BBK 12-ಈಗ ನಾಲ್ಕನೇ ವಾರಕ್ಕೆ ಬಿಗ್ಬಾಸ್ 12 ಕಾಲಿಟ್ಟಿದ್ದು, ವೈಲ್ಡ್-ಕಾರ್ಡ್ ಎಂಟ್ರಿಗಳಿಂದಾಗಿ ಮನೆಯ ವಾತಾವರಣವೇ ತಲೆಕೆಳಗಾಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss) ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ವೈಲ್ಡ್-ಕಾರ್ಡ್ ಎಂಟ್ರಿಗಳಿಂದಾಗಿ ಮನೆಯ ವಾತಾವರಣವೇ ತಲೆಕೆಳಗಾಗಿದೆ. ಹೊಸ ಸ್ಪರ್ಧಿಗಳ ಆಗಮನದ ಪರಿಣಾಮವಾಗಿ ಮನೆಗೆ ಹೊಸ ದಿಕ್ಕು ಸಿಕ್ಕಿದಂತಾಗಿದೆ.
BBK 12 : ಮನೆಗೆ ಮೂವರು ವೈಲ್ಡ್-ಕಾರ್ಡ್ ಸ್ಪರ್ಧಿಗಳು ಎಂಟ್ರಿ
ಮ್ಯೂಟೆಂಟ್ ರಘು, ರಿಷಾ ಗೌಡ ಮತ್ತು ಸೂರಜ್ ಸಿಂಗ್ ಎಂಬ ಮೂವರು ವೈಲ್ಡ್-ಕಾರ್ಡ್ ಸ್ಪರ್ಧಿಗಳು ಈ ವಾರ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿದ್ದಾರೆ. ರಘು ಹಾಗೂ ರಿಷಾ ಅವರ ಧಿಡೀರ್ ಎಂಟ್ರಿಯಿಂದ ಮನೆ ಮಾತ್ರವಲ್ಲದೇ ಮನೆಯ ಸದಸ್ಯರೂ ಕೂಡ ಶಾಕ್ ಆಗಿದ್ದಾರೆ. ಅತ್ತ ಸೂರಜ್ ಸಿಂಗ್ ಸೈಲೆಂಟ್ ಆಗಿ ಎಂಟ್ರಿ ಕೊಟ್ಟಿದ್ದಾರೆ.
ಇದನ್ನು ನೋಡಿ : ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ-ರಾಶಿಕಾ ನಡುವೆ ಹೊತ್ತಿ ಉರಿದ ಬೆಂಕಿ

ನಾಮಿನೇಷನ್ ಪ್ರಕ್ರಿಯೆಯಲ್ಲಿ ಭಾರಿ ಸಂಘರ್ಷ
ಇನ್ನು ಇಂದಿನ ಎಪಿಸೋಡ್ನಲ್ಲಿ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದ್ದು, ಮನೆ ಸದಸ್ಯರ ನಡುವೆ ಭಾರಿ ಸಂಘರ್ಷ ಉಂಟಾಗಿದೆ. ಮ್ಯೂಟೆಂಟ್ ರಘು ತನ್ನ ಮೊದಲ ನಾಮಿನೇಷನ್ ಹೆಸರಾಗಿ ಗಿಲ್ಲಿಯನ್ನು ಉಲ್ಲೇಖಿಸಿ, “ಕಾಮಿಡಿಯಲ್ಲಿ ಕ್ಯಾರೆಕ್ಟರ್ ಡಮ್ಮಿ ಮಾಡೋದು ಸರಿಯಲ್ಲ” ಎಂದು ಕಾರಣ ನೀಡಿದ್ದಾರೆ. ಗಿಲ್ಲಿಗೆ ಐದಕ್ಕಿಂತ ಹೆಚ್ಚು ಮಂದಿ ನಾಮಿನೇಟ್ ಮಾಡಿದ್ದಾರೆ.
ರಕ್ಷಿತಾ vs ರಾಶಿಕಾ – ಮಾತಿನ ಯುದ್ಧ
ನಾಮಿನೇಷನ್ ಸಂದರ್ಭದಲ್ಲಿ ರಕ್ಷಿತಾ ಶೆಟ್ಟಿ, ರಾಶಿಕಾ ಗೌಡನನ್ನು ನಾಮಿನೇಟ್ ಮಾಡುವುದಾಗಿ ಹೇಳಿದ್ದು, “ಅವರು ಇಂಡಿವ್ಯೂಜುವಲ್ ಆಗಿ ಇಲ್ಲ. ಆರ್ಡರ್ ಮಾಡ್ತಾರೆ, ಇದನ್ನು ತೆಗೊಂದು ಬಾ, ಅದನ್ನು ತೆಗೊಂದು ಬಾ ಅಂತಾರೆ,” ಎಂಬ ಕಾರಣ ನೀಡಿದ್ದಾರೆ.
ರಕ್ಷಿತಾ ನೀಡಿರುವ ಕಾರಣದಿಂದ ರೊಚ್ಚಿಗೆದ್ದ ರಾಶಿಕಾ, “ನಾನು ಯಾರ ಮೇಲೂ ಡಿಪೆಂಡ್ ಆಗಿಲ್ಲ. ನಿನಗೆ ಏನು ಅರ್ಥವಾಗಲ್ಲ. ಚೈಲ್ಡಿಶ್ ಬಿಹೆವಿಯರ್ ಮಾಡ್ತೀಯ” ಎಂದು ಹೇಳಿದ್ದಾರೆ. ಅದಕ್ಕೆ ರಕ್ಷಿತಾ “ನೀವು ರೆಸ್ಪೆಕ್ಟ್ ಮಾಡ್ಬೇಕು” ಎಂದು ಇಬ್ಬರ ನಡುವೆ ಮಾತಿನ ಜಗಳ ನಡೆದಿದೆ.

ಇದನ್ನು ಓದಿ : ಮನೆ ಬೇಕು- ದುಡ್ಡು ಬೇಕು ನಿತ್ಯ ಟಾರ್ಚರ್- ವಿಡಿಯೋದಲ್ಲಿದೆ ಗಂಡನ ಕಿರಾತಕ ಬುದ್ದಿ




