Accident : ಟಿಪ್ಪರ್ಗೆ ಬಸ್ ಡಿಕ್ಕಿ – 12 ಮಂದಿ ಸಜೀವ ದಹನ!

ಇತ್ತೀಚೆಗೆ ಖಾಸಗಿ ಬಸ್ಗಳಿಗೆ ಬೆಂಕಿ ಹೊತ್ತಿಕೊಳ್ಳುವ ಪ್ರಕರಣಗಳು ಹೆಚ್ಚಾಗಿದ್ದು, ಆಂಧ್ರಪ್ರದೇಶದಲ್ಲಿ ಅದೇ ರೀತಿಯ ಮತ್ತೊಂದು ಪ್ರಕರಣ ನಡೆದಿದೆ.
ಆಂಧ್ರದ ಮಾರ್ಕಪುರಂನಲ್ಲಿ ಹೊತ್ತಿ ಉರಿದ ಬಸ್
ಖಾಸಗಿ ಬಸ್ವೊಂದು ಟಿಪ್ಪರ್ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಪರಿಣಾಮ, ಅದರಲ್ಲಿದ್ದ ಕನಿಷ್ಠ 12 ಮಂದಿ ಸಜೀವ ದಹನವಾಗಿ, 20 ಜನರು ಗಾಯಗೊಂಡಿರುವ ದುರ್ಘಟನೆ ಆಂಧ್ರಪ್ರದೇಶದ ಮಾರ್ಕಪುರಂ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಘಟನೆಯ ವಿವರ – Accident
ಹರಿಕೃಷ್ಣ ಟ್ರಾವೆಲ್ಸ್ಗೆ ಸೇರಿದ ಈ ಖಾಸಗಿ ಬಸ್ ತೆಲಂಗಾಣದ ನಿರ್ಮಲ್ನಿಂದ ನೆಲ್ಲೂರಿನತ್ತ ಪ್ರಯಾಣಿಸುತ್ತಿತ್ತು. ಇದೇ ವೇಳೆ ಜಲ್ಲಿ ತುಂಬಿದ್ದ ಟಿಪ್ಪರ್ಗೆ ಡಿಕ್ಕಿ ಹೊಡೆದಿದೆ. ಇನ್ನು ಡಿಕ್ಕಿಯ ಹೊಡೆದ ತೀವ್ರತೆಗೆ ಬಸ್ ತಕ್ಷಣವೇ ಬೆಂಕಿಗೆ ಆಹುತಿಯಾಗಿ, ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ.
READ THIS : ಅವಧಿಗೂ ಮುನ್ನ ಶಾಸಕರ ಫೋಟೋ ಶೂಟ್! ಇದರ ಹಿಂದೆ ಅಡಗಿದೆಯೇ ಬಿಗ್ ಟ್ವಿಸ್ಟ್?
ಇನ್ನು ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಮಗ್ರ ತನಿಖೆ ನಡೆಸುವಂತೆ ಆಗ್ರಹ
Accident ಬಗ್ಗೆ ಮಾಹಿತಿ ಪಡೆದ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರ ಬಾಬು ನಾಯ್ಡು ಅವರು ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅಪಘಾತದ ಕಾರಣ ಕುರಿತು ಸಮಗ್ರ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.
ಸೋಷಿಯಲ್ ಮಿಡಿಯಾದಲ್ಲಿ ವೈರಲ್
ಪೊಲೀಸರ ಪ್ರಕಾರ, ಬಸ್ ತೆಲಂಗಾಣದ ನಿರ್ಮಲ್ ನಿಂದ ಆಂಧ್ರಪ್ರದೇಶದ ನೆಲ್ಲೂರಿಗೆ ಪ್ರಯಾಣಿಸುತ್ತಿತ್ತು. ಬಸ್ ಟಿಪ್ಪರ್ಗೆ ಡಿಕ್ಕಿ ಹೊಡೆದ ತೀವ್ರತೆ ಎಷ್ಟಿತ್ತೆಂದರೆ ಯಾರೊಬ್ಬರೂ ತಪ್ಪಿಸಿಕೊಳ್ಳಲು ಅವಕಾಶವೇ ಇರಲಿಲ್ಲ. ಹೀಗಾಗಿ ಇಡೀ ಬಸ್ ಕ್ಷಣಾರ್ಧದಲ್ಲಿ ಬೂದಿಯಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವುದಾಗಿ ತಿಳಿಸಿದ್ದಾರೆ. ಬಸ್ ಹೊತ್ತಿ ಉರಿಯುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿವೆ.

MUST WATCH : ತುಮಕೂರಿನಲ್ಲಿ ಲೋಕಾ ಅಧಿಕಾರಿಗಳ RAID – RED HAND ಆಗಿ ಸಿಕ್ಕಿಬಿದ್ದ ಆರೋಗ್ಯ ಇಲಾಖೆ ಅಧಿಕಾರಿ




