ಕೊನೆಗೂ Andra Pradesh ಗೆ ಸಿಕ್ತು ರಾಜಧಾನಿ!

ಬರೋಬ್ಬರಿ 12 ವರ್ಷಗಳ ಬಳಿಕ ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ ಎನ್ನುವ ಅಧಿಕೃತ ಘೋಷಣೆ ಹೊರಬಿದ್ದಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಮಂಗಳವಾರ ಆಂಧ್ರಪ್ರದೇಶದ ರಾಜಧಾನಿ ಅಮರಾವತಿ ಎಂದು ಘೋಷಿಸಿದ್ದಾರೆ.
ಆಂಧ್ರಪ್ರದೇಶಕ್ಕೆ ಅಧಿಕೃತ ರಾಜಧಾನಿ ಘೋಷಣೆ
ಕಾನೂನು ಮತ್ತು ನ್ಯಾಯ ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯ ನಂತರ, ಸಿಎಂ ಚಂದ್ರಬಾಬು ನಾಯ್ಡು ಅವರು ಸಾಮಾಜಿಕ ಜಾಲತಾಣ X ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಮರಾವತಿಯನ್ನು ರಾಜಧಾನಿಯಾಗಿ ಘೋಷಿಸುವ ಪ್ರಕ್ರಿಯೆಗೆ ದ್ರೌಪದಿ ಮುರ್ಮು ಅವರು ಏಪ್ರಿಲ್ 6, 2026ರಂದು ಒಪ್ಪಿಗೆ ನೀಡಿದ ನಂತರ ಅಧಿಕೃತತೆ ದೊರಕಿತು.
READ THIS : ಯುದ್ಧ ನಿಲ್ಲಿಸಲು ‘10 ಪಾಯಿಂಟ್ಸ್ ಪ್ಲಾನ್’ ಪ್ರಸ್ತಾಪಿಸಿದ Eran – ಮತ್ತೆ ಕೆರಳಿ ಕೆಂಪಾದ ಟ್ರಂಪ್!

ಅವಧಿ ಮುಗಿದ ಹಿನ್ನಲೆ ಅಧಿಕೃತ ಘೋಷಣೆ
2014ರಲ್ಲಿ ನಡೆದ Andra Pradesh ವಿಭಜನೆ ನಂತರ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ರೂಪುಗೊಂಡಿತು. ಆಗಿನಿಂದ ಹತ್ತು ವರ್ಷಗಳ ಕಾಲ, ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೆ ಹೈದರಾಬಾದ್ ರಾಜಧಾನಿ ಎನ್ನುವ ಘೋಷಣೆಯನ್ನು ಮಾಡಲಾಗಿತ್ತು. ಈಗ ಆ ಅವಧಿ ಮುಗಿದ ಹಿನ್ನೆಲೆಯಲ್ಲಿ ಅಮರಾವತಿಯನ್ನು ಅಧಿಕೃತವಾಗಿ ಘೋಷಿಸಲಾಗಿದೆ.
Andra Pradesh ಗೆ ಸಿಕ್ತು ರಾಜಧಾನಿ! ನಾಯ್ಡು ಅವರ ಟ್ವೀಟ್ನಲ್ಲಿ ಏನಿದೆ?
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ನಾಯ್ಡು, ನಮ್ಮ ರಾಜಧಾನಿಯ ಬಹುದಿನಗಳ ಕನಸನ್ನು ನನಸಾಗಿಸುವ ಮೂಲಕ ಆಂಧ್ರಪ್ರದೇಶ ಪುನರ್ವಿಂಗಡಣೆ (ತಿದ್ದುಪಡಿ) ಕಾಯ್ದೆ, 2026ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ದಯೆಯಿಂದ ಒಪ್ಪಿಗೆ ನೀಡಿದ್ದಕ್ಕಾಗಿ ಆಂಧ್ರಪ್ರದೇಶದ ನನ್ನ ಜನರ ಪರವಾಗಿ ನಾನು ಅವರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಇದು ಆಂಧ್ರಪ್ರದೇಶದ ನನ್ನ ಜನರಿಗೆ, ವಿಶೇಷವಾಗಿ ಅಮರಾವತಿಯ ನನ್ನ ರೈತರಿಗೆ ಸಿಕ್ಕ ಜಯ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

MUST WATCH : ಒಳ ಮೀಸಲಾತಿ ಜಾರಿಗೆ ರಾಜಣ್ಣ ಆಗ್ರಹ ಸ್ವ ಪಕ್ಷದ ವಿರುದ್ಧವೇ ಗುಡುಗಿದ ರಾಜಣ್ಣ




