Dhurandhar 2 ಸಿನಿಮಾ ವಿಶ್ವಮಟ್ಟದಲ್ಲಿ 1392 ಕೋಟಿ ಗಳಿಕೆ ಮಾಡಿದರೂ, ಇತ್ತೀಚೆಗೆ ಕಲೆಕ್ಷನ್ ಕುಸಿತ ಕಂಡಿದೆ…

ಭಾರೀ ನಿರೀಕ್ಷೆಯ ನಡುವೆ ಬಿಡುಗಡೆಯಾದ ‘ Dhurandhar 2 ’ ಸಿನಿಮಾ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಇತ್ತೀಚಿನ ದಿನಗಳಲ್ಲಿ ಚಿತ್ರದ ಗಳಿಕೆ ನಿಧಾನಗತಿಯಲ್ಲಿ ಸಾಗುತ್ತಿದೆ.
ವಿಶ್ವಮಟ್ಟದಲ್ಲಿ ಈಗಾಗಲೇ ಈ ಸಿನಿಮಾ 1392 ಕೋಟಿಗೂ ಅಧಿಕ ಗಳಿಕೆ ಮಾಡಿ 1000 ಕೋಟಿ ಕ್ಲಬ್ಗೆ ಪ್ರವೇಶಿಸಿದೆ.
ಆದಾಗ್ಯೂ, ಮುಂದಿನ ಹಾದಿಯಲ್ಲಿ 2 ಸಾವಿರ ಕೋಟಿ ಕ್ಲಬ್ ಸೇರುವುದು ಸವಾಲಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಎರಡನೇ ವಾರದಲ್ಲಿ ಕುಸಿತ – ಸೋಮವಾರ ಕೇವಲ 25 ಕೋಟಿ ಗಳಿಕೆ
ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲಿ ಬಾಕ್ಸ್ ಆಫೀಸ್ ಅನ್ನು ಅಲುಗಾಡಿಸಿದ ‘ಧುರಂಧರ್ 2’, ಎರಡನೇ ವಾರಕ್ಕೆ ಬಂದಾಗ ಸ್ವಲ್ಪ ಕುಸಿತ ಕಂಡಿದೆ.
ವಿಶೇಷವಾಗಿ, ಭಾನುವಾರ ಸಿನಿಮಾ 68 ಕೋಟಿ ರೂಪಾಯಿ ಗಳಿಸಿತ್ತು , ಆದರೆ ಸೋಮವಾರದಂದು ಕೇವಲ 25 ಕೋಟಿ ರೂಪಾಯಿ ಗಳಿಸಿದೆ
ಇದರಿಂದ ಚಿತ್ರದ ಗಳಿಕೆ ವೇಗದಲ್ಲಿ ಸ್ಪಷ್ಟ ಕುಸಿತ ಕಂಡುಬಂದಿದೆ. ಜೊತೆಗೆ, 12ನೇ ದಿನದ ಆಕ್ಯುಪೆನ್ಸಿ 23.4% ಮಾತ್ರ ದಾಖಲಾಗಿದೆ.
MUST READ : Dina Bhavishya : ದಿನ ಭವಿಷ್ಯ 31 ಮಾರ್ಚ್ 2026..

ಒಟ್ಟು ಗಳಿಕೆ ಎಷ್ಟು? ಭಾರತ ಮತ್ತು ವಿದೇಶದಲ್ಲಿ ಸಾಧನೆ
ಪ್ರಸ್ತುತ ಮಾಹಿತಿ ಪ್ರಕಾರ, ಭಾರತದಲ್ಲಿ ಚಿತ್ರದ ನೆಟ್ ಕಲೆಕ್ಷನ್ ಸುಮಾರು 875.17 ಕೋಟಿ ರೂಪಾಯಿ , ಗ್ರಾಸ್ ಕಲೆಕ್ಷನ್ 1000 ಕೋಟಿ ರೂಪಾಯಿ ದಾಟಿದೆ , ವಿದೇಶಗಳಲ್ಲಿ ಮಾತ್ರ 300 ಕೋಟಿಗೂ ಹೆಚ್ಚು ಗಳಿಕೆ ಬಂದಿದೆ .ಇದರಿಂದ ಒಟ್ಟಾರೆ ವಿಶ್ವಮಟ್ಟದ ಗಳಿಕೆ 1392 ಕೋಟಿ ರೂಪಾಯಿ ತಲುಪಿದೆ.

12ನೇ ದಿನದ ದಾಖಲೆ – ಟಾಪ್ 3 ಸಿನಿಮಾಗಳಲ್ಲಿ ಸ್ಥಾನ
ಇನ್ನೊಂದೆಡೆ, 12ನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಸಿನಿಮಾಗಳ ಪಟ್ಟಿಯಲ್ಲಿ ‘ಧುರಂಧರ್ 2’ ಮೂರನೇ ಸ್ಥಾನವನ್ನು ಪಡೆದಿದೆ.
ಇದು ಚಿತ್ರದ ಆರಂಭಿಕ ಯಶಸ್ಸಿಗೆ ಸಾಕ್ಷಿಯಾಗಿದ್ದರೂ, ಮುಂದಿನ ದಿನಗಳಲ್ಲಿ ಇದೇ ವೇಗ ಉಳಿಯುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ.

‘ದಂಗಲ್’ ದಾಖಲೆ ಮುರಿಯಲು ಸಾಧ್ಯವೇ?
ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, 2 ಸಾವಿರ ಕೋಟಿ ಕ್ಲಬ್ ಸೇರುವುದು ಚಿತ್ರಕ್ಕೆ ಸವಾಲಾಗಬಹುದು ಎಂದು ಸಿನಿ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಯಾಕೆಂದರೆ, ‘ದಂಗಲ್’ ಸಿನಿಮಾ ವಿಶ್ವಮಟ್ಟದಲ್ಲಿ ಸುಮಾರು 2000 ಕೋಟಿ ರೂಪಾಯಿ ಗಳಿಕೆ ಮಾಡಿ ಅಪ್ರತಿಮ ದಾಖಲೆ ನಿರ್ಮಿಸಿದೆ.
ಹೀಗಾಗಿ, ‘ಧುರಂಧರ್ 2’ ಈ ದಾಖಲೆಯನ್ನು ಮುರಿಯುತ್ತದೆಯೇ ಎಂಬ ಕುತೂಹಲ ಈಗ ಸಿನಿಪ್ರಿಯರಲ್ಲಿ ಹೆಚ್ಚಾಗಿದೆ.
MUST WATCH : ವೀರಭದ್ರಸ್ವಾಮಿ ಜಾತ್ರೆಗೆ ಕೌಂಟ್ಡೌನ್ – ಜಾತ್ರೆಗೆ BIG BOSS ಖ್ಯಾತಿ GILLI ಬರ್ತಾರೆ..! | GUBBI NEWS |




