Bengaluru : ಚಾರಣಿಗರಿಗೆ ಹೊಸ ನಿಯಮ – ಟ್ರ್ಯಾಕಿಂಗ್ ಆಪ್, ವಿಮೆ ಕಡ್ಡಾಯ..ಸರ್ಕಾರದಿಂದ ಮಹತ್ವದ ನಿರ್ಧಾರ.

Bengaluru : ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಚಾರಣಿಗರ (Trekkers) ಸುರಕ್ಷತೆಯನ್ನು ಖಚಿತಪಡಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಇತ್ತೀಚೆಗೆ ಕೊಡಗಿನ ತಡಿಯಂಡಮೋಲ್ ಬೆಟ್ಟದಲ್ಲಿ ಕೇರಳದ ಯುವತಿಯೊಬ್ಬರು ನಾಪತ್ತೆಯಾಗಿ, ನಾಲ್ಕು ದಿನಗಳ ನಂತರ ಪತ್ತೆಯಾದ ಘಟನೆಯ ಹಿನ್ನೆಲೆ ಈ ಹೊಸ ಮಾರ್ಗಸೂಚಿಗಳನ್ನು ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇನ್ನು ಮುಂದೆ ಚಾರಣಿಗರ ಮೊಬೈಲ್ನಲ್ಲಿ ಕಡ್ಡಾಯವಾಗಿ ಟ್ರ್ಯಾಕಿಂಗ್ ಆ್ಯಪ್ ಅಳವಡಿಕೆ ಹಾಗೂ ಪ್ರತಿಯೊಬ್ಬರಿಗೂ ವಿಮೆ ಸೌಲಭ್ಯ ಜಾರಿಗೆ ತರುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ.
READ THIS : ಬಿಗ್ ರಿಲೀಫ್ – ಇನ್ಮುಂದೆ `ಮೊಬೈಲ್ ರೀಚಾರ್ಜ್ ದರ’ ಇಳಿಕೆ..!

ಪ್ರಮುಖ ಕ್ರಮಗಳು ಮತ್ತು ಮಾರ್ಗಸೂಚಿಗಳು
- ಟ್ರ್ಯಾಕಿಂಗ್ ಆ್ಯಪ್ ಕಡ್ಡಾಯ
ಚಾರಣಿಗರು ಕಾಡಿನಲ್ಲಿ ದಾರಿ ತಪ್ಪದಂತೆ, ತುರ್ತು ಸಂದರ್ಭದಲ್ಲಿ ಅವರನ್ನು ಪತ್ತೆ ಹಚ್ಚಲು ತಕ್ಷಣ ಪತ್ತೆ ಹಚ್ಚಲು ಮೊಬೈಲ್ ಟ್ರ್ಯಾಕಿಂಗ್ ಆ್ಯಪ್ ಕಡ್ಡಾಯಗೊಳಿಸಲಾಗಿದೆ. ಮೊಬೈಲ್ ನೆಟ್ವರ್ಕ್ ಇಲ್ಲದ ಪ್ರದೇಶಗಳಿಗೆ ಸ್ಯಾಟಲೈಟ್ ಆಧಾರಿತ ಸಾಧನಗಳ ಬಳಕೆಯೂ ಪರಿಶೀಲನೆಗೆ ಒಳಪಡಲಿದೆ. - ವಿಮೆ ಕಡ್ಡಾಯ
ಪ್ರತಿಯೊಬ್ಬ ಚಾರಣಿಗರಿಗೂ ಅಪಘಾತ ಅಥವಾ ತುರ್ತು ಪರಿಸ್ಥಿತಿಗಳಲ್ಲಿ ಆರ್ಥಿಕ ಸುರಕ್ಷತೆಯನ್ನು ಒದಗಿಸಲು ವಿಮೆ ಜಾರಿಗೆ ತರಲಾಗಿದೆ. ವಿಮೆಯ ವಿವರಗಳು ಶೀಘ್ರದಲ್ಲೇ ಪ್ರಕಟವಾಗಲಿವೆ. - ಆನ್ಲೈನ್ ಬುಕಿಂಗ್ ಕಡ್ಡಾಯ
‘ಅರಣ್ಯ ವಿಹಾರ’ ಪೋರ್ಟಲ್ ಮೂಲಕ ಮಾತ್ರ ಪೂರ್ವಾನುಮತಿ ಪಡೆದು ಪ್ರವೇಶ ಅಗತ್ಯವಿದ್ದು, ಅನುಮತಿ ಇಲ್ಲದೆ ಪ್ರವೇಶಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. - ಮಾರ್ಗದರ್ಶಿಗಳ ನೇಮಕ
ಪ್ರತಿದಿನದ ಚಾರಣಿಗರ ತಂಡಗಳ ಜೊತೆ ಸ್ಥಳೀಯ ಅರಣ್ಯ ಮಾರ್ಗದರ್ಶಿಗಳನ್ನು ಕಡ್ಡಾಯವಾಗಿ ನಿಯೋಜಿಸಲಾಗುವುದು. ಮಾರ್ಗದರ್ಶಿಗಳು ಅಪಾಯ, ವನ್ಯಜೀವಿ ಹಾಗೂ ಹವಾಮಾನ ಬದಲಾವಣೆ ಕುರಿತು ಮಾಹಿತಿ ನೀಡುತ್ತಾರೆ. - ಪರಿಸರ ಸಮತೋಲನ ನಿರ್ವಹಣೆ
ಪ್ರತಿದಿನ ನಿರ್ದಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರ ಪ್ರವೇಶ ಅವಕಾಶ ನೀಡಲಾಗುತ್ತದೆ. ಇದರಿಂದ ಪರಿಸರ ಹಾನಿ ತಡೆಯಲಾಗುತ್ತದೆ. - ತುರ್ತು ಕಂಟ್ರೋಲ್ ರೂಮ್
ಪ್ರತಿ ಅರಣ್ಯ ಪ್ರದೇಶದಲ್ಲಿ 24×7 ತುರ್ತು ಕಂಟ್ರೋಲ್ ರೂಮ್ ಸ್ಥಾಪಿಸಲಾಗುವುದು. ಚಾರಣಿಗರು ತೊಂದರೆಗೆ ಸಿಲುಕಿದರೆ ತಕ್ಷಣ ಸಹಾಯ ಪಡೆಯಬಹುದು.

ಸಚಿವರು ಹೇಳಿದ್ದೇನು..?
ಇನ್ನು ಈ ಬಗ್ಗೆ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ. “ಪೂರ್ವಾನುಮತಿ ಇಲ್ಲದೆ ಅರಣ್ಯ ಪ್ರವೇಶಿಸುವವರ ವಿರುದ್ಧಕಠಿಣ ಕ್ರಮ ಕೈಗೊಳ್ಳಲಾಗುವುದು. ಜನರ ಪ್ರಾಣದ ಬೆಲೆ ತುಂಬಾ ದೊಡ್ಡದು. ಆಕಸ್ಮಿಕಗಳನ್ನು ತಡೆಯುವುದು ನಮ್ಮ ಕರ್ತವ್ಯ.” ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಿನ 15 ದಿನಗಳಲ್ಲಿ ಸಮಗ್ರ ಕಾರ್ಯಯೋಜನೆ ಸಿದ್ಧಪಡಿಸಬೇಕು ಎಂದಿದ್ದಾರೆ.
MUST WATCH : ಆಯತಪ್ಪಿ ಮಹಡಿಯಿಂದ ಬಿದ್ದ ಕಂದಮ್ಮ- ಮಗು ಬೀಳುವ ದೃಶ್ಯ ನೋಡಿದ್ರೆ ಬೆಚ್ಚಿ ಬೀಳ್ತಿರಾ




