ಇಂದು ಬರಬೇಕಿದ್ದ ದ್ವಿತೀಯ PUC ಫಲಿತಾಂಶ ಪೋಸ್ಟ್ ಪೋನ್.

ದ್ವಿತೀಯ PUC ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ನಿರಾಸೆ ಮೂಡಿಸಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಇಂದು ಪ್ರಕಟವಾಗಬೇಕಿದ್ದ ದ್ವಿತೀಯ ಪಿಯುಸಿ ಫಲಿತಾಂಶವನ್ನ ಕೆಲ ಕಾರಣಾಂತರಗಳಿಂದ ಮುಂದೂಡಿದೆ.
ಉಪಚುನಾವಣೆ ಹಿನ್ನಲೆ ಫಲಿತಾಂಶ ಮುಂದೂಡಿಕೆ
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದೇ ಫಲಿತಾಂಶ ಪ್ರಕಟಣೆಗೆ ಪ್ರಮುಖ ಕಾರಣ ಎನ್ನಲಾಗ್ತಿದೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9 ರಂದು ಮತದಾನ ನಿಗದಿಯಾಗಿರುವ ಹಿನ್ನಲೆಯಲ್ಲಿ, ಕೆಲವು ಭಾಗಗಳಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ನೀತಿ ಸಂಹಿತೆ ಜಾರಿಯಲ್ಲಿರೋದ್ರಿಂದ ಸಚಿವರು ಚುನಾವಣಾ ಆಯೋಗದ ಪೂರ್ವಾನುಮತಿ ಪಡೆಯಬೇಕಾಗಿದೆ. ಹೀಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಫಲಿತಾಂಶ ಮುಂದೂಡಿದೆ.
READ THIS : ಬರೋಬ್ಬರಿ 12 ವರ್ಷಗಳ ಬಳಿಕ ಆಂಧ್ರಪ್ರದೇಶಕ್ಕೆ ಅಧಿಕೃತ ರಾಜಧಾನಿ ಘೋಷಣೆ!

ರಿಸಲ್ಟ್ ನೋಡೋದು ಹೇಗೆ..?
ಇನ್ನು ಈಗಾಗಲೇ ಫಲಿತಾಂಶ ಅನುಮತಿ ಕೋರಿ ಕೆಎಸ್ಇಎಬಿ ಚುನಾವಣೆ ಆಯೋಗಕ್ಕೆ ಪತ್ರ ಬರೆದಿದೆ. ಆಯೋಗವು ಅನುಮತಿ ನೀಡಿದ ತಕ್ಷಣವೇ ಫಲಿತಾಂಶದ ದಿನಾಂಕವನ್ನ ಅಧಿಕೃತವಾಗಿ ಘೋಷಿಸಲು ಸಿದ್ದತೆ ಮಾಡಿಕೊಂಡಿದೆ. ಇನ್ನು ಫಲಿತಾಂಶ ನೋಡೋದು ಹೇಂಗೆದ್ರೆ, ಫಲಿತಾಂಶ ಪ್ರಕಟವಾದ ಬಳಿಕ ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟ್ karresults.nic.in ಗೆ ಭೇಟಿ ನೀಡಿ, ಕರ್ನಾಟಕ ಸೆಕೆಂಡ್ ಪಿಯುಸಿ ರಿಸಲ್ಟ್ 2026 ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರಿಜಿಸ್ಟರ್ ನಂ. ಹಾಗೂ ಜನ್ಮ ದಿನಾಂಕ ನಮೂದಿಸಿ, ಸಬ್ಮಿಟ್ ಬಟನ್ ಒತ್ತಿದ್ರೆ, ನಿಮ್ಮ ಫಲಿತಾಂಶ ದೊರಕಲಿದೆ.
ಯಾವಾಗ PUC ಫಲಿತಾಂಶ ಪ್ರಕಟ
ಇನ್ನು ಏಪ್ರಿಲ್ 9 ರಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಅಧಿಕೃತವಾಗಿ ಹೊರ ಬೀಳಲಿದ್ದು, ಯಾವುದೇ ವದಂತಿಗಳಿಗೆ ಕಿವಿಗೊಡದೆ, ಅಧಿಕೃತ ವೆಬ್ಸೈಟ್ ಹಾಗೂ ಶಿಕ್ಷಣ ಇಲಾಖೆಯ ಪ್ರಕಟಣೆಗಳನ್ನು ಮಾತ್ರ ಗಮನಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

MUST WATCH : ಶಿಕ್ಷಕಿಯ ಮೇಲೆ ಇದೆಂಥಾ ಜಿದ್ದು- ಮಾರಕಾಸ್ತ್ರಗಳಿಂದ ಕೊಂದು, ಪೆಟ್ರೋಲ್ ಹಾಕಿ ಸುಟ್ಟ ಕಿಡಿಗೇಡಿಗಳು




