ವಿದ್ಯಾರ್ಥಿಗಳೇ ಗಮನಿಸಿ – ಮಾ.30ಕ್ಕೆ ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ!

ರಾಜ್ಯದಲ್ಲಿ ಈಗಾಗಲೇ SSLC ಪರೀಕ್ಷೆಗಳು ಆರಂಭವಾಗಿದ್ದು, ಇದೀಗ ಮಾ.30ಕ್ಕೆ ನಡೆಯಬೇಕಿದ್ದ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ಪರೀಕ್ಷಾ ಬೋರ್ಡ್ ಮಾಹಿತಿ ನೀಡಿದೆ.

READ THIS : IPL 2026|ಐಪಿಎಲ್ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಿದ BCCI
SSLC ಹಿಂದಿ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ!
ಮಹಾವೀರ ಜಯಂತಿ ರಜೆ ಹಿಂದೂಡಿಕೆ ಮಾಡಿದ ಹಿನ್ನೆಲೆ ಮಾ.30ಕ್ಕೆ ನಡೆಯಬೇಕಿದ್ದ ಎಸ್ಎಸ್ಎಲ್ಸಿ ತೃತೀಯ ಭಾಷೆ ಹಿಂದಿ ಪರೀಕ್ಷೆಯನ್ನು ಮಾ.31ಕ್ಕೆ ಮುಂದೂಡಿಕೆ ಮಾಡಿದೆ. ಈ ಮೊದಲು ಮಾ.31ಕ್ಕೆ ರಜೆಯಿದ್ದ ಹಿನ್ನೆಲೆ ಮಾ.30ಕ್ಕೆ ಹಿಂದಿ ಪರೀಕ್ಷೆ ನಿಗದಿಯಾಗಿತ್ತು. ಇದೀಗ ಸರ್ಕಾರ ಪರಿಷ್ಕರಣೆ ಮಾಡಿ, ಮಾ.31ರ ರಜೆಯನ್ನು ಮಾ.30ಕ್ಕೆ ಘೋಷಿಸಿದೆ. ಹೀಗಾಗಿ ಪರೀಕ್ಷಾ ದಿನಾಂಕವನ್ನು ಬದಲಿಸಿ, ಮಾ.31ಕ್ಕೆ ನಡೆಸಲು ತೀರ್ಮಾನಿಸಿದೆ.

ವೇಳಾಪಟ್ಟಿ ಗಮನಿಸಿ ಪರೀಕ್ಷೆಗೆ ಸಿದ್ದತೆ
ಇನ್ನು ವಿದ್ಯಾರ್ಥಿಗಳು ಪರಿಷ್ಕೃತ ವೇಳಾಪಟ್ಟಿಯನ್ನು ಗಮನಿಸಿ ಪರೀಕ್ಷೆಗೆ ಸಿದ್ಧರಾಗುವಂತೆ ಮಂಡಳಿ ತಿಳಿಸಿದೆ.
MUST WATCH : KARNATAKA ಸರ್ಕಾರದಿಂದ KERALAಕ್ಕೆ ಮತ್ತೆ ಅನುದಾನ- ಸರ್ಕಾರ ವಿರುದ್ಧ ಮೈತ್ರಿ ನಾಯಕರ ರೋಷಾವೇಶ..!




