ಮೊಬೈಲ್ ರೀಚಾರ್ಜ್ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ TRAI ಭರ್ಜರಿ ಗುಡ್ಬನ್ಯೂಸ್ ಒಂದನ್ನು ನೀಡಿದೆ.

ಕಳೆದ ಕೆಲವು ತಿಂಗಳುಗಳಿಂದ ಮೊಬೈಲ್ ರೀಚಾರ್ಜ್ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಭರ್ಜರಿ ಸಿಹಿಸುದ್ದಿ ನೀಡಿದೆ.
ಕಾಲ್ ಮತ್ತು SMS ಬಳಕೆದಾರರಿಗೆ ಗುಡ್ನ್ಯೂಸ್!
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಕೇವಲ ಡೇಟಾವಿಲ್ಲದೆ ವಾಯ್ಸ್ ಕಾಲ್ ಮತ್ತು SMS ಬಳಕೆ ಮಾಡುವ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಮೊಬೈಲ್ ರೀಚಾರ್ಜ್ ಬೆಲೆ ಏರಿಕೆಯೊಂದರಿಂದ ತೊಂದರೆ ಅನುಭವಿಸುತ್ತಿದ್ದ ಗ್ರಾಹಕರು, ಶೀಘ್ರದಲ್ಲೇ ಅಗ್ಗದ ‘ಕಾಲ್ + ಎಸ್ಎಂಎಸ್’ ಪ್ಲಾನ್ಗಳ ಲಾಭ ಪಡೆಯಬಹುದಾಗಿದೆ.
`ಮೊಬೈಲ್ ರೀಚಾರ್ಜ್ ದರ’ ಇಳಿಕೆ..!
TRAI ನೀಡಿದ ಸೂಚನೆಯಂತೆ, ಎಲ್ಲಾ ಟೆಲಿಕಾಂ ಕಂಪನಿಗಳು ಕಡ್ಡಾಯವಾಗಿ ‘ಸ್ಪೆಸಿಫಿಕ್ ಟ್ಯಾರಿಫ್ ವೋಚರ್’ಗಳನ್ನು ಹೊರತರುವ ಮೂಲಕ ಕೇವಲ ವಾಯ್ಸ್ ಮತ್ತು SMS ಸೇವೆಗಳಿಗೆ ಮಾತ್ರ ಸೀಮಿತವಾದ ಪ್ಲಾನ್ಗಳನ್ನು ಗ್ರಾಹಕರಿಗೆ ಒದಗಿಸಬೇಕು. ಈ ಪ್ಲಾನ್ಗಳು ಕಡಿಮೆ ದಿನಗಳ ವ್ಯಾಲಿಡಿಟಿ ಇರುವುದಲ್ಲದೆ, ಡೇಟಾ ಪ್ಯಾಕ್ಗಳಿಗಿಂತ ಗಣನೀಯವಾಗಿ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತವೆ.
READ THIS : ಹ್ಯಾಟ್ರಿಕ್ ಸೋಲುಂಡ KKR ಇಂದಾದ್ರೂ ಗೆಲ್ಲುತ್ತಾ.?

ಹೊಸ ನಿಯಮದ ಪ್ರಮುಖ ಅಂಶಗಳು
- ಪ್ರತಿ ಟೆಲಿಕಾಂ ಕಂಪನಿಗೆ ಕನಿಷ್ಠ ಒಂದು ಕೇವಲ ‘ಕಾಲ್ + ಎಸ್ಎಂಎಸ್’ ಪ್ಲಾನ್ ಕಡ್ಡಾಯ.
- ಈ ಪ್ಲಾನ್ಗಳು ಕಡಿಮೆ ಅವಧಿ ಮತ್ತು ದೀರ್ಘಾವಧಿ ಎರಡಕ್ಕೂ ಲಭ್ಯ.
- ಡೇಟಾ ಪ್ಯಾಕ್ಗಳಿಗಿಂತ ತೀರ ಕಡಿಮೆ ಬೆಲೆ.
ಸಾಮಾನ್ಯರಿಗೆ ಸಿಗುವ ಪ್ರಯೋಜನಗಳು
- ಹಿರಿಯ ನಾಗರಿಕರಿಗೆ ಅನುಕೂಲ: ಇಂಟರ್ನೆಟ್ ಅವಶ್ಯಕತೆ ಇಲ್ಲದ ವೃದ್ಧರು ಕಡಿಮೆ ವೆಚ್ಚದಲ್ಲಿ ಸಂಪರ್ಕ ಸಾಧಿಸಬಹುದು.
- ಗ್ರಾಮೀಣ ಭಾಗದ ಗ್ರಾಹಕರಿಗೆ ಉಳಿತಾಯ: ಕೇವಲ ಮಾತನಾಡಲು ಮೊಬೈಲ್ ಬಳಸುವ ಹಳ್ಳಿಗಳಿಗೆ ಹಣ ಉಳಿತಾಯ.
- ಪಾರದರ್ಶಕತೆ: ಗ್ರಾಹಕರು ತಮ್ಮ ಅಗತ್ಯಕ್ಕೆ ತಕ್ಕ ಸೇವೆಗಳನ್ನು ಮಾತ್ರ ಆಯ್ಕೆ ಮಾಡಬಹುದು.
- ಮಾರುಕಟ್ಟೆಯಲ್ಲಿ ಸ್ಪರ್ಧೆ: ಪ್ಲಾನ್ಗಳ ವಿಭಿನ್ನತೆಗೆ ಸಹಕಾರ, ಸ್ಪರ್ಧಾತ್ಮಕ ದರಗಳ ಪ್ರಮಾಣ.

ದೊಡ್ಡ ಮಟ್ಟದ ಉಳಿತಾಯ
ಒಟ್ಟಾರೆಯಾಗಿ, ಟ್ರಾಯ್ ತೆಗೆದುಕೊಂಡಿರುವ ಈ ನಿರ್ಧಾರದಿಂದಾಗಿ ಮಧ್ಯಮ ಮತ್ತು ಕೆಳವರ್ಗದ ಜನರ ಜೇಬಿಗೆ ಬೀಳುತ್ತಿದ್ದ ಕತ್ತರಿ ತಪ್ಪಲಿದ್ದು, ಮೊಬೈಲ್ ಬಿಲ್ನಲ್ಲಿ ದೊಡ್ಡ ಮಟ್ಟದ ಉಳಿತಾಯವಾಗಲಿದೆ.
MUST WATCH : ರಾಜಣ್ಣ ಪುತ್ರಿ ಮುಂದಿನ ಚುನಾವಣೆಯಲ್ಲಿ ನಿಲ್ಲೋದು ಕನ್ಫರ್ಮ್- ಎಲ್ಲಿಂದ ಸ್ಪರ್ಧಿಸ್ತಾರೆ ಗೊತ್ತಾ..?




