Shivamogga : ನೇಣು ಬಿಗಿದುಕೊಂಡು ಸಾವಿಗೆ ಶರಣಾದ 12 ವರ್ಷದ ಬಾಲಕಿ – ಪೋಷಕರು ಕೆಲಸಕ್ಕೆ ಹೋಗಿದ್ದಾಗ ದುರಂತ

6 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ Shivamogga ಜಿಲ್ಲೆಯಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಜೀವಿತಾ (12) ಎಂದು ಗುರುತಿಸಲಾಗಿದೆ.
ನೇಣು ಬಿಗಿದ ಸ್ಥಿಯಲ್ಲಿ ಬಾಲಕಿ ಶವ ಪತ್ತೆ!
ಶಿವಮೊಗ್ಗ ಜಿಲ್ಲೆಯ ಬೊಮ್ಮನ ಕಟ್ಟೆ ಬಡಾವಣೆಯ ಎ-ಬ್ಲಾಕ್ನಲ್ಲಿ ಜೀವಿತಾ ತನ್ನ ಪೋಷಕರೊಂದಿಗೆ ವಾಸವಿದ್ದಳು. ಆದರೆ ಈಗ ಬಾಲಕಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
READ THIS : ಕದನ ವಿರಾಮ ಬೆನ್ನಲ್ಲೇ ಇರಾನ್ಗೆ ಶೂಟೌಟ್ ಎಚ್ಚರಿಕೆ ರವಾನಿಸಿದ Trump

ಪೋಷಕರು ಕೆಲಸಕ್ಕೆ ಹೋಗಿದ್ದಾಗ ದುರಂತ
ಮೃತ ಬಾಲಕಿ 12 ವರ್ಷದ ಜೀವಿತಾ ಬೊಮ್ಮನ ಕಟ್ಟೆಯ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದಳು. ಇತ್ತೀಚೆಗೆ ಪರೀಕ್ಷೆ ಮುಗಿದ ರಜೆ ಇದ್ದ ಕಾರಣ, ಮನೆಯಲ್ಲೇ ಒಬ್ಬಳೇ ಇದ್ದಳು. ಪೋಷಕರು ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ವೇಳೆ ಬಾಲಕಿ ಸಾವಿಗೆ ಶರಣಾಗಿದ್ದಾಳೆ. ನಂತರ ಪೋಷಕರು ಸಂಜೆ ಮನೆಗೆ ಬಂದಾಗ ಈ ದುಃಖದ ಘಟನೆ ಬೆಳಕಿಗೆ ಬಂದಿದೆ.
Shivamogga – ಪ್ರಕರಣ ದಾಖಲು
ಇನ್ನು ಮಗಳ ಶವ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
MUST WATCH : ಮಹಿಳಾ ಅಧಿಕಾರಿಗೆ BLACKMAIL – ಆರೋಪಿ ಬಂಧನವೇ ರೋಚಕ..!





