ಪ್ರಜ್ಞಾಹೀನ ಸ್ಥಿತಿಯಲ್ಲಿ Iran ನ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನೈ.

ಅಮೆರಿಕದ ಕದನ ವಿರಾಮಕ್ಕೆ ಒಪ್ಪದ ಇರಾನ್ ಮೇಲೆ ಭೀಕರ ದಾಳಿಯ ಎಚ್ಚರಿಕೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಟ್ಟಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೇ ಇರಾನ್ಗೆ ದೊಡ್ಡ ಆಘಾತ ಎದುರಾಗಿದೆ.

ಪ್ರಜ್ಞಾಹೀನ ಸ್ಥಿತಿಯಲ್ಲಿ ಸುಪ್ರೀಂ ಲೀಡರ್
ಅಮೆರಿಕಾ ಹಾಗೂ ಇಸ್ರೇಲ್ ಗುಪ್ತಚರ ಮೂಲಗಳನ್ನಾಧರಿಸಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದು, ಇರಾನ್ನ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ ಪ್ರಜ್ಞಾಹೀನರಾಗಿದ್ದಾರೆ ಎನ್ನಲಾಗಿದೆ. ಗಂಭೀರ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದ ಖಮೇನಿ ಅವರನ್ನು ಸದ್ಯ ಅವರನ್ನ ಕೋಮ್ ನಗರದ ರಹಸ್ಯ ಸ್ಥಳದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
READ THIS : ದ್ವಿತೀಯ PUC ರಿಸಲ್ಟ್ಗೆ ದಿನಾಂಕ ಫಿಕ್ಸ್ – ಯಾವಾಗ ಗೊತ್ತಾ ಫಲಿತಾಂಶ ..?

Iran ಸರ್ಕಾರವಾಗಲಿ, ಸೇನೆಯಾಗಲಿ ಅಧಿಕೃತ ಮಾಹಿತಿ ನೀಡಿಲ್ಲ
ಈ ಬೆಳವಣಿಗೆ ಅಮೆರಿಕದ ದಾಳಿ ಎಚ್ಚರಿಕೆಯ ನಡುವೆಯೇ ಸಂಭವಿಸಿರುವುದರಿಂದ, ಇರಾನ್ನ ಆಡಳಿತ ಸಾಮರ್ಥ್ಯ ಮತ್ತು ಮುಂದಿನ ನಿರ್ಧಾರಗಳ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಪ್ರಮುಖ ನಾಯಕತ್ವದ ಕೊರತೆ ಯುದ್ಧ ಸಂಬಂಧಿತ ನಿರ್ಧಾರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗಿದೆ. ಇನ್ನು ಈ ಕುರಿತು ಇರಾನ್ ಸರ್ಕಾರವಾಗಲಿ ಅಥವಾ ಸೇನೆಯಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

MUST WATCH : ಸ್ವಚ್ಛ ತುಮಕೂರಿಗೆ ತುಮಕೂರು ಪಾಲಿಕೆ ಕಮಿಷನರ್ ಪಣ- ಹೆಂಗೆ ಕೆಲಸ ಮಾಡಿಸ್ತಾ ಇದ್ದಾರೆ ಗೊತ್ತಾ..?




