Shivamogga : ಶಿವಮೊಗ್ಗ ನಗರದಲ್ಲಿ ನಡೆದ ದಸರಾದಲ್ಲಿ ಭಾಗವಹಿಸಿದ್ದ ಸಕ್ರೆಬೈಲ್ (Sakrebyle) ಆನೆಬಿಡಾರದ ಬಾಲಣ್ಣ, ಸಾಗರ್ ಸೇರಿದಂತೆ ಮೂರು ಆನೆಗಳು (Elephant) ಅನಾರೋಗ್ಯದಿಂದ ಬಳಲುತ್ತಿವೆ. ಬಿಡಾರದ ಆನೆಗಳ ಅನಾರೋಗ್ಯದ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwara Khandre) ತನಿಖೆ ಕೈಗೊಂಡು ಆಗಿರುವ ವೈಫಲ್ಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿ ಪ್ರಕಟಣೆ ಹೊರಡಿಸಿದ್ದಾರೆ.

Shivamogga :ಮೈಸೂರು ನಗರದಲ್ಲಿ ನಡೆದ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಸಕ್ರೆಬೈಲ್ ಆನೆ ಬಿಡಾರದ ಬಾಲಣ್ಣ, ಸಾಗರ್ ಸೇರಿದಂತೆ ಮೂರು ಆನೆಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಈ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಗಂಭೀರವಾಗಿ ಗಮನ ಹರಿಸಿ ತಕ್ಷಣ ತನಿಖೆ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
35 ವರ್ಷದ ಬಾಲಣ್ಣ ಆನೆಗೆ IV (ಇಂಟ್ರಾವೀನಸ್) ಚುಚ್ಚುಮದ್ದು ನೀಡುವ ವೇಳೆ ಸಂಭವಿಸಿದ ನಿರ್ಲಕ್ಷ್ಯದಿಂದಾಗಿ ಸಂಕ್ರಮಣ ರೋಗ ತಗುಲಿ ಇದೀಗ ನರಳುತ್ತಿದೆ. ಈ ಕುರಿತಂತೆ ಮಿಗಿಲಾದ ವೈದ್ಯ ಸಹಾಯವೂ ಪ್ರಾರಂಭಿಸಲಾಗಿದೆ. ಅಲ್ಲದೆ, ಶಿಬಿರದಲ್ಲಿರುವ ‘ಸಾಗರ್’ ಸೇರಿದಂತೆ ನಾಲ್ಕು ಆನೆಗಳು ಗಾಯಗಳಿಂದ ಬಳಲುತ್ತಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ : DK Shivakumar : ಮಂತ್ರಾಲಯ ಹಾಗೂ ರಾಯಚೂರಿಗೆ ಡಿಸಿಎಂ DK ಶಿವಕುಮಾರ್ ಟೆಂಪಲ್ ರನ್..!
ಈ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಪತ್ರ ಬರೆದು, ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಪ್ರಕರಣದಲ್ಲಿ ಯಾರಾದರೂ ಸಿಬ್ಬಂದಿ, ಅಧಿಕಾರಿಗಳ ನಿರ್ಲಕ್ಷ್ಯ ಪತ್ತೆಯಾದರೆ ಶಿಸ್ತುಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಇನ್ನು ರಾಜ್ಯದ ಎಲ್ಲಾ ಆನೆ ಶಿಬಿರಗಳು ಮತ್ತು ಮೃಗಾಲಯಗಳಲ್ಲಿ ತಾತ್ಕಾಲಿಕವಾಗಿ ವೈದ್ಯರನ್ನು ನಿಯೋಜಿಸಲು ಸೂಚನೆ ನೀಡಲಾಗಿದ್ದು. ಪಶುವೈದ್ಯರ ಕೊರತೆಯ ಹಿನ್ನೆಲೆಯಲ್ಲಿ, ಗುತ್ತಿಗೆ ಆಧಾರದ ಮೇಲೆ ತಕ್ಷಣ ವೈದ್ಯರ ನೇಮಕಾತಿಗೆ ಅನುಮತಿ ಸೂಚಿಸಲಾಗಿದೆ. ಒಂದು ವಾರದೊಳಗೆ ಸಂಪೂರ್ಣ ವರದಿ ಸಚಿವರ ಕಚೇರಿಗೆ ಸಲ್ಲಿಸುವಂತೆ ಕಡ್ಡಾಯ ಸೂಚನೆ ನೀಡಿದೆ.
MUST WATCH: CHEETAH ATTACK | ಚಿಕ್ಕನಾಯಕನಹಳ್ಳಿಯಲ್ಲಿ ಭಕ್ಷಕ ಚಿರತೆ ಅಟ್ಯಾಕ್- ಬಾಲಕನಿಗೆ ಗಂಭೀರ ಗಾಯ




