DK SHIVAKUMAR : ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಬೆನ್ನಲ್ಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರು ನಾಳೆ (ಅ.22) ಡಿಸಿಎಂ ಡಿ.ಕೆ.ಶಿವಕುಮಾರ್ ಮಂತ್ರಾಲಯ (Mantralaya) ಸೇರಿ ರಾಯಚೂರಿನ ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ.

DK SHIVAKUMAR : ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಾಳೆ (ಅಕ್ಟೋಬರ್ 22) ದೇವಾಲಯಗಳ ಭೇಟಿಗೆ ಸಜ್ಜಾಗಿದ್ದಾರೆ. ಯಾವುದೇ ರಾಜಕೀಯ ಅಥವಾ ಸರ್ಕಾರಿ ಕಾರ್ಯಕ್ರಮವಿಲ್ಲದೆ, ಕುಟುಂಬದೊಂದಿಗೆ ಧಾರ್ಮಿಕ ಯಾತ್ರೆ ಕೈಗೊಂಡಿದ್ದಾರೆ.
ಇದನ್ನೂ ಓದಿ : Women ODI World Cup 2025: ಸ್ಮೃತಿ ಮಂಧಾನ ಔಟಾದ ಬಳಿಕ ಪಂದ್ಯ ಕೈಚೆಲ್ಲಿದ ಭಾರತ..!
ಡಿಸಿಎಂ ಶಿವಕುಮಾರ್ ನಾಳೆ ಬೆಳಗ್ಗೆ 8 ಗಂಟೆಗೆ ಮಂತ್ರಾಲಯಕ್ಕೆ ಭೇಟಿ ನೀಡಿ ಗುರುರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಅವರು ರಾಯಚೂರಿನ ವಿವಿಧ ಪ್ರಸಿದ್ಧ ದೇವಾಲಯಗಳಿಗೂ ಭೇಟಿ ನೀಡುವ ನಿರೀಕ್ಷೆಯಿದೆ. ಸೆಪ್ಟಂಬರ್ ಕ್ರಾಂತಿ ಬೆನ್ನಲ್ಲೇ ಈ ಟೆಂಪಲ್ ರನ್ನ್ನು ಸಂಪೂರ್ಣ ವೈಯಕ್ತಿಕ ಧಾರ್ಮಿಕ ಯಾತ್ರೆಯಾಗಿ ಡಿಸಿಎಂ ಕೈಗೊಂಡಿದ್ದು, ಕುಟುಂಬದ ಸದಸ್ಯರೊಂದಿಗೆ ಶ್ರದ್ಧಾ ಮತ್ತು ಭಕ್ತಿಯಿಂದ ಪೂಜೆ ಸಲ್ಲಿಸಲಿದ್ದಾರೆ.
ಬೆಳಗ್ಗೆ 10ಕ್ಕೆ ರಾಯಚೂರು ತಾಲೂಕಿನ ಬಿಚ್ಚಾಲಿಯಲ್ಲಿರುವ ರಾಯರ ಏಕಾಶಿಲಾವೃಂದಾವನ ಹಾಗೂ ಬಿಚ್ಚಾಲಮ್ಮ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಲಿದ್ದಾರೆ. ಬೆಳಗ್ಗೆ 11ಕ್ಕೆ ಗಾಣಧಾಣ ಪಂಚಮುಖಿ ಆಂಜನೇಯ ಸ್ವಾಮಿ ದರ್ಶನ, ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಪಂಚಮುಖಿಯಲ್ಲಿ ಬ್ಲಾಕ್ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಮಧ್ಯಾಹ್ನ 1ರಿಂದ ಸಂಜೆ 6:55ರವರೆಗೆ ಮಂತ್ರಾಲಯದಲ್ಲಿ ಉಳಿಯಲಿರುವ ಡಿಕೆಶಿ ಬಳಿಕ ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
MUST WATCH: ಪೊಲೀಸ್ ಹುತಾತ್ಮ ದಿನಾಚರಣೆ ನೂರಾರು ಮಂದಿ ಪೊಲೀಸರಿಂದ ಗೌರವ ಅರ್ಪಣೆ | Police Tribute in Tumakuru
ಈ ಟ್ಯಾಗ್ಗಳನ್ನು ಬಳಸಿದರೆ ನಿಮ್ಮ ಲೇ




