Raghu Dixit : ಕನ್ನಡದ ಖ್ಯಾತ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಜೊತೆ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸಪ್ತಪದಿ ತುಳಿಯಲಿದ್ದಾರೆ.

ಖ್ಯಾತ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು, ಗ್ರ್ಯಾಮಿ ನಾಮನಿರ್ದೇಶಿತ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಅವರೊಂದಿಗೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಇದೇ ಅಕ್ಟೋಬರ್ ತಿಂಗಳಲ್ಲಿ ಈ ಜೋಡಿಯ ಮದುವೆ ಸಮಾರಂಭ ನಡೆಯಲಿದೆ ಎನ್ನಲಾಗಿದೆ.
ಇಬ್ಬರೂ ತುಂಬಾ ವರ್ಷಗಳ ಗೆಳೆಯರಾಗಿದ್ದು, ಹಲವು ವೇದಿಕೆಗಳಲ್ಲಿ ಸಂಗೀತ ಪ್ರದರ್ಶನ ನೀಡಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ‘ಟಗರು’, ‘ಡಾರ್ಲಿಂಗ್’, ‘ಆಚಾರ್ ಅಂಡ್ ಕೋ’ ಸೇರಿದಂತೆ ಅನೇಕ ಸಿನಿಮಾಗಳಿಗೆ ಹಾಡು ಹಾಡಿದ್ದಾರೆ.
ಇದನ್ನು ನೋಡಿ : ಖ್ಯಾತ ಗಾಯಕಿ ಜೊತೆ ರಘು ದೀಕ್ಷಿತ್ ಮದುವೆ.. ಯಾವಾಗ?

ಹೊಸ ಆರಂಭವು ಆಳವಾದ ನೆಲೆಯನ್ನು ನೀಡುತ್ತದೆ. ಸತ್ಯ ಹೇಳಬೇಕು ಅಂದರೆ ಇದು ಬರುವುದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ನನ್ನ ಜೀವನದುದ್ದಕ್ಕೂ ಒಂಟಿಯಾಗಿರಲು ನನ್ನನ್ನು ನಾನು ಸಿದ್ಧಪಡಿಸಿಕೊಂಡಿದ್ದೆ. ಆದರೆ ಜೀವನ ಬೇರೆಯದ್ದೇ ಪ್ಲಾನ್ ಹೊಂದಿತ್ತು. ನಮ್ಮಿಬ್ಬರ ಬಲವಾದ ಸ್ನೇಹ ಸ್ವಾಭಾವಿಕವಾಗಿ ಪ್ರೀತಿ, ಒಡನಾಟವಾಗಿ ವಿಕಸನಗೊಂಡಿತು. ನಾವು ಒಂದೇ ರೀತಿಯ ಆಸಕ್ತಿಗಳನ್ನು ಹಂಚಿಕೊಳ್ಳುತ್ತೇವೆ. ವಾರಿಜಶ್ರೀ ಪೋಷಕರ ಆಶೀರ್ವಾದದೊಂದಿಗೆ ಜೀವನದ ಈ ಹೊಸ ಅಧ್ಯಾಯ ಒಟ್ಟಿಗೆ ಆರಂಭಿಸಲು ಉತ್ಸುಕರಾಗಿದ್ದೇವೆ ಎಂದು ರಘು ದೀಕ್ಷಿತ್ ಹೇಳಿದ್ದಾರೆ ಅಂತಾ ಮಾಧ್ಯವೊಂದು ವರದಿ ಮಾಡಿದೆ.
ಅಂತೆಯೇ, ಈ ಹಿಂದೆ ರಘು ದೀಕ್ಷಿತ್ ಅವರು ಪ್ರಸಿದ್ಧ ಕೊರಿಯೋಗ್ರಾಫರ್ ಮತ್ತು ನೃತ್ಯಾಂಗನಾ ಮಯೂರಿ ಉಪಾಧ್ಯ ಅವರನ್ನು ವಿವಾಹವಾಗಿದ್ದರು. ಆದರೆ, 2019ರಲ್ಲಿ ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದು ಪ್ರತ್ಯೇಕವಾಗಿದ್ದಾರೆ.
ಇದೀಗ, ವಾರಿಜಶ್ರೀ ಜೊತೆ ಅವರ ಜೀವನದಲ್ಲಿ ಹೊಸ ಪಾಠ ಆರಂಭವಾಗುತ್ತಿರುವುದು ಕನ್ನಡ ಸಂಗೀತ ಲೋಕ ದಲ್ಲಿ ಸಂಭ್ರಮದ ಸುದ್ದಿ ಆಗಿದೆ.

ಇದನ್ನು ಓದಿ : ಮೀನು ಹಿಡಿಯಲು ಹೋಗಿದ್ದ ಮೂವರು ಮಕ್ಕಳು ನೀರು ಪಾಲು




