ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗುತ್ತಿದೆ. ಅಮೆರಿಕದ Ceasefire ಪ್ರಸ್ತಾವನೆಯನ್ನು Iran ಸೋಮವಾರ ಅಧಿಕೃತವಾಗಿ ತಿರಸ್ಕರಿಸಿದೆ.

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತಷ್ಟು ಗಂಭೀರವಾಗುತ್ತಿದೆ. ಇರಾನ್ ಅಮೆರಿಕದ ಕದನ ವಿರಾಮ ಪ್ರಸ್ತಾವನೆಯನ್ನು ತಿರಸ್ಕರಿಸಿ ತನ್ನದೇ ಆದ 10 ಅಂಶಗಳ ಶಾಂತಿ ಯೋಜನೆಯನ್ನು ಜಗತ್ತಿನ ಮುಂದಿಟ್ಟಿದೆ. ಈ ಬೆಳವಣಿಗೆಗೆ ಅಮೆರಿಕ ಅಧ್ಯಕ್ಷ Donald Trump ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಗಿದೆ.

ಇರಾನ್ನ10 ಅಂಶಗಳಯೋಜನೆ ಏನು?
IRNA ವರದಿ ಪ್ರಕಾರ, ಇರಾನ್ ಮಂಡಿಸಿರುವ ಯೋಜನೆಯಲ್ಲಿ ಮುಖ್ಯವಾಗಿ ಈ ಬೇಡಿಕೆಗಳನ್ನು ಮುಂದಿರಿಸಲಾಗಿದೆ.
1) ಪ್ರಾದೇಶಿಕ ಸಂಘರ್ಷದ ಅಂತ್ಯ : ಈ ಪ್ರದೇಶದಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಸಂಘರ್ಷಗಳನ್ನು ಕೊನೆಗೊಳಿಸುವುದು.
2) ಶಾಶ್ವತ ಯುದ್ಧ ವಿರಾಮ : ತಾತ್ಕಾಲಿಕ ಕದನ ವಿರಾಮದ ಬದಲಿಗೆ ಯುದ್ಧಕ್ಕೆ ಸಂಪೂರ್ಣ ಮತ್ತು ಶಾಶ್ವತ ಅಂತ್ಯ ಹಾಡುವುದು. 3) ಹೋರ್ಮುಜ್ ಜಲಸಂಧಿಯಲ್ಲಿ ಸುರಕ್ಷತೆ: ಹೋರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸುರಕ್ಷಿತ ಸಂಚಾರ ಖಚಿತಪಡಿಸುವ ವ್ಯವಸ್ಥೆ ಜಾರಿಗೆ ತರುವುದು.
4) ಯುರೇನಿಯಂ ಪುಷ್ಟೀಕರಣದ ಹಕ್ಕು : ಪರಮಾಣು ಅಪ್ರಸರಣ ಒಪ್ಪಂದದ (NPT) ಅಡಿಯಲ್ಲಿ ಇರಾನ್ಗೆ ಇರುವ ಯುರೇನಿಯಂ ಪುಷ್ಟೀಕರಣದ ಹಕ್ಕಿಗೆ ಅಧಿಕೃತ ಮಾನ್ಯತೆ ನೀಡುವುದು.
5) ನಿರ್ಬಂಧಗಳ ತೆರವು : ಅಮೆರಿಕ ಮತ್ತು ಇತರ ರಾಷ್ಟ್ರಗಳು ಇರಾನ್ ಮೇಲೆ ಹೇರಿರುವ ಎಲ್ಲಾ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕುವುದು.6) ಹೆಜ್ಬೊಲ್ಲಾ ಮೇಲಿನ ದಾಳಿ ನಿಲ್ಲಿಸುವುದು: ಲೆಬನಾನ್ನಲ್ಲಿರುವ ಹೆಜ್ಬೊಲ್ಲಾ ಗುಂಪಿನ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗಳನ್ನು ಸ್ಥಗಿತಗೊಳಿಸುವುದು.
7) ದಿಗ್ಬಂಧನ ತೆರವು ಮತ್ತು ಹಡಗು ತೆರಿಗೆ : ಇರಾನ್ ಹೋರ್ಮುಜ್ ಜಲಸಂಧಿಯ ಮೇಲಿನ ತನ್ನ ದಿಗ್ಬಂಧನವನ್ನು ಹಿಂಪಡೆಯಲಿದೆ. ಆದರೆ, ಈ ಪ್ರಮುಖ ಸಮುದ್ರ ಮಾರ್ಗದಲ್ಲಿ ಹಾದುಹೋಗುವ ಪ್ರತಿ ಹಡಗಿನ ಮೇಲೆ 20 ಲಕ್ಷ ಡಾಲರ್ (ಸುಮಾರು ₹16 ಕೋಟಿಗೂ ಅಧಿಕ) ತೆರಿಗೆ ವಿಧಿಸಲಾಗುತ್ತದೆ. 8) ಒಮಾನ್ ಜೊತೆ ಹಣ ಹಂಚಿಕೆ: ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಾರ, ಸಂಗ್ರಹವಾದ ಈ ತೆರಿಗೆ ಮೊತ್ತವನ್ನು ಜಲಸಂಧಿಯ ಇನ್ನೊಂದು ಬದಿಯಲ್ಲಿರುವ ಒಮಾನ್ ದೇಶದೊಂದಿಗೆ ಹಂಚಿಕೊಳ್ಳಲಾಗುವುದು.
9) ಮೂಲಸೌಕರ್ಯ ಪುನರ್ನಿರ್ಮಾಣ : ನೇರ ಯುದ್ಧ ಪರಿಹಾರವನ್ನು (Compensation) ಕೇಳುವ ಬದಲು, ಅಮೆರಿಕ ಮತ್ತು ಇಸ್ರೇಲ್ ದಾಳಿಯಿಂದ ಹಾನಿಗೊಳಗಾದ ಇರಾನ್ನ ಮೂಲಸೌಕರ್ಯಗಳನ್ನು ಮರುನಿರ್ಮಾಣ ಮಾಡಲು ಈ ಹಣ ಬಳಸಲಾಗುವುದು ಎಂದು ಯೋಜನೆಯಲ್ಲಿ ತಿಳಿಸಲಾಗಿದೆ.
10) ಪರೋಕ್ಷ ಪರಿಹಾರ ವಿಧಾನ – ನೇರ ಪರಿಹಾರ ಕೇಳದೆ ಅಭಿವೃದ್ಧಿ ಮೂಲಕ ನಷ್ಟಪೂರೈಕೆ
READ THIS : ಬಿಸಿಲಿನ ಬೇಗೆಯಿಂದ ಕಂಗೆಟ್ಟವರಿಗೆ ಗುಡ್ನ್ಯೂಸ್ – ನಾಳೆಯಿಂದ ಭರ್ಜರಿ ಮಳೆ

ಟ್ರಂಪ್ ಎಚ್ಚರಿಕೆ
ಈ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಟ್ರಂಪ್, ಇರಾನ್ ನಡೆಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ. “ಒಂದು ವೇಳೆ ಒಪ್ಪಂದಕ್ಕೆ ಬರದಿದ್ದರೆ, ಇರಾನ್ನ ಪ್ರಮುಖ ಮೂಲಸೌಕರ್ಯಗಳನ್ನು ಒಂದೇ ರಾತ್ರಿಯಲ್ಲಿ ಧ್ವಂಸಗೊಳಿಸಬಹುದು” ಎಂದು ಹೇಳಿದ್ದಾರೆ. ಸೇತುವೆಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸುವುದಾಗಿ ಅವರು ಸೂಚಿಸಿದ್ದಾರೆ.
ಪರಿಸ್ಥಿತಿ ಗಂಭೀರ
ಈ ಹಿಂದೆ ಅಮೆರಿಕವು 15 ಅಂಶಗಳ ಶಾಂತಿ ಪ್ರಸ್ತಾವನೆ ಕಳುಹಿಸಿದ್ದರೂ, ಅದನ್ನು ಇರಾನ್ ತಿರಸ್ಕರಿಸಿತ್ತು. ಈಗ ಇರಾನ್ನ ಹಡಗು ತೆರಿಗೆ ಪ್ರಸ್ತಾವನೆ ಮತ್ತು ಕಠಿಣ ನಿಲುವು, ಎರಡೂ ಪಾಳಯಗಳ ನಡುವಿನ ತಣಿವು ಹೆಚ್ಚಿಸಿದೆ. ಇದರಿಂದ ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಯ ಸಾಧ್ಯತೆ ಕಡಿಮೆಯಾಗಿದ್ದು, ದೊಡ್ಡ ಮಟ್ಟದ ಯುದ್ಧದ ಭೀತಿ ಎದುರಾಗಿದೆ.

MUST WATCH : ಮುಸ್ಲಿಂರ ವಿರುದ್ಧ ವಿವಾದಾತ್ಮಕ ಹೇಳಿಕೆ ನಲಪಾಡ್ಗೆ ಸುರ್ಜೇವಾಲ ಫುಲ್ ಕ್ಲಾಸ್




