DK Shivakumar Vs Munirathna | ಡಿಕೆಶಿ ಆರೋಪಕ್ಕೆ ಸಿಡಿದು ಕೆಂಡವಾದ ಮುನಿರತ್ನ.

ರಾಜ್ಯ ರಾಜಕಾರಣದಲ್ಲಿ ಬದ್ಧ ವೈರಿಗಳಂತೆ ಗುದ್ದಾಡುವ ಡಿಕೆಶಿ ಹಾಗೂ ಮುನಿರತ್ನ ಫೈಟ್ ಸದನವನ್ನೇ ಅಲ್ಲೋಲ-ಕಲ್ಲೋಲ ಮಾಡಿದೆ. ವಿಧಾನಸಭೆ ಕಲಾಪದ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಬಿಜೆಪಿ ಶಾಸಕ ಮುನಿರತ್ನ ನಡುವೆ ವಾಕ್ಸಮರ ತಾರಕ್ಕೇರಿದ.
ನೀನೊಬ್ಬ ರೇಪಿಸ್ಟ್
ಮುನಿರತ್ನ ಕೇಸ್ಗಳ ಬಗ್ಗೆ ಮಾತಾಡೋದು ಬೇಕಾದಷ್ಟಿದೆ ಎಂದು ಡಿಕೆಶಿ ಮಾತು ಶುರು ಮಾಡ್ತಿದ್ದಂತೆ, ಅದೇನ್ ಹೇಳ್ತಿರೋ ಎಲ್ಲಾ ಹೇಳಿ ಎಂದು ಮುನಿರತ್ನ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಸಿಟ್ಟಾದ ಡಿಸಿಎಂ ಡಿಕೆ ಶಿವಕುಮಾರ್, ನೀನೊಬ್ಬ ರೇಪಿಸ್ಟ್ ಎಂದಿದ್ದಾರೆ. ಡಿಕೆಶಿ ಮಾತು ಸದನದಲ್ಲಿ ಭಾರೀ ಗದ್ದಲಕ್ಕೆ ಕಾರಣವಾಗಿದೆ.

DK Vs Munirathna ವಾರ್
ಮುನಿರತ್ನ ಕೇಸ್ ಬಗ್ಗೆ ಚರ್ಚೆ ಮಾಡ್ಬೇಕು ಅಂದ್ರೆ ಮಾಡೋಕೆ ರೆಡಿ ಎಂದು ಡಿಕೆ ಶಿವಕುಮಾರ್ ಹೇಳಿದ್ದು, ಅದೇನ್ ಹೇಳ್ತೀರಾ ಎಲ್ಲವನ್ನೂ ಹೇಳಿ ಎಂದ ಶಾಸಕ ಮುನಿರತ್ನ ರೊಚ್ಚಿಗೆದ್ರು. ಬಳಿಕ ಆಯ್ತಣ್ಣ ಮುನಿರತ್ನ ಕೂತ್ಕೊಳ್ಳಣ ಎಂದು ಡಿಸಿಎಂ ಡಿಕೆಶಿ ಸಿಟ್ಟು ಪ್ರದರ್ಶಿಸಿದ್ದಾರೆ.
READ THIS : ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ!
ಬಿಜೆಪಿ ಸದಸ್ಯರು ಆಕ್ಷೇಪ
ಈ ವೇಳೆ ಎಫ್ಐಆರ್ನಲ್ಲಿ ಉಲ್ಲೇಖಗೊಂಡಿರುವ ಆರೋಪಗಳನ್ನು ಉಲ್ಲೇಖಿಸಿ ಡಿಕೆ ಶಿವಕುಮಾರ್ ಮಾತನಾಡಲು ಆರಂಭಿಸಿದಾಗ, ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ವಿಶೇಷವಾಗಿ ಆರ್. ಅಶೋಕ್ ಹಾಗೂ ಅಶ್ವಥ್ ನಾರಾಯಣ್ ತೀವ್ರ ವಿರೋಧ ವ್ಯಕ್ತಪಡಿಸಿದರು.

ನನ್ನ ವಿರುದ್ಧದ ಕೇಸ್ಗಳು ಇವರ ಪಾಪದ ಕೆಲಸ
ಇದಕ್ಕೆ ಪ್ರತಿಯಾಗಿ ಮುನಿರತ್ನ ತೀವ್ರ ವಾಗ್ದಾಳಿ ನಡೆಸಿ, ತಮ್ಮ ಮೇಲೆ ಹಾಕಿರುವ ಎಲ್ಲಾ ಪ್ರಕರಣಗಳು ರಾಜಕೀಯ ಪ್ರೇರಿತ ಎಂದು ಆರೋಪಿಸಿದರು. “ನನ್ನನ್ನು ಜೈಲಿಗೆ ಕಳುಹಿಸಿದ್ದು ಇವರೇ, ನನ್ನ ವಿರುದ್ಧದ ಕೇಸ್ಗಳು ಇವರ ಪಾಪದ ಕೆಲಸ” ಇವರಿಗೆ ಮೂರು ಜನ ಮಕ್ಕಳಿದ್ದಾರೆ. ಒಂದೋ ಎರಡೋ ಪಾಪದ ಕೆಲಸ ಮಾಡಿ ಬಂದಿಲ್ಲ ಇವ್ರು, ಎಂದು ಡಿಸಿಎಂ ಡಿಕೆಶಿ ವಿರುದ್ಧ ಮುನಿರತ್ನ ವಾಗ್ದಾಳಿ ನಡೆಸಿದ್ರು.
ನೀನೊಬ್ಬ ರೇಪಿಸ್ಟ್, ನೀನೊಬ್ಬ ಸೈಕೋ
ಸದನದಲ್ಲಿ ಮುನಿರತ್ನ ಹಾಗೂ ಡಿಸಿಎಂ ನಡುವೆ ಮಾತಿಗೆ ಮಾತು ಬೆಳೆಯಿತು. ಈ ವೇಳೆ ಡಿಕೆ ಶಿವಕುಮಾರ್, ನೀನೊಬ್ಬ ರೇಪಿಸ್ಟ್, ನೀನೊಬ್ಬ ಸೈಕೋ ಎಂದು ಮುನಿರತ್ನಗೆ ಬೈದಿದ್ದಾರೆ. ಇದೇ ವೇಳೆ ಡಿಕೆ ಶಿವಕುಮಾರ್ ಮಾತಿಗೆ ಬಿಜೆಪಿ ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದು, ಅವರ ಮಾತುಗಳು ಇಲ್ಲಿ ಸರಿಯಲ್ಲ ಎಂದ ಅಸಮಾಧಾನ ಹೊರಹಾಕಿದ್ರು.
MUST WATCH : K.N. RAJANNA ಪರ H.D. REVANNA ಬ್ಯಾಟಿಂಗ್ – ಮಂತ್ರಿ ಸ್ಥಾನ ಕಿತ್ತುಕೊಂಡಿದ್ದಕ್ಕೆ ಆಕ್ರೋಶ..!





