ಡೊನಾಲ್ಡ್ ಟ್ರಂಪ್ (Donald Trump) ಇರಾನ್ಗೆ ಖಡಕ್ ಎಚ್ಚರಿಕೆಯ ಸಂದೇಶವೊಂದನ್ನು ರವಾನಿದ್ದಾರೆ.

ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ಗೆ ಖಡಕ್ ಎಚ್ಚರಿಕೆಯ ಸಂದೇಶವೊಂದನ್ನು ರವಾನಿದ್ದಾರೆ.
ಭೀಕರವಾದ ದಾಳಿ ಎದುರಾಗಲಿದೆ
ಕದನ ವಿರಾಮ ಒಪ್ಪಂದವನ್ನು ಪಾಲಿಸುವವರೆಗೆ ಮಾತ್ರ ಇರಾನ್ ಹಾಗೂ ಅದರ ಸುತ್ತಮುತ್ತ ಪ್ರದೇಶಗಳು ಸುರಕ್ಷಿತವಾಗಿರಲಿವೆ. ಒಂದು ವೇಳೆ ಒಪ್ಪಂದ ಉಲ್ಲಂಘನೆಯಾದರೆ, ಇದುವರೆಗಿನದಕ್ಕಿಂತಲೂ ಭೀಕರವಾದ ದಾಳಿ ಎದುರಾಗಲಿದೆ ಎಂದು Trump ಎಚ್ಚರಿಸಿದ್ದಾರೆ.
ಇರಾನ್ ಸುತ್ತಮುತ್ತ ಅಮೆರಿಕದ ಪಡೆಗಳು
ಇನ್ನು ಮುಂದೆ ಹಾರ್ಮುಜ್ ಜಲಸಂಧಿ ಸುರಕ್ಷಿತವಾಗಿ ಮತ್ತು ಮುಕ್ತವಾಗಿ ಇರಲಿದೆ.ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಅವಕಾಶ ಇಲ್ಲವೆಂದು ಸ್ಪಷ್ಟಪಡಿಸಿದ ಟ್ರಂಪ್, ಒಪ್ಪಂದ ಅಂತಿಮಗೊಳ್ಳುವವರೆಗೆ ಅಮೆರಿಕದ ಪಡೆಗಳನ್ನು ಇರಾನ್ ಸುತ್ತಮುತ್ತ ನಿಯೋಜಿಸಲಾಗುವುದು ಎಂದು ಹೇಳಿದ್ದಾರೆ.
READ THIS : IPL ನಡುವೆ 5 ಹೊಸ ನಿಯಮಗಳು ಜಾರಿ – ನಿಯಮ ಉಲ್ಲಂಘಿಸಿದ್ರೆ ಬೀಳುತ್ತೆ ದಂಡ!

14 ದಿನಗಳ ಕದನ ವಿರಾಮ
ಏ.7 ರಂದು ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧಕ್ಕೆ 14 ದಿನಗಳ ಕದನ ವಿರಾಮ ಘೋಷಣೆಯಾಗಿತ್ತು.ಕದನ ವಿರಾಮ ಘೋಷಣೆಗೂ ಮನ್ನ ಇರಾನ್ 10 ಷರತ್ತುಗಳನ್ನು ಮುಂದಿಟ್ಟಿದ್ದು, ಅವುಗಳನ್ನು ಅಮೆರಿಕ ಯಾವ ರೀತಿ ಸ್ವೀಕರಿಸುತ್ತದೆ ಎಂಬುದರ ಮೇಲೆ ಕದನ ವಿರಾಮದ ಭವಿಷ್ಯ ನಿರ್ಧಾರವಾಗಲಿದೆ.
ಶಾಂತಿ ಮಾತುಕತೆಗೆ ಉತ್ತಮ ಆಧಾರ
ಇರಾನ್ ಕಡೆಯಿಂದ 10 ಅಂಶಗಳ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದ್ದು, ಇದು ಶಾಶ್ವತ ಶಾಂತಿ ಮಾತುಕತೆಗೆ ಉತ್ತಮ ಆಧಾರವಾಗಿದೆ.

MUST WATCH : ರಾಜ್ಯದಲ್ಲಿ ಹೆಚ್ಚಾಗ್ತಾ ಇದ್ಯಾ POCSO ಕೇಸ್ ? – ಆರೋಗ್ಯ ಇಲಾಖೆಗೆ ಗೈಡ್ ಲೈನ್ಸ್ ರಿಲೀಸ್




