IPL : ಅಭಿಷೇಕ್ಗೆ ಭಾರೀ ದಂಡ ವಿಧಿಸಿದ BCCI..!

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದ ಸನ್ ರೈಸರ್ಸ್ ಹೈಧರಾಬಾದ್ ತಂಡಕ್ಕೆ ಈಗ ಶಿಸ್ತು ಕ್ರಮದ ಬಿಸಿ ತಟ್ಟಿದೆ.
ನೀತಿ ಸಂಹಿತೆ ಉಲ್ಲಂಘನೆ
ತಂಡದ ಸ್ಟಾರ್ ಆಲ್ ರೌಂಡರ್ ಅಭಿಷೇಕ್ ಶರ್ಮಾಗೆ IPL ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕಾಗಿ ದಂಡ ವಿಧಿಸಲಾಗಿದೆ. ಈಢನ್ ಗಾರ್ಡನ್ನಲ್ಲಿ ನಡೆದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ, ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.3ರ ಅಡಿಯಲ್ಲಿ ಲೆವೆಲ್ 1 ಅಪರಾಧ ಎಸಗಿರುವುದು ದೃಡಪಟ್ಟಿದೆ.
READ THIS : ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಯುವಕ Suicide!

ಶೇ 25 ರಷ್ಟು ದಂಡ
ಪಂದ್ಯದ ವೇಳೆ ಮೈದಾನದಲ್ಲಿ ಅಸಭ್ಯ ಭಾಷೆ ಅಥವಾ ಕೆಟ್ಟ ಶಬ್ದಗಳನ್ನ ಬಳಸಿದ್ದಕ್ಕಾಗಿ ಅವರಿಗೆ ಪಂದ್ಯದ ಶೇ 25 ರಷ್ಟು ದಂಡ ವಿಧಿಸಲಾಗಿದೆ. ಅಭಿಷೇಕ್ ಶರ್ಮಾ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು ಮ್ಯಾಚ್ ರೆಫರಿಯ ತೀರ್ಮಾನಕ್ಕೆ ಸಮ್ಮತಿಸಿದ್ದಾರೆ.

MUST WATCH : ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಚುನಾವಣೆ – ಶಾಸಕ ಸುರೇಶ್ ಗೌಡ ಹೀಗ್ಯಾಕಂದ್ರು ?




