LPG ಗ್ಯಾಸ್ ಬುಕ್ಕಿಂಗ್ ಅವಧಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ..

LPG ಬುಕ್ಕಿಂಗ್ ಅವಧಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ವರದಿಗಳು ತಪ್ಪಾಗಿದ್ದು, ಯಾವುದೇ ರೀತಿಯ ಬದಲಾವಣೆಗಳಾಗಿಲ್ಲ ಎಂದು Government of India ಸ್ಪಷ್ಟನೆ ನೀಡಿದೆ.
ಈ ಕುರಿತು Indian Oil Corporation ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ದೇಶಾದ್ಯಂತ ಎಲ್ಪಿಜಿ ಸರಬರಾಜಿನಲ್ಲಿ ಯಾವುದೇ ಸಮಸ್ಯೆ ಇಲ್ಲವೆಂದು ತಿಳಿಸಿದೆ.
MUST READ : Kalaburagi : ಕಬ್ಬು ನಾಟಿ ಮಾಡುತ್ತಿದ್ದಾಗ ಸಿಡಿಲು ಬಡಿದು ಯುವಕ ಸಾವು..!!

LPG ರಿಫೀಲ್ ಅವಧಿ ಯಥಾಸ್ಥಿತಿಯಲ್ಲೇ ಮುಂದುವರಿಕೆ
ಪ್ರಸ್ತುತ ಜಾರಿಯಲ್ಲಿರುವ ಎಲ್ಪಿಜಿ ರಿಫೀಲ್ ಬುಕ್ಕಿಂಗ್ ಅವಧಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಹೀಗಾಗಿ, ಜನರು ಗಾಬರಿಗೊಂಡು ಮುಂಚಿತವಾಗಿ ಗ್ಯಾಸ್ ಬುಕ್ ಮಾಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶಾದ್ಯಂತ ಎಲ್ಪಿಜಿ ಸ್ಟಾಕ್ ಸಾಕಷ್ಟು ಲಭ್ಯವಿದ್ದು, ಸರಬರಾಜು ಸಾಮಾನ್ಯ ರೀತಿಯಲ್ಲಿ ನಡೆಯುತ್ತಿದೆ.

PMUY ಮತ್ತು ನಗರ–ಗ್ರಾಮೀಣ ಪ್ರದೇಶಗಳ ಬುಕ್ಕಿಂಗ್ ಅವಧಿ ವಿವರ
Pradhan Mantri Ujjwala Yojana (ಉಜ್ವಲ ಗ್ಯಾಸ್ ಯೋಜನೆ) ಹಾಗೂ ಇತರ ಬಳಕೆದಾರರಿಗೆ ಇರುವ ಬುಕ್ಕಿಂಗ್ ಅವಧಿಗಳು ಹೀಗಿವೆ:
- PMUY (ಉಜ್ವಲ ಗ್ಯಾಸ್) – 45 ದಿನ
- ನಗರ ಪ್ರದೇಶ – 25 ದಿನ
- ಗ್ರಾಮೀಣ ಪ್ರದೇಶ – 45 ದಿನ
ಈ ಅವಧಿಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಕೇಂದ್ರ ಸರ್ಕಾರ ಪುನಃ ಸ್ಪಷ್ಟಪಡಿಸಿದೆ.

ಅಧಿಕೃತ ಮಾಹಿತಿಗಳ ಮೇಲೆ ಮಾತ್ರ ಗಮನಹರಿಸಲು ಮನವಿ
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ತಪ್ಪು ಮಾಹಿತಿಗಳನ್ನು ನಂಬದೆ, ಅಧಿಕೃತವಾಗಿ ಕಂಪನಿಗಳು ನೀಡುವ ಮಾಹಿತಿಗಳನ್ನೇ ಅನುಸರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಹೀಗಾಗಿ, ಗಾಬರಿಯಿಂದ ಗ್ಯಾಸ್ ಬುಕ್ಕಿಂಗ್ ಮಾಡುವ ಅಗತ್ಯವಿಲ್ಲ.
MUST WATCH : LAYOUT ಮಾಲೀಕರಿಂದ ನಿಯಮ ಉಲ್ಲಂಘನೆ – TUDA ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರಾ ? | TUMAKURU NEWS |




