2025-26ರ SSLC ಫಲಿತಾಂಶದಲ್ಲಿ ಕಲಬುರಗಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ.

2025-26ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ ಇಂದು ಮಧ್ಯಾಹ್ನ 12 ಗಂಟೆಗೆ ಪ್ರಕಟಗೊಂಡಿದ್ದು, ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಶೇ. 98.40 ಫಲಿತಾಂಶದೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇನ್ನು ಉಡುಪಿ ಜಿಲ್ಲೆ ಶೇ. 98.18 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ರೆ, ಕಳೆದ ವರ್ಷ 34ನೇ ಸ್ಥಾನ ಪಡೆದಿದ್ದ ಕಲಬುರಗಿ ಜಿಲ್ಲೆ ಈ ವರ್ಷ ಹಿಂಬಡ್ತಿ ಪಡೆದು ಕೊನೆಯ ಸ್ಥಾನ ಪಡೆದಿದೆ.
SSLC ಫಲಿತಾಂಶ ಬಂದಿದೆ ಟ್ವೀಟ್ ಮಾಡಿ ಖರ್ಗೆ
ಇನ್ನು ಇದೇ ವಿಚಾರವನ್ನೀಗ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಅಸ್ತ್ರಮಾಡಿಕೊಂಡಿದ್ದು, ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿವೆ. ಎಸ್ಎಸ್ಎಲ್ಸಿ ಫಲಿತಾಂಶ ಬಂದಿದೆ. ಟ್ವೀಟ್ ಮಾಡಿ ಖರ್ಗೆ ಎಂದು ವ್ಯಂಗ್ಯವಾಡಿವೆ.
READ THIS : ಉದ್ಯಮಿ ಜತೆ ಇನ್ಫ್ಲುಯೆನ್ಸರ್ ಡೇಟಿಂಗ್, ವಿಡಿಯೊ ಮಾಡಿ Blackmail

ಸ್ವಂತ ಜಿಲ್ಲೆಯ ಮಕ್ಕಳ ಭವಿಷ್ಯ ರೂಪಿಸುವಲ್ಲಿ ವಿಫಲ
4-5 ದಶಕಗಳಿಂದ ಕಲಬುರಗಿ ಜಿಲ್ಲೆ ಆಳುತ್ತಿರುವ ಖರ್ಗೆ ಕುಟುಂಬ ಸ್ವಂತ ಜಿಲ್ಲೆಯ ಮಕ್ಕಳ ಭವಿಷ್ಯ ರೂಪಿಸುವಲ್ಲಿ ವಿಫಲವಾಗಿರುವುದು ನಾಚಿಕೆಗೇಡಿನ ಸಂಗತಿ. ಕಲಬುರಗಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ, ಶಿಕ್ಷಕರ ನೇಮಕ ಸೇರಿದಂತೆ ಶಿಕ್ಷಣದ ಪ್ರಗತಿಗೆ ಅಗತ್ಯವಿರುವ ಮೂಲಸೌಕರ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ JDS ಆಕ್ರೋಶ ವ್ಯಕ್ತಪಡಿಸಿದೆ.
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಅವರೇ, ನಿಮ್ಮ ಭಾಷಣದ ‘ಸಾಧನೆ’ಗೆ ಈ ಫಲಿತಾಂಶವನ್ನು ಸೇರಿಸಿಕೊಳ್ಳಿ. ಕಲಬುರಗಿಯನ್ನು ಅಕ್ಷರಶಃ ಶೈಕ್ಷಣಿಕ ಅಂಧಕಾರಕ್ಕೆ ದೂಡಿದ್ದೀರಿ.
ಮಾತಿನಲ್ಲಿ ತೋರಿಸುವ ಶೌರ್ಯ ಶಿಕ್ಷಣದ ಸುಧಾರಣೆಯಲ್ಲಿ ತೋರಿಸಿ ಎಂದಿರುವ ಜೆಡಿಎಸ್ ಪ್ರಿಯಾಂಕ್ ಖರ್ಗೆಯನ್ನು ನಾಟಿಕೋಳಿ ಮಿನಿಸ್ಟರ್ ಎಂದು ವ್ಯಂಗ್ಯವಾಡಿದೆ.

ಟ್ವೀಟ್ ಎಲ್ಲಿ ಮಾಹಾಜ್ಞಾನಿ – BJP
ಫಲಿತಾಂಶ ಸಂಬಂಧ ವಿಪಕ್ಷ ಬಿಜೆಪಿಯೂ ತನ್ನ ಎಕ್ಸ್ ಪ್ರಿಯಾಂಕ್ ರಿಸಲ್ಟ್ ವೀಕ್ಷಿಸುತ್ತಿರುವಂತಹ ಫೋಟೋ ಜೊತೆಗೆ SSLC ಫಲಿತಾಂಶ ಬಂದಿದೆ. ಟ್ವೀಟ್ ಮಾಡಿ ಖರ್ಗೆ ಎಂಬ ಶೀರ್ಷಿಕೆಯ ಜೊತೆ ಪೋಸ್ಟ್ ಮಾಡಿ ಪ್ರಿಯಂಯಾ ಖರ್ಗೆ ಅವರ ಕಾಲೆಳೆದಿದೆ.
MUST WATCH : ಕುಡಿದು ಕಿರಿಕ್ ಮಾಡಿದವನ ಮೇಲೆ ಸಂಬಂಧಿಕರ ಅಟ್ಟಹಾಸ – ಬರ್ಬರವಾಗಿ ಹ*




