Bengaluru : ಬೇರೆಯವರ ಸಾಲಕ್ಕೆ `ಶ್ಯೂರಿಟಿ ಸಹಿ’ ಹಾವುವ ಮುನ್ನ ಹುಷಾರ್ – ಲೋನ್ ಕಟ್ಟದಿದ್ದರೆ ನಿಮ್ಮ ಆಸ್ತಿ ಜಪ್ತಿಯಾಗಬಹುದು!

Bengaluru : ನಮಗೆ ಪರಿಚಯಸ್ಥರೋ, ಸ್ನೇಹಿತರೋ ಅಥವಾ ಸಂಬಂಧಿಕರೋ ಬ್ಯಾಂಕ್ನಲ್ಲಿ ಸಾಲ ಪಡೆಯುವಾಗ ‘ಶೂರಿಟಿ’ (Surety) ಅಥವಾ ಜಾಮೀನುದಾರರಾಗಿ ಸಹಿ ಹಾಕುವಂತೆ ಕೇಳುವುದು ಸಾಮಾನ್ಯ. ಪ್ರೀತಿ ಅಥವಾ ಮೊರೆ ಹೋಗಲಾಗದ ಮುಜುಗರದಿಂದಾಗಿ ನಾವು ಯೋಚಿಸದೆ ಸಹಿ ಹಾಕಿಬಿಡುತ್ತೇವೆ. ಆದರೆ, ಹೀಗೆ ಸಹಿ ಹಾಕುವ ಮುನ್ನ ಅದರ ಗಂಭೀರತೆ ಮತ್ತು ಕಾನೂನುಬದ್ಧ ಪರಿಣಾಮಗಳನ್ನು ಅರಿಯುವುದು ಬಹಳ ಮುಖ್ಯ.
ಸಾಲಕ್ಕೆ ಜಾಮೀನುದಾರರಾಗುವುದು ಎಂದರೆ ಕೇವಲ ಸಾಕ್ಷಿಯಲ್ಲ, ಬದಲಾಗಿ ನೀವೂ ಆ ಸಾಲದ ಹೊಣೆಯನ್ನು ಸಮಾನವಾಗಿ ಹೊರುತ್ತೀರಿ ಎಂದರ್ಥ. ಈ ಕುರಿತ ಪ್ರಮುಖ ಅಂಶಗಳು ಇಲ್ಲಿವೆ:
READ THIS : ಇಂದಿನಿಂದ ಏ. 7 ರವರೆಗೆ ರಾಜ್ಯದ ಹಲವೆಡೆ ಭಾರೀ ಮಳೆ – ಹವಾಮಾನ ಇಲಾಖೆ ಎಚ್ಚರಿಕೆ

1. ಸಮಾನ ಹೊಣೆಗಾರಿಕೆ ನಿಮ್ಮದೇ
ಸಾಲ ಪಡೆದ ವ್ಯಕ್ತಿ ಸಾಲ ಮರುಪಾವತಿ ಮಾಡಲು ವಿಫಲವಾದರೆ, ಆ ಸಾಲವನ್ನು ತೀರಿಸುವ ಜವಾಬ್ದಾರಿ ಜಾಮೀನುದಾರರ ಮೇಲಾಗುತ್ತದೆ. ಬ್ಯಾಂಕ್ಗಳು ನೇರವಾಗಿ ಜಾಮೀನುದಾರರನ್ನು ಸಂಪರ್ಕಿಸಿ ಹಣ ಪಾವತಿಸುವಂತೆ ಒತ್ತಾಯಿಸಬಹುದು.
2. ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ
ಸಾಲಗಾರನು EMIಗಳನ್ನು ಸಮಯಕ್ಕೆ ಪಾವತಿಸದಿದ್ದರೆ, ಅದು ಜಾಮೀನುದಾರರ ಕ್ರೆಡಿಟ್ ಸ್ಕೋರ್ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಭವಿಷ್ಯದಲ್ಲಿ ಸಾಲ ಪಡೆಯುವುದು ಕಷ್ಟವಾಗಬಹುದು.
3. ಸಾಲದ ಮಿತಿಯಲ್ಲಿ ಕಡಿತ
ನೀವು ಯಾರಿಗಾದರೂ ಗ್ಯಾರಂಟರ್ ಆಗಿ ಸಹಿ ಹಾಕಿದರೆ, ಆ ಮೊತ್ತವನ್ನು ನಿಮ್ಮ ಮೇಲಿನ ಹೊಣೆಗಾರಿಕೆಯಾಗಿ ಬ್ಯಾಂಕ್ ಪರಿಗಣಿಸುತ್ತದೆ. ಇದರಿಂದ ನೀವು ಮುಂದಿನ ಸಾಲ ಪಡೆಯುವ ಸಾಮರ್ಥ್ಯ ಕಡಿಮೆಯಾಗುತ್ತದೆ.
4. ಆಸ್ತಿ ಜಪ್ತಿ ಅಪಾಯ
ಸಾಲಗಾರ ಹಾಗೂ ಜಾಮೀನುದಾರ ಇಬ್ಬರೂ ಸಾಲ ತೀರಿಸಲು ವಿಫಲರಾದರೆ, ಬ್ಯಾಂಕ್ಗಳು ಜಾಮೀನುದಾರರ ಆಸ್ತಿಯನ್ನು ಜಪ್ತಿ ಮಾಡುವ ಅಥವಾ ಹರಾಜು ಹಾಕುವ ಹಕ್ಕು ಹೊಂದಿರುತ್ತವೆ.
5. ಹೊರಬೆಉವುದು ಸುಲಭವಲ್ಲ
ಒಮ್ಮೆ ಸಹಿ ಹಾಕಿದ ಬಳಿಕ, ಸಾಲದ ಅವಧಿ ಮುಗಿಯುವವರೆಗೆ ಅಥವಾ ಪರ್ಯಾಯ ಜಾಮೀನುದಾರ ಸಿಗುವವರೆಗೆ ನೀವು ಅದರಿಂದ ಹೊರಬರಲು ಸಾಧ್ಯವಿಲ್ಲ. ಇದಕ್ಕೆ ಬ್ಯಾಂಕಿನ ಅನುಮತಿ ಅಗತ್ಯವಿರುತ್ತದೆ.

ನೆನಪಿಡಿ : ಸಹಾಯ ಮಾಡುವ ಮನಸ್ಸು ಒಳ್ಳೆಯದು. ಆದರೆ ಅದು ನಿಮ್ಮ ಆರ್ಥಿಕ ಭದ್ರತೆಗೆ ಅಪಾಯವಾಗಬಾರದು. ಆದ್ದರಿಂದ ಯಾರೇ ಕೇಳಿದರೂ ಸಾಲದ ದಾಖಲೆಗಳನ್ನು ಸಂಪೂರ್ಣವಾಗಿ ಓದಿ, ಸಾಲಗಾರನ ಹಣ ತೀರಿಸುವ ಸಾಮರ್ಥ್ಯವನ್ನು ಪರಿಶೀಲಿಸಿ ನಂತರವೇ ನಿರ್ಧಾರ ತೆಗೆದುಕೊಳ್ಳುವುದು ಒಳಿತು.
MUST WATCH : ಬಸ್ಗಳ ನಡುವೆ DEADLY ACC**ENT ಬೆಚ್ಚಿ ಬೀಳಿಸುತ್ತೆ ಅಪಘಾತದ ದೃಶ್ಯ




