ಕೇರಳಕ್ಕೆ 10 ಕೋಟಿ ಅನುದಾನ ಘೋಷಿಸಿದ ಸರ್ಕಾರ – ಕನ್ನಡಿಗರಿಗೆ ದ್ರೋಹ ಮಾಡ್ತಿದೆ ಎಂದು ವಿಪಕ್ಷಗಳು ಕಿಡಿ

ವಯನಾಡು ಭೂಕುಸಿತ ಸಂತ್ರಸ್ತರಿಗೆ ಕರ್ನಾಟಕ ಸರ್ಕಾರ ನೀಡಿರುವ ಹೆಚ್ಚುವರಿ ಅನುದಾನ, ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ವಿರೋಧ ಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಟೀಕೆಗಳನ್ನ ಹೊರ ಹಾಕಿವೆ.
BJP ತೀವ್ರ ಆಕ್ರೋಶ
ಈಗಾಗಲೇ ಕೇರಳ ಸರ್ಕಾರಕ್ಕೆ ಕರ್ನಾಟಕ ಸರ್ಕಾರ 10 ಕೋಟಿ ರೂಪಾಯಿ ಅನುದಾನ ನೀಡಿತ್ತು. ಇದೀಗ ಕೇರಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೇ ಮತ್ತೇ 10 ಕೋಟಿ ರೂಪಾಯಿ ಹೆಚ್ಚುವರಿ ಅನುದಾನ ಘೋಷಿಸಿದ್ದು, ಈ ವಿಚಾರವಾಗಿ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸಿದ್ದರಾಮಯ್ಯ ಅವರು ಹೈಕಮಾಂಡ್ ಮೆಚ್ಚಿಸಲು ರಾಜ್ಯದ ತೆರಿಗೆ ಹಣವನ್ನು ಬಳಸುತ್ತಿದ್ದಾರೆ. ಕುರ್ಚಿ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿರುವ ಸಿದ್ದರಾಮಯ್ಯ ಹೈಕಮಾಂಡ್ ಮೆಚ್ಚಿಸಲು ಕನ್ನಡಿಗರ ತೆರಿಗೆ ದುಡ್ಡನ್ನು, ಪ್ರಿಯಾಂಕ್ ಗಾಂಧಿ ಪ್ರತಿನಿಧಿಸುವ ವಯನಾಡು ಲೋಕಸಭಾ ಕ್ಷೇತ್ರಕ್ಕೆ ನೀಡುವ ಮೂಲಕ ಬೇಕಾಬಿಟ್ಟಿ ಪೋಲು ಮಾಡ್ತಿದ್ದಾರೆ ಎಂದು ಪೋಸ್ಟ್ ಹಾಕಿ ಟೀಕಿಸಿದೆ.
READ THIS : Koratagere|ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಅನ್ನದಾತ ಬಲಿ!

ಕನ್ನಡಿಗರಿಗೆ ಮಹಾದ್ರೋಹ!
ಇನ್ನು ಜೆಡಿಎಸ್ ಪಕ್ಷವು ಕೂಡ ಟೀಕಿಸಿದ್ದು, ರಾಜ್ಯದಲ್ಲಿ ಲಕ್ಷಾಂತರ ಜನರು ಸೂರಿಗಾಗಿ ಕಣ್ಣೀರು ಹಾಕುತ್ತಿದ್ರೆ, ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ವಯನಾಡಿನ ಪುನರ್ವಸತಿಯ ಚಿಂತೆಯಾಗಿದೆ. ಅಲ್ದೇ ಕಳೆದ ವರ್ಷವೂ ವಯನಾಡಿಗೆ 10 ಕೋಟಿ ರೂ. ನೀಡಿದ್ದ ಕಾಂಗ್ರೆಸ್ ಸರ್ಕಾರ, ಮತ್ತೆ ಹೈಕಮಾಂಡ್ ಮೆಚ್ಚಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ರಾಜ್ಯದ ಹಣ ಬಳಸಿಕೊಳ್ಳುತ್ತಿರುವುದು ಕನ್ನಡಿಗರಿಗೆ ಮಾಡುತ್ತಿರುವ ಮಹಾದ್ರೋಹ ಎಂದು ಪೋಸ್ಟ್ ಹಾಕಿದೆ.

ರಾಜಕೀಯ ಚರ್ಚೆ
ಒಟ್ನಲ್ಲಿ ರಾಜ್ಯ ಸರ್ಕಾರದ ಈ ನಡೆ ಇದೀಗ ವಿವಾದಕ್ಕೆ ಕಾರಣವಾಗಿದ್ದು, ಈ ವಿಚಾರ ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕೀಯ ಚರ್ಚೆಗೆ ಎಡೆಮಾಡಿಕೊಟ್ಟಿದೆ.
MUST WATCH : MUSLIM ಮಹಿಳೆ ಮೇಲೆ ಇದೆಂಥಾ ದರ್ಪ ? – HOTEL ಸಿಬ್ಬಂದಿ ಮಹಿಳೆಗೆ ನಿಂದಿಸಿದ್ರಾ ?
ಕೇರಳಕ್ಕೆ 10 ಕೋಟಿ ಅನುದಾನ ಘೋಷಿಸಿದ ಸರ್ಕಾರ




