Bengaluru Budget 2026 : ಇಂದು ಎರಡು ನಗರ ಪಾಲಿಕೆಗಳಿಂದ ಬಜೆಟ್ ಮಂಡನೆಯಾಗಲಿದೆ.

ಬೆಂಗಳೂರು ನಗರದ ಎರಡು ನಗರ ಪಾಲಿಕೆಗಳ 2026-27ನೇ ಸಾಲಿನ ಆಯವ್ಯಯ ಇಂದು ಮಂಡನೆಯಾಗುತ್ತಿದೆ. ಇದರ ಭಾಗವಾಗಿ ಬೆಂಗಳೂರು ಪೂರ್ವ ನಗರ ಪಾಲಿಕೆ ತನ್ನ ಬಜೆಟ್ನ್ನು ಇಂದು ಬೆಳಿಗ್ಗೆ ಮಂಡಿಸಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಬಜೆಟ್ ಮಧ್ಯಾಹ್ನ 12:30ಕ್ಕೆ ಮಂಡನೆಯಾಗಲಿದೆ. ಉಳಿದ ಮೂರು ಪಾಲಿಕೆಗಳ ಬಜೆಟ್ ನಾಳೆ ಮಂಡನೆಯಾಗಲಿದೆ.
ವೈಟ್ಫೀಲ್ಡ್ ಸಮೀಪದ ಎಂಎಲ್ಆರ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲಿಕೆಯ ಆಯುಕ್ತ ಡಿ.ಎಸ್. ರಮೇಶ್ ಬಜೆಟ್ ಮಂಡಿಸಿದರು. Greater Bengaluru Authority ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿತು.
₹3889 ಕೋಟಿ ಬಜೆಟ್ ಗಾತ್ರ
ಬೆಂಗಳೂರು ಪೂರ್ವ ನಗರ ಪಾಲಿಕೆ ಒಟ್ಟು ₹3889 ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದು, ವಿವಿಧ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ವೆಚ್ಚದ ಹಂಚಿಕೆ
- ಸಿಬ್ಬಂದಿ ವೆಚ್ಚ: ₹302 ಕೋಟಿ
- ಆಡಳಿತ ವೆಚ್ಚ: ₹82 ಕೋಟಿ
- ಕಸ ತ್ಯಾಜ್ಯ ವಿಲೇವಾರಿ: ₹300 ಕೋಟಿ
- ಕಾರ್ಯಾಚರಣೆ & ನಿರ್ವಹಣೆ: ₹342 ಕೋಟಿ
- ಆರೋಗ್ಯ, ಶಿಕ್ಷಣ & ಕಲ್ಯಾಣ: ₹267 ಕೋಟಿ
- ಸಾರ್ವಜನಿಕ ಅಭಿವೃದ್ಧಿ ಕಾಮಗಾರಿ: ₹2400 ಕೋಟಿ (ಅತಿ ದೊಡ್ಡ ಪಾಲು)
- ಸಾಲ ಮರುಪಾವತಿ: ₹193 ಕೋಟಿ

READ THIS : ತೈಲ ಬೆಲೆ ಏರಿಸುತ್ತಿದೆ, ಕೇಂದ್ರ ಸರ್ಕಾರ ನಮ್ಮನ್ನ ಕೊಲೆ ಮಾಡ್ತಿದೆ – ಡಿಕೆಶಿ
ಪ್ರಮುಖ ಉದ್ದೇಶಗಳು
ನಗರದ ವೇಗವಾದ ಅಭಿವೃದ್ಧಿಗೆ ಜೊತೆಗೆ ಮೂಲಸೌಕರ್ಯ ಸ್ಥಿರತೆ, ತಂತ್ರಜ್ಞಾನ ಬಳಕೆ ಹಾಗೂ ಪರಿಸರ ಸಂರಕ್ಷಣೆ ಎಂಬ ಗುರಿಯನ್ನು ಪಾಲಿಕೆ ಮುಂದಿಟ್ಟಿದೆ.
ವಿಶೇಷ ಕಲ್ಯಾಣ ಯೋಜನೆಗಳು
ದುರ್ಬಲ ವರ್ಗಗಳ ಕಲ್ಯಾಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಒಟ್ಟು ಬಜೆಟ್ನ 7% ವ್ಯಾಪಾರಿಗಳ ಕಲ್ಯಾಣಕ್ಕೆ ಮೀಸಲು ಇಡಲಾಗಿದೆ. ಕಲ್ಯಾಣ ಯೋಜನೆಗಳಿಗೆ ₹221 ಕೋಟಿ ಅನುದಾನ ಘೋಷಿಸಲಾಗಿದೆ.
ಪ್ರಮುಖ ಯೋಜನೆಗಳು
- ವಸತಿ ಯೋಜನೆ: ಒಂದು BHK ಮನೆ ಅಥವಾ ಪ್ಲಾಟ್ ಖರೀದಿಗೆ ₹5 ಲಕ್ಷ ಸಹಾಯಧನ
- ಶಿಕ್ಷಣ: ಎಸ್ಸಿ/ಎಸ್ಟಿ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ, ವಿದೇಶ ವ್ಯಾಸಂಗ ಪ್ರೋತ್ಸಾಹ
- ಆರೋಗ್ಯ: ಗಂಭೀರ ಕಾಯಿಲೆಗಳಿಗೆ ವೈದ್ಯಕೀಯ ವೆಚ್ಚ ಮರುಪಾವತಿ
- ಮಹಿಳಾ ಸಬಲೀಕರಣ: ಉಚಿತ ದ್ವಿಚಕ್ರ ವಾಹನ, ಹೊಲಿಗೆ ತರಬೇತಿ ಮತ್ತು ಯಂತ್ರಗಳು
- ವಿಶೇಷ ಚೇತನರು: ಇಲೆಕ್ಟ್ರಿಕ್ ವೀಲ್ಚೇರ್, ಹೆಚ್ಚುವರಿ ಸೌಲಭ್ಯಗಳು
- ಬೀದಿ ವ್ಯಾಪಾರಿಗಳು: ಇ-ವೆಂಡಿಂಗ್ ವಾಹನಗಳು
- ವಿದ್ಯಾರ್ಥಿಗಳು: ಉಚಿತ ಲ್ಯಾಪ್ಟಾಪ್
- ನಿರಾಶ್ರಿತರು: 2 ಹೊಸ ಆಶ್ರಯ ಕೇಂದ್ರಗಳ ಸ್ಥಾಪನೆ
- ಕೌಶಲ್ಯಾಭಿವೃದ್ಧಿ: ಆಟೋರಿಕ್ಷಾ, ಕಾರು ಖರೀದಿಗೆ ಸಹಾಯಧನ
ಕಸ ನಿರ್ವಹಣೆಗೆ ಒತ್ತು
ಘನತ್ಯಾಜ್ಯ ನಿರ್ವಹಣೆಗಾಗಿ ₹300 ಕೋಟಿ ಮೀಸಲಿಡಲಾಗಿದ್ದು, ಪೌರಕಾರ್ಮಿಕರ ಸುರಕ್ಷತೆಗೆ ಗ್ಲೌಸ್, ಮಾಸ್ಕ್, ಶೂಸ್ ಸೇರಿದಂತೆ ಅಗತ್ಯ ಉಪಕರಣಗಳಿಗೆ ₹1.5 ಕೋಟಿ ಅನುದಾನ ನೀಡಲಾಗಿದೆ.
ಒಟ್ಟಾರೆ, ನಗರ ಅಭಿವೃದ್ಧಿ ಮತ್ತು ಸಾಮಾಜಿಕ ಕಲ್ಯಾಣ ಎರಡನ್ನೂ ಸಮತೋಲ ನಗೊಳಿಸುವ ದಿಕ್ಕಿನಲ್ಲಿ ಈ ಬಜೆಟ್ ರೂಪುಗೊಂಡಿದೆ.

MUST WATCH : ಸದನದಲ್ಲೂ IPL ಸದ್ದುಎಂಎಲ್ಎಗೂ TICKET ಕೊಡ್ಸಿ




