ತವರಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ಗೆ KKR ಸವಾಲು.

ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಈ ಬಾರಿ ಐಪಿಎಲ್ ಟೂರ್ನಿಯಲ್ಲಿ ಕಳಪೆ ಆರಂಭ ಕಂಡಿದ್ದು, ಆಡಿದ ಮೂರು ಪಂದ್ಯಗಳಲ್ಲಿಯೂ ಒಂದರಲ್ಲೂ ಗೆಲುವು ಸಾಧಿಸಿಲ್ಲ. ಇನ್ನು ಇಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ತವರಿನಲ್ಲೇ ನಡೆಯಲಿರುವ ಪಂದ್ಯದಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದಾರೆ.
KKR ಇಂದಾದ್ರೂ ಗೆಲ್ಲುತ್ತಾ.?
2026ರ 15ನೇ ಪಂದ್ಯವು ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆಯಲಿದ್ದು, ಸತತ ಸೋಲುಗಳಿಂದ ಕಂಗೆಟ್ಟಿರುವ ಕೆಕೆಆರ್ ತಂಡವು ಲಕ್ನೋ ವಿರುದ್ದ ಮೊದಲ ಜಯದ ಹುಡುಕಾಟದಲ್ಲಿದೆ. ಅಜಿಂಕ್ಯಾ ರಹಾನೆ ನಾಯಕತ್ವದ KKR, ಮುಂಬೈ ಹಾಗೂ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲು ಕಂಡಿದೆ. ಪಂಜಾಬ್ ವಿರುದ್ದದ ಪಂದ್ಯವು ಸಹ ಮಳೆಯಿಂದಾಗಿ ರದ್ದುಗೊಂಡಿತ್ತು. ಇನ್ನೊಂದೆಡೆ ರಿಷಬ್ ಪಂತ್ ನಾಯಕತ್ವದ ಲಕ್ನೋ ತಂಡ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೋತಿದ್ರೂ, ಬಳಿಕ ಸನ್ ರೈಸರ್ಸ್ ವಿರುದ್ದ ಗೆಲುವು ಸಾಧಿಸಿ ಆತ್ಮವಿಶ್ವಾs ಹೆಚ್ಚಿಸಿಕೊಂಡಿದೆ.

READ THIS : ನೇಣು ಬಿಗಿದ ಸ್ಥಿತಿಯಲ್ಲಿ 6ನೇ ತರಗತಿ ಬಾಲಕಿಯ ಶವ ಪತ್ತೆ!
ವಿದೇಶಿ ಬ್ಯಾಟರ್ಗಳ ಮೇಲೆ ಹೆಚ್ಚಿನ ನಂಬಿಕೆ
ಇನ್ನು ಕೆಕೆಆರ್ ತಂಡಕ್ಕೆ ಈ ಬಾರಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಸ್ಥಿರತೆ ಕಾಣಿಸುತ್ತಿಲ್ಲ, ಬ್ಯಾಟಿಂಗ್ ವಿಭಾಗ ಕೆಲ ಮಟ್ಟಿಗೆ ಸಮಾಧಾನಕರವಾಗಿದ್ರೂ, ಇಂದು ಮೊಹಮ್ಮದ್ ಶಮಿ ಅವರ ಬೌಲಿಂಗ್ ದಾಳಿಯನ್ನ ಹೇಗೆ ಎದುರಿಸಲಿದೆ ಎಂಬುದು ಕುತೂಹಲಕಾರಿಯಾಗಿದೆ. ಇನ್ನು ಲಕ್ನೋ ತಂಡ ವಿದೇಶಿ ಬ್ಯಾಟರ್ಗಳ ಮೇಲೆ ಹೆಚ್ಚಿನ ನಂಬಿಕೆ ಇಟ್ಟುಕೊಂಡಿದ್ದು, ಗೆಲುವಿನ ಓಟವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.
7.30ಕ್ಕೆ ಪಂದ್ಯ ಆರಂಭ
ಇನ್ನು ಎರಡೂ ತಂಡಗಳಿಗೆ ಇದು ಮಹತ್ವದ ಪಂದ್ಯವಾಗಿದ್ದು, ಇಂದು ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದ್ದು, ಅಭಿಮಾನಿಗಳು ಈ ಬಾರಿಯಾದ್ರೂ ಕೆಕೆಆರ್ ತಂಡ ಗೆಲುವು ಸಾಧಿಸುತ್ತಾ ಎಂಬ ಕುತೂಹಲದಲ್ಲಿದ್ದಾರೆ.

MUST WATCH : ಪ್ರೀತಿಸಿ ಮದುವೆ ಆದವರ ಬಾಳಲ್ಲಿ ಇದೆಂಥಾ ಘಟನೆ- ಹೆಂಡ್ತಿ ಮನೆಯವರೇ ಕೊಲೆ ಮಾಡಿರೋ ಆರೋಪ?




