ಶಾಸಕರಿಂದ IPL ಟಿಕೆಟ್ಗೆ ಡಿಮ್ಯಾಂಡ್ – ಬೇಡಿಕೆ ಸರಿಯಿದೆ ಎಂದ ಡಿಸಿಎಂ.

ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ನಮ್ಮನ್ನ ಕೊಲೆ ಮಾಡುತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕಳವಳ ವ್ಯಕ್ತಪಡಿಸಿದರು.
“ಕೇಂದ್ರ ಸರ್ಕಾರ ನಮ್ಮನ್ನ ಕೊಲೆ ಮಾಡುತ್ತಿದೆ”
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ತೈಲ ಬೆಲೆ ಏರಿಸುವ ಮೂಲಕ ಜನರನ್ನು ಸಂಕಷ್ಟಕ್ಕೆ ತಳ್ಳುತ್ತಿದೆ. “ಕೇಂದ್ರ ಸರ್ಕಾರ ನಮ್ಮನ್ನ ಕೊಲೆ ಮಾಡುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು. ಈ ಬಗ್ಗೆ ಸುರ್ಜೇವಾಲಾ, ಸಿಎಂ ಅವರೊಂದಿಗೆ ಮಾತನಾಡ್ತೇನೆ ಎಂದು ಹೇಳಿದರು.
READ THIS : ಬೆಳ್ಳಂಬೆಳಗ್ಗೆ ಕರಾವಳಿಯಲ್ಲಿ ಹರಿದ ನೆತ್ತರು –ರೌಡಿಶೀಟರ್ನ ಭೀಕರ ಕೊಲೆ!

IPL ಟಿಕೆಟ್ – ನಮ್ಮ ಶಾಸಕರಿಗೆ ವ್ಯವಸ್ಥೆ ಮಾಡಬೇಕು
ಇನ್ನೂ IPL ಟಿಕೆಟ್ಗೆ ಶಾಸಕರ ಬೇಡಿಕೆ ಕುರಿತು ಮಾತನಾಡಿದ ಡಿಸಿಎಂ, ಶಾಸಕರು ಕೂಡ ವ್ಯವಸ್ಥೆಯ ಭಾಗವಾಗಿದ್ದು, ಅವರಿಗೆ ಅವಕಾಶ ಕಲ್ಪಿಸುವುದು ಸೂಕ್ತ ಎಂದು ಹೇಳಿದರು. ಈ ಬಗ್ಗೆ ನಾನು ಕೆಎಸ್ಸಿಎ ಅಧ್ಯಕ್ಷರ ಜೊತೆ ಇಂದು ಮಾತಾಡ್ತೀನಿ ಎಂದರು.
ತೇಜಸ್ವಿ ಸೂರ್ಯ ವಿರುದ್ಧ ಕಿಡಿ
ಟಿಕೆಟ್ ಬೇಡಿಕೆ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದ ತೇಜಸ್ವಿ ಸೂರ್ಯ ವಿರುದ್ಧವೂ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. “ತೇಜಸ್ವಿ ಸೂರ್ಯ ತಮ್ಮ ಜ್ಞಾನವನ್ನು ತಮ್ಮ ಪಕ್ಷದವರಿಗೆ ಹೇಳಲಿ, ನಮಗೆ ಅಲ್ಲ” ಎಂದು ತಿವಿದರು.
MUST WATCH : ಭಯಂಕರ ಮಾಟ-ಮಂತ್ರವನ್ನು ತೆಗೆಯುತ್ತೇನೆ ಎಂದು ಯುವಕನಿಂದ ಡೋಂಗಿ ಕೆಲಸ





