ವಿಡಿಯೋ ಇಟ್ಟುಕೊಂಡು ಉದ್ಯಮಿಗೆ Blackmail.? ಸೋಶಿಯಲ್ ಮೀಡಿಯಾ ಸುಂದರಿ ವಿರುದ್ಧ ದೂರು ದಾಖಲು

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಪ್ರತಿಯೊಬ್ಬರ ದಿನಚರಿ ಆಗಿಬಿಟ್ಟಿದೆ. ಕೆಲವರು ಸೋಶಿಯಲ್ ಮೀಡಿಯಾವನ್ನ ಒಳ್ಳೆಯ ರೀತಿಯಲ್ಲಿ ಬಳಸಿದ್ರೆ, ಇನ್ನ ಕೆಲವರು ದುರುಪಯೋಗ ಪಡಿಸಿಕೊಳೋದೇ ಜಾಸ್ತಿ. ಇದೀಗ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಹೆಸರಿನಲ್ಲಿ ದೊಡ್ಡ ಬ್ಲಾಕ್ಮೇಲ್ ಜಾಲವೊಂದು ಬಯಲಾಗಿದೆ. ಉದ್ಯಮಿಯೊಬ್ಬರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಇನ್ಫ್ಲುಯೆನ್ಸರ್ ಸುಂದರಿಯೊಬ್ಬಳು ಹಣಕ್ಕೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.
ಖಾಸಗಿ ಫೋಟೋ, ವಿಡಿಯೋಇಟ್ಕೊಂಡು Blackmail
ಇನ್ಫ್ಲುಯೆನ್ಸರ್ ಸಾಧನ ಶೆಟ್ಟಿ ವಿರುದ್ಧ HK ಪರ್ಮನೆಂಟ್ ಮೇಕ್ಅಪ್ ಕ್ಲಿನಿಕ್ ಮಾಲೀಕ ಕಾರ್ತಿಕ್ ಪುಥ ಅವರು ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೆಂಗಳೂರು, ಹೈದರಾಬಾದ್ನಲ್ಲಿ ಮೇಕಪ್ ಕ್ಲಿನಿಕ್ ಹಾಗೂ ಹಾಸ್ಪಿಟಲ್ ನಡೆಸುತ್ತಿರುವ ಕಾರ್ತಿಕ್ಗೆ ಇನ್ಸ್ಟಾಗ್ರಾಂ, ಫೇಸ್ಬುಕ್ನಲ್ಲಿ ಇನ್ಫ್ಲುಯೆನ್ಸರ್ ಆಗಿರುವ ಸಾಧನಾ 2024 ರಲ್ಲಿ ಪರಿಚಯವಾಗಿದ್ಳಂತೆ. ಕ್ಲಿನಿಕ್ ಪ್ರಮೋಶನ್ ಸಲುವಾಗಿ ಸಾಧನರನ್ನು ಕಾರ್ತಿಕ್ ಹಲವು ಭಾರೀ ಭೇಟಿಯಾಗಿದ್ರಂತೆ, ನಂತರ ಇಬ್ಬರ ನಡುವೆ ಸಲುಗೆ ಬೆಳೆದು ಪರಸ್ಪರ ಹತ್ತಿರವಾಗಿದ್ದರು. ಈ ವೇಳೆ ಇಬ್ಬರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನ ಮುಂದಿಟ್ಟು, ಕಾರ್ತಿಕ್ ಕುಟುಂಬಸ್ಥರಿಗೆ ಕಳುಹಿಸುವುದಾಗಿ ಬೆದರಿಸುತ್ತಿದ್ದಳು ಎಂದು ಆರೋಪಿಸಿದ್ದಾರೆ.

READ THIS : CSK ಸ್ಟಾರ್ ಬೌಲರ್ ಮುಖೇಶ್ ಚೌಧರಿ ತಾಯಿ ನಿಧನ
1.5 ಕೋಟಿ ಕೊಡುವಂತೆ ಬೇಡಿಕೆ
ಇನ್ನು ಆರಂಭದಲ್ಲಿ ಭಯಗೊಂಡ ಕಾರ್ತಿಕ್ ಆನ್ ಲೈನ್ ಮೂಲಕ ಐದು ಲಕ್ಷ ಹಾಗೂ ನಗದು ರೂಪದಲ್ಲಿ ಐದು ಲಕ್ಷ ಹಣ ಜೊತೆಗೆ, ಮೂವತ್ತು ಸಾವಿರ ಮೌಲ್ಯದ ಉಂಗುರ, ಎಪ್ಪತ್ತು ಸಾವಿರದ ಚೈನ್ ಹಾಗೂ ಒಂದೂವರೆ ವರ್ಷದ ಆಪಲ್ ಪೋನ್ ಕೂಡ ಪಡೆದಿದ್ದಾಳೆ. ಇಷ್ಟೆಲ್ಲಾ ಆದರೂ ಮತ್ತೆ 1.5 ಕೋಟಿ ರೂ. ಕೊಡುವಂತೆ ಸಾಧನಾ ಶೆಟ್ಟಿ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದಾಗ ಫೋಟೋ, ವಿಡಿಯೋಗಳನ್ನು ಕಾರ್ತಿಕ್ ಹೆಂಡತಿಗೆ ವಾಟ್ಸಾಪ್ ಮಾಡಿದ್ದಾಳೆ. ಇದ್ರಿಂದ ಮನೆಯಲ್ಲಿ ಜಗಳ ಶುರುವಾಗಿತ್ತು. ಹೀಗಾಗಿ ಕೊನೆಗೆ ಕಾರ್ತಿಕ್ ಜಯನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಈ ಸಂಬಂಧ ದೂರು ದಾಖಲಿಸಿದ್ದಾರೆ.
ಲೇಡಿ ಇನ್ಫ್ಲುಯೆನ್ಸರ್ ವಿರುದ್ಧ FIR
ಸದ್ಯ ಪ್ರಕರಣ ಸಂಬಂಧ ಜಯನಗರ ಪೊಲೀಸರು ಆರೋಪಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ದು, ನನ್ನ ಬಳಿ ಯಾವುದೇ ವಿಡಿಯೋ ಇಲ್ಲ ಎಂದು ಸಾಧನ ಶೆಟ್ಟಿ ಹೇಳಿದ್ದಾಳೆ. ಈ ಪ್ರಕರಣದಡಿ ಇನ್ಫರ್ಮೇಶನ್ ಟೆಕ್ನಾಲಜಿ ಕಾಯ್ದೆಯ 66 ಹಾಗೂ 67 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

MUST WATCH : ರಾಜ್ಯದಲ್ಲಿ SSLC ತೃತೀಯ ಭಾಷೆ ಗೊಂದಲ – 10 ಗ್ರೇಸ್ ಮಾರ್ಕ್ಸ್ ನೀಡಲಿದ್ಯಾ ಸರ್ಕಾರ ?




