Gold Rate ನಲ್ಲಿ ಇಂದು ಇಳಿಕೆ ಕಂಡುಬಂದಿದೆ.

ಚಿನ್ನ ಮತ್ತು ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್ ಸಿಕ್ಕಿದೆ. ಇಂದು ಜಾಗತಿಕ ಮಾರುಕಟ್ಟೆಯ ಏರಿಳಿತಗಳ ನಡುವೆಯೂ, ಭಾರತದಲ್ಲಿ ಇಂದು Gold Rate ನಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಇದರಿಂದ ಗ್ರಾಹಕರಿಗೆ ತುಸು ನೆಮ್ಮದಿ ದೊರೆತಿದೆ.
ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ ಹಾಗೂ ಕಚ್ಚಾ ತೈಲದ ಬೆಲೆ ಏರಿಕೆಯಿಂದ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮುಂದುವರಿದಿದ್ದರೂ, ಇಂದಿನ ಚಿನ್ನದ ದರದಲ್ಲಿ ಕುಸಿತ ಗಮನಾರ್ಹವಾಗಿದೆ.
ಇಂದಿನ ಚಿನ್ನದ ದರ(10 ಗ್ರಾಂ)
ಗುಡ್ ರಿಟರ್ನ್ಸ್ ಅಂಕಿ-ಅಂಶಗಳ ಪ್ರಕಾರ –
- 24 ಕ್ಯಾರೆಟ್ ಚಿನ್ನ (99.9% ಶುದ್ಧತೆ): ₹1,49,130 (₹1,800 ಇಳಿಕೆ)
- 22 ಕ್ಯಾರೆಟ್ ಚಿನ್ನ: ₹1,36,700 (₹1,650 ಇಳಿಕೆ)
- 18 ಕ್ಯಾರೆಟ್ ಚಿನ್ನ: ₹1,11,850 (₹1,350 ಇಳಿಕೆ)

ಪ್ರಮುಖ ನಗರಗಳಲ್ಲಿ Gold Rate (1 ಗ್ರಾಂ)
- ಬೆಂಗಳೂರು: ₹14,913 (24K), ₹13,670 (22K), ₹11,185 (18K)
- ಮುಂಬೈ: ₹14,913 (24K), ₹13,670 (22K), ₹11,185 (18K)
- ದೆಹಲಿ: ₹14,928 (24K), ₹13,685 (22K), ₹11,200 (18K)
- ಚೆನ್ನೈ: ₹15,066 (24K), ₹13,810 (22K), ₹11,520 (18K)
- ಹೈದರಾಬಾದ್: ₹14,913 (24K), ₹13,670 (22K), ₹11,185 (18K)
READ THIS : ಚೆನ್ನೈ ಬಗ್ಗುಬಡಿದು ಅಗ್ರಸ್ಥಾನಕ್ಕೇರಿದ RCB – ಧೋನಿ ಹುಡುಗರಿಗೆ ಮತ್ತೆ ಮುಖಭಂಗ
ಬೆಳ್ಳಿ ಬೆಲೆ ಎಷ್ಟಿದೆ..?
ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದರೂ, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
- 1 ಗ್ರಾಂ ಬೆಳ್ಳಿ: ₹250
- 10 ಗ್ರಾಂ: ₹2,500
- 1 ಕೆಜಿ: ₹2,50,000
ಬೆಂಗಳೂರು, ಮುಂಬೈ ಮತ್ತು ದೆಹಲಿಯಲ್ಲಿ 10 ಗ್ರಾಂ ಬೆಳ್ಳಿ ₹2,500 ಇದ್ದರೆ, ಚೆನ್ನೈ ಮತ್ತು ಹೈದರಾಬಾದ್ನಲ್ಲಿ ₹2,550 ಆಗಿದೆ.

ಬೆಲೆ ಇಳಿಕೆಗೆ ಕಾರಣವೇನು?
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಮತ್ತು ಕಚ್ಚಾ ತೈಲದ ಬೆಲೆ ಏರಿಕೆಯಿಂದ ಹೂಡಿಕೆದಾರರು ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದೆ.
MUST WATCH : ಹೆದ್ದಾರಿಗಳಲ್ಲಿ ನಗದು ಪಾವತಿಗೆ ಬ್ರೇಕ್ ಏ. 10 ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ





