Nashik ನಲ್ಲಿ ಘೋರ ದುರಂತ – ಒಂದೇ ಕುಟುಂಬದ 6 ಮಕ್ಕಳು ಸೇರಿ 9 ಮಂದಿ ದಾರುಣ ಸಾವು!

ಮಹಾರಾಷ್ಟ್ರದ ನಾಸಿಕ್ (Nashik) ಜಿಲ್ಲೆಯ ದಿಂಡೋರಿ ತಾಲೂಕಿನಲ್ಲೊಂದು ಘೋರ ದುರಂತ ಸಂಭವಿಸಿದೆ. ತಡರಾತ್ರಿ ಮಾರುತಿ XL6 ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಬಾವಿಗೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಒಟ್ಟು 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ 6 ಮಕ್ಕಳಿದ್ದರು ಎನ್ನಲಾಗಿದೆ.
6 ಮಕ್ಕಳು ಸೇರಿ 9 ಮಂದಿ ಸಾವು
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಮೃತಪಟ್ಟವರೆಲ್ಲರೂ ಇಂದೋರ್ ಗ್ರಾಮದ ದರ್ಗುಡೆ ಕುಟುಂಬದವರು ಎಂದು ತಿಳಿದುಬಂದಿದೆ. ಮೃತರಲ್ಲಿ ಸುನಿಲ್ ದರ್ಗುಡೆ, ಅವರ ಪತ್ನಿ ಹಾಗೂ ಮಕ್ಕಳು ಸೇರಿದ್ದಾರೆ. ಇನ್ನು ಅಪಘಾತದಲ್ಲಿ ಸಾವನ್ನಪ್ಪಿದ 6 ಮಕ್ಕಳಲ್ಲಿ 7 ವರ್ಷದ ಬಾಲಕಿಯೂ ಒಬ್ಬಳು ಎಂದು ಪೊಲೀಸರು ಹೇಳಿದ್ದಾರೆ.

READ THIS : ಮೈದಾನದಲ್ಲಿ ಕೆಟ್ಟ ಪದ ಬಳಕೆ – ಅಭಿಷೇಕ್ ಶರ್ಮಾಗೆ ದಂಡ.!
ಚಾಲಕನ ನಿಯಂತ್ರಣ ತಪ್ಪಿ ಅಪಘಾತ
ಈ ಕುಟುಂಬ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗುವಾಗ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರು ನೇರವಾಗಿ ನೀರು ತುಂಬಿದ್ದ ಬಾವಿಗೆ ಬಿದ್ದು ಈ ದುರ್ಘಟನೆ ಸಂಭವಿಸಿದೆ.
ದಿಂಡೋರಿ ಪೊಲೀಸರಿಂದ ತನಿಖೆ
ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಕ್ಕೆ ಧಾವಿಸಿದರು. ಎನ್ಡಿಆರ್ಎಫ್ ತಂಡ ಕೂಡ ತಕ್ಷಣ ಸ್ಥಳಕ್ಕಾಗಮಿಸಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಆರಂಭಿಸಿತು. ಆದಾಗ್ಯೂ, ಸ್ಥಳದಲ್ಲಿ ಹೆಚ್ಚಿನ ಜನಸಂದಣಿ ಇರುವುದರಿಂದ ಕಾರ್ಯಾಚರಣೆಗೆ ಅಡಚಣೆ ಉಂಟಾಯಿತು ಎನ್ನಲಾಗಿದೆ. ದಿಂಡೋರಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

MUST WATCH : ಏ.8ಕ್ಕೆ ತುಮಕೂರಿನಲ್ಲಿ ಜನಸಂಪರ್ಕ ಸಭೆ – ಅಧಿಕಾರಿಗಳಿಗೆ DC ಏನ್ ಸೂಚನೆ ಕೊಟ್ರು?




