Tumakuru : ನಮ್ಮ ತುಮಕೂರು ನಗರ ಶೈಕ್ಷಣಿಕ ನಗರಿ, ಸ್ಮಾರ್ಟ್ ಸಿಟಿ ಅಂತಾ ಹೆಸರುವಾಸಿಯಾಗಿದೆ

ನಮ್ಮ ತುಮಕೂರು ನಗರ ಶೈಕ್ಷಣಿಕ ನಗರಿ, ಸ್ಮಾರ್ಟ್ ಸಿಟಿ ಅಂತಾ ಹೆಸರುವಾಸಿಯಾಗಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಗಬ್ಬೇದ್ದ ಸಿಟಿ ಅಂತಾನೂ ಕುಖ್ಯಾತಿಗೆ ಪಾತ್ರವಾಗ್ತಿದೆ. ನಗರದ ಬಹುತೇಕ ಬಡವಾವಣೆಗಳಲ್ಲಿ ಯುಜಿಡಿ ಛೇಂಬರ್ ಬ್ಲಾಕ್ ಆಗಿ, ಗಲೀಜು ನೀರು ರಸ್ತೆ ಮೇಲೆ ಹರಿಯುತ್ತಿದ್ರು ಪಾಲಿಕೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ನಗರದ ಯಾವ ಯಾವ ಏರಿಯಾಗಳಲ್ಲಿ ಯುಜಿಡಿ ಬ್ಲಾಕ್ ಆಗಿದೆ ಎಂದು ಪ್ರಜಾಶಕ್ತಿ ಟಿವಿ ಅಭಿಯಾನದ ಮೂಲಕ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸವನ್ನು ಮಾಡ್ತಾ ಇದೆ, ಅದ್ರಂತೆ ಇಂದು ತುಮಕೂರು ನಗರದ 11ನೇ ವಾರ್ಡ್ನ ಕಲ್ಪತರು ಬಡಾವಣೆಯ ಶೇಷಾದ್ರಿಪುರಂ ಇಂಗ್ಲೀಷ್ ಸ್ಕೂಲ್ ಮುಂದೆ ಆಗ್ತಿರೋ ದುಸ್ಥಿತಿಯನ್ನು ಪ್ರಜಾಶಕ್ತಿ ಟಿವಿ ಬಯಲಿಗೆಳೆಯುತ್ತಿದೆ.

ತುಮಕೂರು ನಗರದ 11 ನೇ ವಾರ್ಡ್ ಕಲ್ಪತರು ಬಡಾವಣೆ ಶೇಷಾದ್ರಿಪುರಂ ಆಂಗ್ಲ ಶಾಲೆಗೆ ಹೋಗುವ ರಸ್ತೆಯಲ್ಲಿ ಸುಮಾರು ದಿನಗಳಿಂದ ರಸ್ತೆ ತುಂಬಾ ಯುಜಿಡಿ ಛೇಂಬರ್ ಬ್ಲಾಕ್ ಆಗಿ ರಸ್ತೆ ಮೇಲೆ ಗಲೀಜು ನೀರು ಹರಿಯುತ್ತಿದ್ದು , ರಸ್ತೆಯಲ್ಲಿ ಹೋಗುವ ಸಾರ್ವಜನಿಕರು ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಇನ್ನು ನಿತ್ಯ ಈ ರಸ್ತೆಯಲ್ಲಿ ನೂರಾರು ವಿದ್ಯಾರ್ಥಿಗಳು ಓಡಾಡುತ್ತಿದ್ದು, ಮೂಗು ಮುಚ್ಚಿ ಕೊಂಡು ಓಡಾಡುವಂತಾಗಿದೆ.
ಇದನ್ನು ಓದಿ : ಇಂದು ಹಲವು ಜಿಲ್ಲೆಗಳಿಗೆ Yellow Alert ಘೋಷಣೆ

ಇನ್ನು ಇದರ ಬಗ್ಗೆ ಪಾಲಿಕೆಯವರಿಗೆ ಹಲವಾರು ಬಾರಿ ದೂರು ನೀಡಿದರು ಬಂದು ಸ್ವಚ್ಛ ಮಾಡುವ ಕೆಲಸ ಮಾಡ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ತುಮಕೂರು ಜನರಿಗೆ ಯುಜಿಡಿ ಛೇಂಬರ್ನಿಂದ ನಾನಾ ಅವಾಂತರಗಳನ್ನು ಸೃಷ್ಟಿ ಮಾಡ್ತಾ ಇದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಆದಷ್ಟು ಬೇಗ ಸಮಸ್ಯೆಯನ್ನು ಪರಿಹರಿಸಿಕೊಡಬೇಕಿದೆ.
ಇದನ್ನು ನೋಡಿ : ಊರುಗಳತ್ತ ಕಾರುಗಳಲ್ಲಿ ಹೊರಟ ಜನರು- ಎಲ್ಲೆಲ್ಲೂ ಕಾರ್, ಕಾರ್ ಗಳದ್ದೇ ದರ್ಬಾರ್





