Women’s ODI World Cup 2025 :ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಭರ್ಜರಿ ಜಯದೊಂದಿಗೆ ತನ್ನ ವಿಜಯಯಾತ್ರೆಗೆ ಶುಭಾರಂಭ ನೀಡಿದೆ. ಗುವಾಹಟಿಯ ಬರ್ಸಪಾರ ಕ್ರಿಕೆಟ್ ಮೈದಾನದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ನೇತೃತ್ವದ ಟೀಮ್ ಇಂಡಿಯಾ, ಶ್ರೀಲಂಕಾ ವಿರುದ್ಧ ಡಕ್ವರ್ ಲೂಯಿಸ್ ಸ್ಟರ್ನ್ (ಡಿಎಲ್ಎಸ್) ವಿಧಾನದ ಪ್ರಕಾರ 59 ರನ್ಗಳ ಜಯ ಸಾಧಿಸಿದೆ.
ಟಾಸ್ ಗೆದ್ದ ಶ್ರೀಲಂಕಾ ಭಾರತವನ್ನು ಬ್ಯಾಟಿಂಗ್ಗೆ ಆಹ್ವಾನ ಮಾಡಿದರು. ಆರಂಭಿಕರಾಗಿ ಬಂದ ಸ್ಮೃತಿ ಮಂದಾನ ಹಾಗೂ ಪ್ರತಿಕಾ ರಾವಲ್ ಉತ್ತಮ ಆಟವಾಡಿದರು. 8 ರನ್ಗೆ ಮಂದಾನ ವಿಕೆಟ್ ಒಪ್ಪಿಸಿ, ಬೇಸರದಿಂದ ಹೊರ ನಡೆದರು. ಆದರೆ ಹರ್ಲೀನ್ ಡಿಯೋಲ್ (48), ದೀಪ್ತಿ ಶರ್ಮಾ (53) ಹಾಗೂ ಅಮನ್ಜೋತ್ ಕೌರ್ (57) ಪ್ರಮುಖ ಇನಿಂಗ್ಸ್ ಗಳಿಸಿ ಭಾರತವನ್ನು 47 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 270 ರನ್ ಗಳ ಸುರಕ್ಷಿತ ಮೊತ್ತದವರೆಗೆ ಕೊಂಡೊಯ್ದರು.
ಈ ಗುರಿ ಬೆನ್ನತ್ತಿದ್ದ ಶ್ರೀಲಂಕಾ ಮಹಿಳಾ ತಂಡ ಉತ್ತಮವಾಗಿಯೇ ಬ್ಯಾಟಿಂಗ್ ಮಾಡಿತು. ಕ್ಯಾಪ್ಟನ್ ಚಾಮರಿ 43 ರನ್ ಸಿಡಿಸಿ ಒಳ್ಳೆಯ ಆರಂಭ ಒದಗಿಸಿದ್ದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಸರಿಯಾಗಿ ಮಾಡದ ಕಾರಣ ಶ್ರೀಲಂಕಾ ಆಟಗಾರ್ತಿಯರು 211 ರನ್ಗೆ ಆಲೌಟ್ ಆದರು. ಇದರಿಂದ ಭಾರತದ ಮಹಿಳಾ ತಂಡ 59 ರನ್ಗಳ ಗೆಲುವು ಪಡೆಯಿತು. ಆಲೌರಂಡರ್ ಪ್ರದರ್ಶನ ನೀಡಿದ್ದ ದೀಪ್ತಿ ಶರ್ಮಾ ಅರ್ಧಶತಕದ ಜೊತೆಗೆ 3 ವಿಕೆಟ್ಗಳನ್ನು ಉರುಳಿಸಿದ್ದರು. ಇದರಿಂದ ಪ್ಲೇಯರ್ ಆಫ್ ದೀ ಮ್ಯಾಚ್ ಪ್ರಶಸ್ತಿ ಪಡೆದು ಸಂಭ್ರಮಿಸಿದರು.