Bengaluru : ಅವಧಿಗೂ ಮುನ್ನ ಶಾಸಕರ ಫೋಟೋ ಶೂಟ್..! ಫೋಟೋಶೂಟ್ನಿಂದ ರಾಜಕೀಯದಲ್ಲಿ ದೊಡ್ಡ ಸಂಚಲನ – ಫೋಟೋಶೂಟ್ ಹಿಂದಿದ್ಯಾ ರಾಜಕೀಯದ ಬಿಗ್ ಟ್ವಿಸ್ಟ್

Bengaluru : ಐದು ವರ್ಷಗಳ ಅವಧಿಯ ಸರ್ಕಾರದ ಕೊನೆಯ ಅಧಿವೇಶನದ ವೇಳೆ ಶಾಸಕರು ವಿಧಾನಸೌಧ ಮುಂಭಾಗದಲ್ಲಿ ಕೂತು ಫೋಟೋಶೂಟ್ ಮಾಡಿಸಿಕೊಳ್ಳುವುದು ಸಾಮಾನ್ಯವಾದದ್ದು. ಆದ್ರೆ ಈ ಬಾರಿ ಮಧ್ಯಂತರದಲ್ಲೇ ಫೋಟೋಶೂಟ್ ನಡೆದಿರುವುದು ರಾಜಕೀಯದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿ ಮಾಡಿದೆ.
ಎಲ್ಲಾ ಶಾಸಕರು ಫೋಟೊಗೆ ಫೋಸ್
ಐದು ವರ್ಷಗಳ ಅವಧಿ ಮುಕ್ತಾಯವಾಗುವ ಕೊನೆಯ ಅಧಿವೇಶನದ ಸಂದರ್ಭದಲ್ಲಿ ರಾಜಧಾನಿಯ ಶಕ್ತಿ ಕೇಂದ್ರವಾದ ವಿಧಾನಸೌಧದ ಭವ್ಯವಾದ ಮುಖ್ಯ ಮೆಟ್ಟಿಲುಗಳ ಮೇಲೆ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲಿದ್ದು, ಎಲ್ಲಾ ಶಾಸಕರು ಫೋಟೊಗೆ ಫೋಸ್ ಕೊಡ್ತಾರೆ. ಆದ್ರೆ ಈ ಬಾರಿ ಮಧ್ಯಂತರ ಅವಧಿಯಲ್ಲೇ ಫೋಟೋಶೂಟ್ ನಡೆದಿರುವುದು ತೀವ್ರ ಗಮನ ಸೆಳೆದಿದೆ.
READ THIS : LPG ಗ್ಯಾಸ್ ಬುಕ್ಕಿಂಗ್ ಅವಧಿಯಲ್ಲಿ ಯಾವುದೇ ಬದಲಾವಣೆ ಇಲ್ಲ..!!

ಕಾಂಗ್ರೆಸ್ ಪಾಳಯದಲ್ಲೇ ಗುಸುಗುಸು
ಇಂದು ಶಾಸಕರ ಫೋಟೋಶೂಟ್ ನಡೆದಿದ್ದು, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಸಭಾಧ್ಯಕ್ಷರಾದ ಯು.ಟಿ ಖಾದರ್ , ವಿಪಕ್ಷ ನಾಯಕ ಆರ್.ಅಶೋಕ್ ಸೇರಿ ಆಡಳಿತ ಹಾಗೂ ಪ್ರತಿಪಕ್ಷದ ಶಾಸಕರು ಒಟ್ಟಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ವಿಶೇಷವಾಗಿತ್ತು. ಆದ್ರೆ ಮಧ್ಯಂತರ ಅವಧಿಯಲ್ಲೇ ಶಾಸಕರ ಫೋಟೋಶೂಟ್ ನಡೆದಿರುವುದು ಗಮನ ಸೆಳೆದಿದ್ದು, ಕಾಂಗ್ರೆಸ್ ಪಾಳಯದಲ್ಲೇ ಗುಸುಗುಸು ಮಾತುಗಳು ಕೇಳಿ ಬರ್ತಿವೆ.
ಒಳಗೊಳಗೆ ಕುರ್ಚಿ ಕಚ್ಚಾಟ
ಈಗಾಗಲೇ ಕಳೆದ ಕೆಲ ತಿಂಗಳುಗಳಿಂದ ಸಿಎಂ ಕುರ್ಚಿ ಕಚ್ಚಾಟ ಅನ್ನೋದು ತಾರಕ್ಕೇರಿದ್ದು, ಹೈಕಮಾಂಡ್ ಮಧ್ಯಪ್ರವೇಶದ ಬಳಿಕ ಕುರ್ಚಿ ಕಚ್ಚಾಟಕ್ಕೆ ಬ್ರೇಕ್ ಬಿದ್ದಿದೆ ಆದ್ರು ಕೂಡ ಕಾಂಗ್ರೆಸ್ ಪಾಳಯದಲ್ಲಿ ಒಳಗೊಳಗೆ ಕುಚ್ಚಿ ಕಚ್ಚಾಟ ಅನ್ನೋದು ನಡೆಯುತ್ತಲೇ ಇದ್ದು, ಈ ಮಧ್ಯೆ ಫೋಟೋಶೂಟ್ ನಡೆದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇತ್ತ ಕೆಲವರು ಇದು ಭವಿಷ್ಯದ ರಾಜಕೀಯ ಬದಲಾವಣೆಗಳಿಗೆ ಸೂಚನೆ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸ್ತಾ ಇದ್ದಾರೆ.

ಸ್ಪೀಕರ್ ಬದಲಾವಣೆ ಸಾಧ್ಯತೆ
ಇನ್ನು ಈ ಹಿಂದೆ ಸಿಎಂ ಅಥವಾ ಸ್ಪೀಕರ್ ಬದಲಾವಣೆ ಸಾಧ್ಯತೆ ಇರುವಾಗ ಇಂತಹ ಫೋಟೋಶೂಟ್ಗಳು ನಡೆದಿರುವ ಉದಾಹರಣೆಗಳಿವೆ ಎನ್ನಲಾಗುತ್ತಿದೆ. ಈ ಹಿನ್ನೆಲೆ ಈ ಬಾರಿ ನಡೆದ ಫೋಟೋಶೂಟ್ಗೂ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
MUST WATCH : ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದ್ರು, ಇಲ್ಲಿನ ಜನರಿಗೆ ಮೂಲ ಸೌಕರ್ಯಗಳೇ ಸಿಕ್ಕಿಲ್ಲ..!




