನು ಶ್ಲಾಘಿಸಿದ್ದು, ಕೆಲವರು ಕಥೆಯ ಬಗ್ಗೆ ವಿಮರ್ಶೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : Shivamogga: ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆನೆಗಳಿಗೆ ಅನಾರೋಗ್ಯ – ತನಿಖೆಗೆ ಅರಣ್ಯ ಸಚಿವ ಸೂಚನೆ
ರಶ್ಮಿಕಾ ಮಂದಣ್ಣ (Rashmika Mandanna) ಈ ಸಿನಿಮಾದಲ್ಲಿ ವ್ಯಾಂಪೈರ್ ರಾಣಿನೇ ಆಗಿದ್ದಾರೆ. ಆದರೆ, ಈ ರಾಣಿ ನಾಡಿಗೆ ಬಂದಾಗ ಆಗುವ ಕಥೆ ಇಲ್ಲಿದೆ. ಜೊತೆಗಾರ ಆಯುಷ್ಮಾನ್ ಖುರಾನಾ ಇಲ್ಲಿ ಬಂದಾಗ ಏನೆಲ್ಲ ಆಗುತ್ತದೆ ಅನ್ನೋದು ಇಲ್ಲಿ ಮಜಾಕೊಡುತ್ತದೆ.
MUST WATCH: ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ ಪ್ರಜಾಶಕ್ತಿ ವರದಿಗೆ ಶಾಸಕ ಅಲರ್ಟ್ | ARSIKERE IMPACT NEWS |




