Haveri : ತಾಯಿ ಮತ್ತು ಮಗಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿಯಲ್ಲಿ ನಡೆದಿದೆ.

Haveri : ಹಾವೇರಿಯ ವರದಾಹಳ್ಳಿ ಗ್ರಾಮದ ಬಳಿ ಭಾನುವಾರ (ನೆನ್ನೆ) ಮನನೊಂದು ತಾಯಿ ಮತ್ತು ಮಗಳು ವರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ. ಇನ್ನು ಈ ದಾರುಣ ಘಟನೆ ಭಾನುವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ನಡೆದಿದೆ.
ಮೃತರನ್ನು 38 ವರ್ಷದ ಸವಿತಾ ನಾಗರಾಜ ಉಳ್ಳಾಗಡ್ಡಿ ಹಾಗೂ ಅವರ ಮಗಳು ಕಾವ್ಯಾ (ಸುಮಾರು 13) ಎಂದು ಗುರುತಿಸಲಾಗಿದೆ. ಗಂಡನ ಮನೆಯಲ್ಲಿ ದಿನನಿತ್ಯ ಆಗುತ್ತಿದ್ದ ಭಿನ್ನಾಭಿಪ್ರಾಯ, ಕಲಹದಿಂದ ನೊಂದ ಸವಿತಾ ಅವರು ಮಗಳು ಕಾವ್ಯಾಳನ್ನು ಕರೆದುಕೊಂಡು ನದಿಯ ಕಡೆಗೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಇನ್ನು ಈ ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಹಾವೇರಿ ಗ್ರಾಮೀಣ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ, ತಕ್ಷಣವೇ ಹುಡುಕಾಟ ಆರಂಭಿಸಿದರು. ಅದರಲ್ಲಿ ಕಾವ್ಯಾಳ ಮೃತದೇಹ ಪತ್ತೆಯಾಗಿದ್ದು, ಸವಿತಾ ಅವರ ಶೋಧ ಕಾರ್ಯ ಮುಂದುವರೆದಿದೆ.
ಇದನ್ನು ಓದಿ : ಗಬ್ಬೆದ್ದ ಸಿಟಿ ಆಗ್ತಿದೆ ತುಮಕೂರು ನಗರ..?
ಮೃತ ಸವಿತಾ ಅವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗಳು ಇದ್ದರು. ಮಗಳು ಕಾವ್ಯಾ ಇತ್ತೀಚೆಗೆ ನವೋದಯ ಪರೀಕ್ಷೆ ಉತ್ತೀರ್ಣಗೊಂಡಿದ್ದಳು ಹಾಗೂ ಉತ್ತಮ ಪ್ರತಿಭಾವಂತಿಯಾಗಿದ್ದಳು ಎನ್ನಲಾಗುತ್ತಿದೆ.
ಇನ್ನು ಈ ವಿಷಯದಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದ ಜನತೆ ದುಃಖ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನು ನೋಡಿ : ವರದಾ ನದಿಗೆ ಹಾರಿ ತಾಯಿ, ಮಗಳು ಆತ್ಮಹತ್ಯೆ




