ಮಂಗಳೂರಿನಲ್ಲಿ ರೌಡಿಶೀಟರ್ನ ಭೀಕರ Murder – ಗ್ಯಾಂಗ್ವಾರ್ಗೆ ಹೋಯ್ತಾ ಜೀವ?

ಮಂಗಳೂರು ನಗರದ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ನಲ್ಲಿ ಇಂದು ನಸುಕಿನ ಜಾವ ರೌಡಿಶೀಟರ್ವೋರ್ವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈದ ದಾರುಣ ಘಟನೆ ನಡೆದಿದೆ.
ಕರಾವಳಿಯಲ್ಲಿ ಬೆಳ್ಳಂಬೆಳಗ್ಗೆ ಹರಿದ ನೆತ್ತರು
ಕೊಲೆಯಾದ ವ್ಯಕ್ತಿಯನ್ನು ತಲಪಾಡಿ ಸಮೀಪದ ಮುಳ್ಳುಗುಡ್ಡೆ ನಿವಾಸಿ ಆರಿಫ್ ಅಲಿಯಾಸ್ ಟಾಬ್ಲೆಟ್ ಆರಿಫ್ (46) ಎಂದು ಗುರುತಿಸಲಾಗಿದೆ. ಕೊಲೆಯ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ.
ಕೊಲೆಗೈದು ಆರೋಪಿಗಳು ಎಸ್ಕೇಪ್!
ಪೊಲೀಸರ ಮಾಹಿತಿ ಪ್ರಕಾರ, ಆರಿಫ್ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ರೌಡಿಶೀಟರ್ ಆಗಿದ್ದ. ಇಂದು ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಆತ ಬೈಕ್ನಲ್ಲಿ ತೆರಳುತ್ತಿದ್ದಾಗ, ಹಿಂಬದಿಯಿಂದ ಬಂದ ಕಾರೊಂದು ಆರಿಫ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆರಿಫ್ ರಸ್ತೆ ಮೇಲೆ ಬಿದ್ದಿದ್ದಾನೆ. ಇದೇ ವೇಳೆ ಕಾಯುತ್ತಾ ಕುಳಿತಿದ್ದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತಲೆಯ ಭಾಗಕ್ಕೆ ಹಲ್ಲೆ ನಡೆಸಿ ಬರ್ಬರವಾಗಿ Murder ಮಾಡಿದ್ದಾರೆ. ಇನ್ನು ಕೊಲೆಗೈದ ಬಳಿಕ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.

READ THIS : ನೀನೊಬ್ಬ ಸೈಕೋ, ರೇ*ಸ್ಟ್ – ಮುನಿರತ್ನ ವಿರುದ್ಧ ರೊಚ್ಚಿಗೆದ್ದ ಡಿಕೆಶಿ
ಪ್ರಕರಣ ದಾಖಲು
ಇನ್ನು ಘಟನಾ ಸ್ಥಳಕ್ಕೆ ಉಳ್ಳಾಲ ಠಾಣೆ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಹತ್ಯೆಗೆ ಗ್ಯಾಂಗ್ವಾರ್ ಕಾರಣಾನಾ?
ಆರಿಫ್ ವಿರುದ್ಧ ಈ ಹಿಂದೆಯೂ ಹಲವು ಪ್ರಕರಣಗಳು ದಾಖಲಾಗಿದ್ದವು. 2022ರಲ್ಲಿ ಉಚ್ಚಿಲ ಸೇತುವೆ ಸಮೀಪ ಅವನ ಮೇಲೆ ಕೊಲೆ ಯತ್ನವೂ ನಡೆದಿತ್ತು. ಹೀಗಾಗಿ ಈ ಹತ್ಯೆಗೆ ಗ್ಯಾಂಗ್ವಾರ್ ಹಿನ್ನೆಲೆ ಇರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ನಿಖರ ಕಾರಣ ತನಿಖೆಯ ಬಳಿಕವಷ್ಟೆ ತಿಳಿಯಬೇಕಿದೆ.

MUST WATCH : ಹೆತ್ತೇನಹಳ್ಳಿ ದೇಗುಲದಲ್ಲಿ ಕಳ್ಳತನದ ಬಳಿಕ ಇದೆಂಥಾ ಗಲಾಟೆ- ದೇವಿಗಾಗಿ ಸಾಯಲು ರೆಡಿ ಎಂದ ದೇವಿಯ ಪರಮ ಭಕ್ತ..!




