LPG GAS ಸಿಲಿಂಡರ್ನಿಂದ ಪಿಎನ್ಜಿ ಕನೆಕ್ಷನ್ ಗೆ ಬದಲಾಗಲು ಗ್ರಾಹಕರಿಗೆ ನೀಡಲಾಗಿದ್ದ ಗಡುವು ಜೂನ್ 30ಕ್ಕೆ ಮುಕ್ತಾಯಗೊಳ್ಳಲಿದೆ.

ನೀವು LPG GAS ಸಿಲಿಂಡರ್ ಜೊತೆಗೆ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಕನೆಕ್ಷನ್ ಕೂಡ ಹೊಂದಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. ಎಲ್ ಪಿಜಿ ಗ್ಯಾಸ್ ಸಿಲಿಂಡರ್ನಿಂದ ಪಿಎನ್ಜಿ ಕನೆಕ್ಷನ್ ಗೆ ಬದಲಾಗಲು ಗ್ರಾಹಕರಿಗೆ ನೀಡಲಾಗಿದ್ದ ಗಡುವು ಜೂನ್ 30ಕ್ಕೆ ಮುಕ್ತಾಯಗೊಳ್ಳಲಿದೆ.
ಮಾರ್ಚ್ ತಿಂಗಳಿನಲ್ಲಿ ಇರಾನ್-ಅಮೆರಿಕ ಸಂಘರ್ಷದ ಹಿನ್ನೆಲೆಯಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಈ ಮಹತ್ವದ ಆದೇಶವನ್ನು ಹೊರಡಿಸಿತ್ತು.
ಒಂದು ಕುಟುಂಬಕ್ಕೆ ಒಂದೇ ಕನೆಕ್ಷನ್ ನಿಯಮ!
ಕೇಂದ್ರ ಸರ್ಕಾರದ ಹೊಸ ನಿಯಮದ ಪ್ರಕಾರ, ಒಂದು ಕುಟುಂಬವು LPG ಮತ್ತು PNG ಎರಡೂ ಕನೆಕ್ಷನ್ಗಳನ್ನು ಒಂದೇ ಸಮಯದಲ್ಲಿ ಹೊಂದಲು ಅವಕಾಶ ಇರುವುದಿಲ್ಲ. ನಿಮ್ಮ ಪ್ರದೇಶದಲ್ಲಿ PNG ಸೌಲಭ್ಯ ಲಭ್ಯವಿದ್ದರೆ, ನೀವು ಕಡ್ಡಾಯವಾಗಿ PNGಗೆ ಬದಲಾಗಬೇಕು ಮತ್ತು LPG ಕನೆಕ್ಷನ್ ಅನ್ನು ಸರೆಂಡರ್ ಮಾಡಬೇಕು.
ಈ ಬದಲಾವಣೆಗೆ ಸರ್ಕಾರ 90 ದಿನಗಳ ಕಾಲಾವಕಾಶ ನೀಡಿದ್ದು, ಆ ಗಡುವು ಜೂನ್ 30ರಂದು ಅಂತ್ಯಗೊಳ್ಳಲಿದೆ. ಹೀಗಾಗಿ ಇನ್ನೂ ಬದಲಾವಣೆ ಮಾಡದ ಗ್ರಾಹಕರು ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಇದನ್ನು ಓದಿ : ಗೃಹ ಬಳಕೆಯ LPG Cylinder 60 ರೂ. ಏರಿಕೆ

ಜೂನ್ 30ರ ನಂತರ ಏನಾಗಲಿದೆ?
ಜೂನ್ 30ರ ನಂತರ, PNG ಸೌಲಭ್ಯ ಲಭ್ಯವಿದ್ದರೂ LPG ಬಳಕೆಯನ್ನು ಮುಂದುವರಿಸುವ ಗ್ರಾಹಕರ LPG ಕನೆಕ್ಷನ್ ಸ್ಥಗಿತಗೊಳ್ಳುವ ಅಥವಾ ರದ್ದಾಗುವ ಸಾಧ್ಯತೆ ಇದೆ. ಈಗಾಗಲೇ PNG ಸಂಪರ್ಕ ಹೊಂದಿರುವವರು ತಮ್ಮ LPG ಸಿಲಿಂಡರ್ಗಳನ್ನು ಹಿಂತಿರುಗಿಸಬೇಕಾಗಿದೆ.
ಆದರೆ, ಇನ್ನೂ PNG ಪೈಪ್ಲೈನ್ ತಲುಪದ ಪ್ರದೇಶಗಳ ಗ್ರಾಹಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಅಂತಹ ಪ್ರದೇಶಗಳಲ್ಲಿ LPG ಬಳಕೆಯನ್ನು ಎಂದಿನಂತೆ ಮುಂದುವರಿಸಬಹುದು.
ದೇಶಾದ್ಯಂತ ವೇಗವಾಗಿ ಹೆಚ್ಚುತ್ತಿರುವ ಪಿಎನ್ ಜಿ ಕನೆಕ್ಷನ್
ದೇಶಾದ್ಯಂತ PNG ಸಂಪರ್ಕಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದ್ದು, ಲಕ್ಷಾಂತರ ಕುಟುಂಬಗಳು ಈಗಾಗಲೇ ಈ ಸೇವೆಗೆ ಬದಲಾಗಿವೆ.
ಸರ್ಕಾರ ಮತ್ತು ತೈಲ ಕಂಪನಿಗಳು ಕೊನೆಯ ಕ್ಷಣದವರೆಗೆ ಕಾಯದೆ, ಅರ್ಹ ಗ್ರಾಹಕರು ಜೂನ್ 30ರೊಳಗೆ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಮನವಿ ಮಾಡಿವೆ.

ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಮುಂಚಿತವಾಗಿಯೇ ಕ್ರಮ ಕೈಗೊಳ್ಳುವುದು ಉತ್ತಮ ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಇದನ್ನು ನೋಡಿ : ಪೂಜೆ ವಿಚಾರಕ್ಕೆ ದಾಯಾದಿಗಳ ಕಲಹ – ಜಮೀನಿನಲ್ಲೇ ಪತ್ರಕರ್ತನಿಗೆ ಚಾಕು ಇರಿತ




