ಸಾಲಬಾಧೆಗೆ ಮನನೊಂದು ರೈತ Suicide.

ರಾಜ್ಯಾದ್ಯಂತ ಈ ಮೈಕ್ರೋ ಫೈನಾನ್ಸ್ಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗ್ತಿಲ್ಲ. ಸರ್ಕಾರ ಮೈಕ್ರೋ ಫೈನಾನ್ಸ್ ಗಳಿಗೆ ಬಲವಂತವಾಗಿ ಸಾಲ ವಸೂಲಿ ಮಾಡಿ, ಜನರಿಗೆ ಕಿರುಕುಳ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದಕ್ಕೆಂದೆ ರಾಜ್ಯದಲ್ಲಿ ಮೈಕ್ರೋಫೈನಾನ್ಸ್ ಗಳ ಹಾವಳಿಗೆ ಕಡಿವಾಣ ಹಾಕಲು ಸುಗ್ರೀವಾಜ್ಞೆ ತಂದಿದ್ರೂ ಕೂಡ ಇವರ ಕಾಟ ಇನ್ನೂ ತಪ್ಪುತ್ತಿಲ್ಲ.
ಸಾಲಬಾಧೆಗೆ ಮನನೊಂದು ರೈತ Suicide
ಇತ್ತ ಕೊರಟಗೆರೆ ತಾಲೂಕಿನ ಸಿ.ಎನ್. ದುರ್ಗಾ ಹೋಬಳಿಯ ಜೋನಿಗರಹಳ್ಳಿ ಗ್ರಾಮದಲ್ಲಿ ರೈತನೋರ್ವ ಸಾಲಬಾಧೆಗೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.

READ THIS : ಘೋರ ದುರಂತ.. ಲಾರಿ-ಬಸ್ ಅಪಘಾತದಲ್ಲಿ 12 ಮಂದಿ ಸಜೀವ ದಹನ
ಸಾಲ ವಸೂಲಿ ಮಾಡುವ ಏಜೆಂಟ್ಗಳು ನಿರಂತರ ಒತ್ತಡ
ಇನ್ನು Suicide ಮಾಡಿಕೊಂಡ ಮೃತ ರೈತನನ್ನುರಮೇಶ್ ಎನ್ನಲಾಗಿದ್ದು, ಇವರು ಕೃಷಿಯನ್ನು ನಂಬಿ ಜೀವನ ನಡೆಸುತ್ತಿದ್ದರು. ಹೀಗಾಗಿ ಕೃಷಿ ಹಾಗೂ ಹಸು ಸಾಕಾಣಿಕೆಗೆ ಹಲವು ಮೈಕ್ರೋ ಫೈನಾನ್ಸ್ ಸಂಘ ಸಂಸ್ಥೆಗಳಿಂದ ಸಾಲ ತೆಗೆದುಕೊಂಡಿದ್ದರಂತೆ. ಇತ್ತೀಚೆಗೆ ಹಸುಗಳಿಗೆ ಕಾಯಿಲೆ ಬಂದು ಸುಮಾರು 20 ಹಸುಗಳು ಸಾವನ್ನಪ್ಪಿದ ಪರಿಣಾಮ ದೊಡ್ಡ ಆರ್ಥಿಕ ನಷ್ಟ ಉಂಟಾಗಿದೆ. ಇದ್ರಿಂದ ಸಾಲ ತೀರಿಸಲು ಸಾಧ್ಯವಾಗದೇ ಸಂಕಷ್ಟಕ್ಕೊಳಗಾಗಿದ್ದ ರಮೇಶ್ ಅವರಿಗೆ, ಸಾಲ ವಸೂಲಿ ಮಾಡುವ ಏಜೆಂಟ್ಗಳು ನಿರಂತರ ಒತ್ತಡ ಹಾಕಿದ್ದು, ಇದ್ರಿಂದ ಮನನೊಂದು ರಮೇಶ್ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತ ರಮೇಶ್ ಅವರ ಅಣ್ಣ ಹೇಳಿದ್ದೇನು?
ಇನ್ನು ಮೃತ ರಮೇಶ್ ಅವರ ಅಣ್ಣ ನಾಗರಾಜ್ ಮಾತನಾಡಿ, ನನ್ನ ತಮ್ಮ ಉತ್ತಮ ರೈತನಾಗಬೇಕು ಎಂಬ ಆಸೆಯಿಂದ ಹಲವಾರು ಮೈಕ್ರೋ ಪೈನಾನ್ಸ್ಗಳಲ್ಲಿ ಸಾಲ ಪಡೆದು ಹಸು ಸಾಕಾಣಿಕೆ ಮತ್ತು ಕೃಷಿ ಮಾಡುತ್ತಿದ್ದ, ಅಲ್ದೇ ಮನೆ ಮೇಲೂ ಕೂಡ ಸಾಲ ತೆಗೆದುಕೊಂಡಿದ್ದ, ಆದ್ರೆ ಕೃಷಿಯಲ್ಲಿ ನಷ್ಟ ಉಂಟಾಗಿ ಸಾಲ ತೀರಿಸಲು ಸಾಧ್ಯವಾಗದೇ ನೇಣಿಗೆ ಶರಣಾಗಿದ್ದಾನೆ ಎಂದರು.

ಪ್ರಕರಣ ದಾಖಲು
ಸದ್ಯ ವಿಷಯ ತಿಳಿದು ಕೊರಟಗೆರೆ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.
MUST WATCH : ಜನರ ಮೇಲೆ ಏಕಾಏಕಿ ಹೆಜ್ಜೇನು ATTACK – ಗಾಯಗೊಂಡವರ ಸ್ಥಿತಿ ಹೇಗಿದೆ ನೋಡಿ ?




