“ಶರಣಾಗಿ ಇಲ್ಲ ಇಡೀ ದೇಶವನ್ನೇ ನಾಶ ಮಾಡುವೆ”- Iran ಗೆ ಕೊನೆ ಎಚ್ಚರಿಕೆ ನೀಡಿದ ಟ್ರಂಪ್.

ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚಾಗಿದೆ. ವಿಶೇಷವಾಗಿ ‘ಹಾರ್ಮುಜ್ ಜಲಸಂಧಿ’ ವಿಚಾರದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಉದ್ವಿಗ್ನತೆ ತಾರಕಕ್ಕೇರಿದೆ.
ಇರಾನ್ಗೆ ಕೊನೆ ಎಚ್ಚರಿಕೆ ನೀಡಿದ ಟ್ರಂಪ್
ಭಾನುವಾರ (ಏಪ್ರಿಲ್ 5) Iran ವಿರುದ್ಧ ಅತ್ಯಂತ ತೀಕ್ಷ್ಣ ಹಾಗೂ ಆಕ್ರಮಣಕಾರಿ ಪದಗಳನ್ನು ಬಳಸಿದ ಡೊನಾಲ್ಡ್ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ಕೂಡಲೇ ತೆರೆಯುವಂತೆ ಡೆಡ್ಲೈನ್ ನೀಡಿದ್ದಾರೆ.

‘ಇರಾನ್ ಸರ್ವನಾಶ ಮಾಡುತ್ತೇವೆ’ ಎಚ್ಚರಿಕೆ
ಎಬಿಸಿ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, “ಇರಾನ್ ನಮ್ಮೊಂದಿಗೆ ಒಪ್ಪಂದಕ್ಕೆ ಬರದಿದ್ದರೆ, ಆದೇಶವನ್ನೇ ಸಂಪೂರ್ಣವಾಗಿ ನಾಶ ಮಾಡುವ ಸಾಮರ್ಥ್ಯ ನಮ್ಮಲ್ಲಿದೆ” ಎಂದು ಹೇಳಿದ್ದಾರೆ. ಜೊತೆಗೆ, ಇರಾನ್ನ ವಿದ್ಯುತ್ ಸ್ಥಾವರಗಳು ಮತ್ತು ಪ್ರಮುಖ ಸೇತುವೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆಯನ್ನೂ ಸೂಚಿಸಿದ್ದಾರೆ.
READ THSI : Gold ಖರೀದಿ ಮಾಡೋರಿಗೆ ಗುಡ್ನ್ಯೂಸ್ – ಬೆಲೆಯಲ್ಲಿ ಭಾರೀ ಇಳಿಕೆ
ತಮ್ಮ ‘ಟ್ರುತ್’ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಮಂಗಳವಾರ ಸಂಜೆ (ಅಮೆರಿಕ ಕಾಲಮಾನ) ಒಳಗಾಗಿ ಜಲಸಂಧಿಯನ್ನು ತೆರೆಯಬೇಕು ಎಂದು ಸೂಚಿಸಿದ್ದಾರೆ. ಭಾರತೀಯ ಕಾಲಮಾನ ಪ್ರಕಾರ ಬುಧವಾರ ಬೆಳಗ್ಗೆಯೊಳಗೆ ಈ ಗಡುವು ಮುಕ್ತಾಯವಾಗುತ್ತದೆ. ಇಲ್ಲದಿದ್ದರೆ “ಇರಾನ್ ಅನ್ನು ನರಕವನ್ನಾಗಿಸುತ್ತೇವೆ” ಎಂದು ಅವರು ಎಚ್ಚರಿಸಿದ್ದಾರೆ.

Iran ತಿರುಗೇಟು
ಟ್ರಂಪ್ ಬೆದರಿಕೆಗೆ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಕರ್ ಖಾಲಿಬಾಫ್ ‘ಎಕ್ಸ್’ (X) ಖಾತೆಯಲ್ಲಿ ತಿರುಗೇಟು ನೀಡಿದ್ದಾರೆ. ಟ್ರಂಪ್ ಅವರೇ, ನಿಮ್ಮ ಬೇಜವಾಬ್ದಾರಿ ಹೆಜ್ಜೆಗಳು ಅಮೆರಿಕವನ್ನು ನರಕಕ್ಕೆ ತಳ್ಳುತ್ತಿವೆ. ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ಆದೇಶಗಳನ್ನು ಪಾಲಿಸುತ್ತಿರುವ ನೀವು ಇಡೀ ಮಧ್ಯಪ್ರಾಚ್ಯ ವಲಯವನ್ನು ಬೆಂಕಿಗೆ ದೂಡುತ್ತಿದ್ದೀರಿ. ಯುದ್ಧಾಪರಾಧಗಳಿಂದ ನಿಮಗೆ ಏನೂ ಸಿಗುವುದಿಲ್ಲ ಎಂದು ಕಿಡಿ ಕಾರಿದ್ದಾರೆ.
MUST WATCH : ಶಿರಾ ತಾಲೂಕಿನಲ್ಲಿ ಚಿರತೆ ಪ್ರತ್ಯಕ್ಷ ಚಿರತೆ ಕಂಡು ಆತಂಕದಲ್ಲಿ ಜನರು




